Advertisement

ವಾಕಿಂಗ್‌ಗೆ ತೆರಳಿದ್ದ ನಟಿ ಪಾರುಲ್‌ ಮೇಲೆ 6 ಬೀದಿ ನಾಯಿಗಳ ದಾಳಿ 

03:58 PM Jan 25, 2017 | Team Udayavani |

ಮುಂಬೈ: ಕನ್ನಡ ನಟಿ ಪಾರುಲ್‌ ಯಾದವ್‌ ಅವರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಮುಂಬೈನ ಜೋಗೇಶ್ವರಿಯಲ್ಲಿರುವ ರಸ್ತೆಯಲ್ಲಿನ ತಮ್ಮ ಅಪಾರ್ಟ್‌ ಮೆಂಟ್‌ ಸಮೀಪ ಸಂಜೆ ವಾಕಿಂಗ್‌ಗೆ ತೆರಳಿದ್ದ ವೇಳೆ ಆರು ಬೀದಿ ನಾಯಿಗಳು ಪಾರುಲ್‌ ಅವರ ಮೇಲೆ ಎರಗಿದ್ದು, ಕೈ, ಮುಖ, ಕಾಲು, ಕುತ್ತಿಗೆಗೆ ಕಚ್ಚಿ ಗಾಯಗಳಾಗಿವೆ. 

Advertisement

ಘಟನೆಯಿಂದ ಪಾರುಲ್‌ ಅವರು ಆಘಾತಕ್ಕೆ ಒಳಗಾಗಿದ್ದು, ಅವರಿಗೆ ಮುಂಬೈನ ಕೋಕಿಲಾ ಬೆನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆಯಲ್ಲಿ ಮೂರು ಸೆಂಟಿ ಮೀಟರ್‌ನಷ್ಟು ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆ್ಯಂಟಿ ರೇಬಿಸ್‌ ಚುಚ್ಚು ಮದ್ದು ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯಿಂದ ಆಕೆಗೆ ಆಘಾತವಾಗಿದೆ ಎಂದು ಸಹೋದರಿಶೀತಲ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next