Advertisement

ತಿ.ನರಸೀಪುರ :ದೇವಾಲಯ ಲೂಟಿಗೈದಿದ್ದ 6  ಮಂದಿ ದರೋಡೆಕೋರರ ಬಂಧನ

06:56 PM Jul 20, 2022 | Team Udayavani |

ಮೈಸೂರು : ಮೈಸೂರು ಜಿಲ್ಲೆ ತಿ.ನರಸೀಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ತಾಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಮ್ಮ ದೇವಸ್ಥಾನದಲ್ಲಿ ನಡೆದಿದ್ದ ಕಳವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಆರು ಮಂದಿ ಆರೋಪಿಗಳ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಓರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Advertisement

ಹದಿನೇಳುವರೆ ಲಕ್ಷ ಬೆಲೆ ಬಾಳುವ ಒಟ್ಟು 484 ಗ್ರಾಂ ಚಿನ್ನದ ಆಭರಣ, ಹುಂಡಿಯಲ್ಲಿ ಕದ್ದಿದ್ದ ನಗದು ಹಣವನ್ನು ವಶ ಪಡಿಸಿಕೊಳ್ಳಲಾಗಿದೆ.ದೇಗುಲದ ಬಾಗಿಲು ಮುರಿದು ದಿನನಿತ್ಯ ದೇವರಿಗೆ ತೊಡಿಸುತ್ತಿದ್ದ ಆಭರಣಗಳನ್ನು ಇರಿಸಿದ್ದ ಬೀರುವನ್ನು ಒಡೆದು ಕಳ್ಳರು ಕದ್ದೊಯ್ದಿದ್ದರು.ದೇಗುಲದಲ್ಲಿ ಅಳವಡಿಸಿದ್ದ ಸಿ ಸಿ ಕ್ಯಾಮರಾ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದು ಸವಾಲಾಗಿತ್ತು.ಕಳ್ಳರ ಹೆಜ್ಜೆ ಜಾಡು ಹಿಡಿಯಲು ವಿವಿಧ ತಂಡಗಳನ್ನು ರಚಿಸಲಾಗಿತ್ತು.

ಪೊಲೀಸರ ಸತತ ಕಾರ್ಯಾಚರಣೆಯಿಂದಾಗಿ ಖದೀಮರು ಸಿಕ್ಕಿ ಬಿದ್ದಿದ್ದು,ಬಂಧಿತರು ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಲ್ಲಿರುವ ದೇಗುಲದಲ್ಲೂ ಕಳ್ಳತನ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ನಂಜನಗೂಡು ತಾಲೂಕಿನ ಚಿನ್ನದಗುಡಿಹುಂಡಿ ಗ್ರಾಮದ ರಾಮವ್ವ ದೇಗುಲ, ಮೈಸೂರಿನ ಆಲನಹಳ್ಳಿ ಠಾಣೆ, ನಂಜನಗೂಡು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಸಂಗತಿಯೂ ಬೆಳಕಿಗೆ ಬಂದಿದೆ.

ಬಂಧಿತರಿಂದ 3 ದ್ವಿಚಕ್ರ ವಾಹನ, 22 ಮೊಬೈಲ್ ಗಳು, ವಿವಿಧ ಮಾದರಿಯ ಚಿನ್ನಾಭರಣ, 3,89,737 ನಗದು ಹಣ, 16,344 ಚಿಲ್ಲರೆ ಹಣ ವಶ ಪಡಿಸಿಕೊಳ್ಳಲಾಗಿದ್ದು, ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next