Advertisement
ರಾಜಕೀಯದಿಂದಗಳಿಸಿದ್ದು ಏನೂ ಇಲ್ಲ. ಬೆಂಗಳೂರಿನ 6 ಆಸ್ತಿ ಮಾರಾಟ ಮಾಡಬೇಕಾಗಿ ಬಂತು ಎನ್ನುವ ಪೂಜಾರಿ, ಎದುರಾಳಿ ಅಭ್ಯರ್ಥಿ ಯಾರಾದರೂ ಚಿಂತೆ ಇಲ್ಲ. ಅಭಿವೃದ್ಧಿ ಕಾರ್ಯಗಳಿಂದಾಗಿ ಜನತೆಯ ಬೆಂಬಲ ನನ್ನ ಮೇಲಿರುತ್ತದೆ. ಆದ್ದರಿಂದಲೇ ಬೈಂದೂರಿನಲ್ಲಿ ಕಾಂಗ್ರೆಸ್‌ನ ಏಕೈಕ ಟಿಕೇಟ್ ಆಕಾಂಕ್ಷಿ ನಾನು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಹೆರಂಜಾಲು, ಶಂಕರನಾರಾಯಣ, ಸಿದ್ದಾಪುರ ದಲ್ಲಿ ಆಶ್ರಮ ಶಾಲೆಗಳಾಗು ತ್ತಿವೆ. ಶೈಕ್ಷಣಿಕ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದ್ದು, ಗಂಗನಾಡು ಪದವಿ ಕಾಲೇಜಿಗೆ ನ್ಯಾಕ್ ಸಮಿತಿ “ಬಿ’ ಮಾನ್ಯತೆ ನೀಡಿದೆ. ಶಂಕರನಾರಾಯಣ ಕಾಲೇಜಿಗೆ “ಎ’ ಮಾನ್ಯತೆಗೆ ಯತ್ನಿಸಲಾಗುತ್ತಿದೆ. ಆರ್‌ಟಿಒ ಬೇಡಿಕೆಯಿದೆ
ಬೈಂದೂರಿನಲ್ಲಿ ಆರ್‌ಟಿಒ ರಚಿಸಬೇಕೆಂಬ ಬೇಡಿಕೆ ಇಡಲಾಗಿದೆ. ಅಗ್ನಿಶಾಮಕ ಠಾಣೆ ಮಂಜೂರಾಗಿದೆ.ಜನರ ಬಳಿಗೆ ಸರಕಾರ ಜನಸ್ಪಂದನ, ಅದಾಲತ್ ಮೂಲಕ ಸರಕಾರವನ್ನೇ ಜನರ ಬಳಿ ತಲುಪಿಸಿದ್ದೇನೆ. ಕಂದಾಯ ಸಚಿವರೇ ಆಗಮಿಸಿ ಬಿಪಿಎಲ್ ಪಡಿತರ ಚೀಟಿಯ ಮಾನದಂಡ ಬದಲಾಯಿಸಿದ್ದು, ಸಾವಿರಾರು ಮಂದಿಗೆ ಪ್ರಯೋಜನ ವಾಗಿದೆ. 94ಸಿ ಯೋಜನೆಗೆ ಖುದ್ದು ಪಂಚಾಯತ್‌ಗೆ ತೆರಳಿ ಸಭೆಗಳ ಮೂಲಕ 3,000 ಫಲಾನುಭವಿಗಳನ್ನು ನಿಷ್ಪಕ್ಷವಾಗಿ ಆಯ್ಕೆ ಮಾಡಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆಯಲ್ಲಿ 25 ಕಿಮೀ. ರಸ್ತೆಯಾಗಿದೆ. ಎಲ್ಲೂರಿನಲ್ಲಿ 33 ಕೆವಿ ವಿದ್ಯುತ್ ಸಬ್‌ಸ್ಟೇಶನ್, 2.4 ಕೋ.ರೂ.ಗಳ ಮೆಸ್ಕಾಂ ವಸತಿನಿಲಯ, ಬೈಂದೂರು ವಿದ್ಯುತ್ ವಿತರಣೆ ಕೇಂದ್ರ ಮೇಲ್ದರ್ಜೆಗೆ, ಬೈಂದೂರು ನಗರಕ್ಕೆ ಪ್ರತ್ಯೇಕ ಲೈನ್ ಅಳವಡಿಸಲಾಗಿದೆ.
Related Articles
ಕಳೆದ ವರ್ಷ ಅಧಿಕಾರ ಸ್ವೀಕರಿಸುವಾಗ ಕೆಎಸ್‌ಆರ್‌ಟಿಸಿ 138 ಕೋ.ರೂ. ನಷ್ಟದ ಲ್ಲಿತ್ತು. ಡೀಸೆಲ್ ದರ ಏರಿದ್ದರೂ ನೌಕರರಿಗೆ ಶೇ. 12.5 ವೇತನ ಏರಿಸಿ ಪ್ರಯಾಣ ದರ ಏರಿಸದೆ ಫೆಬ್ರವರಿಗೆ ನಷ್ಟ ಸರಿ ದೂಗಿಸಿ 15 ಕೋ.ರೂ. ಲಾಭ ಬಂದಿದೆ. ಶಿವಮೊಗ್ಗದಿಂದ ಆಗುಂಬೆ ಮೂಲಕ ಉಡುಪಿಗೆ ಬಸ್ ಆರಂಭಿಸಲಾಗಿದೆ. ಉಡುಪಿಗೆ 34 ಕೋ.ರೂ.ಗಳ ಬಸ್ ನಿಲ್ದಾಣ, 6 ಕೋ.ರೂ. ಒಳ ಬಸ್ ನಿಲ್ದಾಣ ಮಂಜೂರಾಗಿದ್ದು, ಕುಂದಾಪುರ ಬಸ್ ತಂಗುದಾಣ ಅಭಿವೃದ್ಧಿಗೆ 1.5 ಕೋ.ರೂ. ಮಂಜೂರಾಗಿದೆ. ಕಾಪುವಿಗೆ ಹೊಸ ನಿಲ್ದಾಣ ಆಗಲಿದೆ. ಬೈಂದೂರು ಬಸ್ ನಿಲ್ದಾಣಕ್ಕೆ 8.32 ಜಾಗ ಮೀಸಲಿಟ್ಟಿದ್ದು, 5 ಕೋ.ರೂ. ಮಂಜೂ ರಾಗಿದೆ. ಎಪ್ರಿಲ್‌ನಲ್ಲಿ 7 ಕೋ.ರೂ. ವೆಚ್ಚದ ಡಿಪೋಗೆ ಚಾಲನೆ ದೊರೆಯಲಿದೆ. ನಿಗಮ ನೌಕರರಿಗೆ ಆರೋಗ್ಯ ತಪಾಸಣೆಗೆ ಜಯದೇವ ಆಸ್ಪತ್ರೆ ಜತೆ ಒಪ್ಪಂದವಾಗಿದೆ.
Advertisement
ನೀರು ಸರಬರಾಜಿಗೆ ಕಾಳಜಿಕುಡಿಯುವ ನೀರಿನ ಸಮಸ್ಯೆ ಆಗದಂತೆ ಕಾಳಜಿ ವಹಿಸಲಾಗಿದೆ ಎನ್ನುವ ಶಾಸಕರು, ನದಿ ಸಂರಕ್ಷಣೆಗೆ ಜಾಲಾಡಿಯಲ್ಲಿ 50 ಲಕ್ಷ ರೂ. ಕಾಮಗಾರಿಯಾಗಿದ್ದು ಬೆಸ್ಕೂರು, ಪಡುವರಿ, ಸಬ್ಲಾಡಿಗೆ 4 ಕೋ.ರೂ., ಬಟ್ಟೆಕುದ್ರು, ಉಪ್ಪಿನಕುದ್ರು, ಮಾರನಮನೆಗೆ ಅನುದಾನ ಮಂಜೂರಾಗಿದೆ. ಕಿರುಮಂಜೇಶ್ವರದ ಕುಂಬಾರಕೆರೆ, ಬಿಜೂರು ದೇವಸ್ಥಾನದ ಕೆರೆ ಅಭಿವೃದ್ಧಿ ಮಾಡಲಾಗಿದ್ದು, ಅಂಪಾರಿನಲ್ಲಿ ಕುಬಾj ನದಿಗೆ 35 ಲಕ್ಷ ರೂ. ಕಿಂಡಿ ಅಣೆಕಟ್ಟು ಮಂಜೂರಾಗಿದೆ ಎನ್ನುತ್ತಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ವಾರಾಹಿಯಿಂದ 63 ಕೋ.ರೂ. ಮಂಜೂರಾಗಿದ್ದು ಸಿದ್ದಾಪುರ, ಸೌಕೂರು, ಕೆಂಚನೂರು, ತಲ್ಲೂರಿನ ನೀರಿನ ಆವಶ್ಯಕತೆ ಪೂರೈಸಲಿದೆ. ಬೈಂದೂರು, ಯಡ್ತರೆ, ಮಂಜಾರು, ಪಡುವರಿಗೆ ಮಂಜೂರು ಹಂತದಲ್ಲಿದೆ. ವಾರಾಹಿ ಏತ ನೀರಾವರಿ ಎರಡನೇ ಹಂತ ಕಾಲುವೆ ರಚನೆಗೆ 279 ಕೋ.ರೂ. ಕಾಮಗಾರಿಗೆ ಟೆಂಡರ್ ಆಗಿದೆ. ಸಮುದ್ರನೀರನ್ನು ಶುದ್ಧೀಕರಿಸಿ ಸಿಹಿನೀರು ವಿತರಿಸಲು 31 ಕೋ.ರೂ.ಗಳ ವಿದೇಶೀ ಯಂತ್ರ ಶೀಘ್ರ ಬರಲಿದ್ದು, ಶಿರೂರಿನ ಮನೆ ಮನೆಗೆ ನೀರು ದೊರೆಯಲಿದೆ. ಪಶ್ಚಿಮವಾಹಿನಿಯಲ್ಲಿ 14 ಕೋ.ರೂ., ಬಿಜೂರಿನಲ್ಲಿ 5 ಕೋ.ರೂ., ಶಾನಾಪುರದಲ್ಲಿ 8 ಕೋ.ರೂ.ಗಳ ಕಿಂಡಿ ಅಣೆಕಟ್ಟು, ಆಜ್ರಿ, ನೂಜಾಡಿಯಲ್ಲಿ ಆಗಿದೆ. ಬಂದರು ಅಭಿವೃದ್ಧಿ
ಗಂಗೊಳ್ಳಿ ಬಂದರಿಗೆ 102 ಕೋ.ರೂ., ಕೊಡೇರಿಗೆ 33 ಕೋ.ರೂ., ಅಳ್ವೆಗದ್ದೆಗೆ 10 ಕೋ.ರೂ. ನೀಡಲಾಗಿದ್ದು ಜೆಟ್ಟಿ ನಿರ್ಮಾಣಕ್ಕೆ 10 ಕೋ.ರೂ. ಮಂಜೂರಾಗಿದೆ. ಶಿರೂರಿನಿಂದ ಗಂಗೊಳ್ಳಿಗೆ, ಕರಾವಳಿ ದೊಂಬೆ, ಪಡುವರಿ ಮಡಿ ಕಾಂಕ್ರೀಟ್ ರಸ್ತೆಯಾಗಿದೆ. 27 ಕೋ.ರೂ.ಗಳಲ್ಲಿ ಮರವಂತೆ ತಡೆಗೋಡೆ ರಚಿಸಲಾಗಿದ್ದು, 2ನೇ ಹಂತ ಕಾಮಗಾರಿಗೆ ಪ್ರಸ್ತಾವನೆಯಾಗಿದೆ. ಜತೆಗೆ ಬೀಚ್‌ನಲ್ಲಿ 98 ಕೋ.ರೂ.ಗಳಲ್ಲಿ ಜಪಾನ್ ಮಾದರಿಯಲ್ಲಿ ತಡೆಗೋಡೆ ಕಾಮಗಾರಿ ಆರಂಭವಾಗಿದೆ. ಮಡಿಕಲ್‌ನಲ್ಲಿ ಹೊಸ ಬಂದರು ರಚನೆಗೆ 107 ಕೋ.ರೂ. ಪ್ರಸ್ತಾವ ಆರ್ಥಿಕ ಇಲಾಖೆ ಅನುಮೋದನೆ ಹಂತದಲ್ಲಿದೆ ಎಂದು ಗೋಪಾಲ ಪೂಜಾರಿ. ರಸ್ತೆ, ನೀರಿಗೆ ಆದ್ಯತೆ
ಈ ಬಾರಿ ಮತದಾರರ ಆಶೀರ್ವಾದ ದೊರೆತರೆ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುತ್ತೇನೆ. ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ಹೊಸೂರು ಪರಿಸರದಲ್ಲಿ ಬಾಕಿ ಇರುವ ವಿದ್ಯುದೀಕರಣ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಗೋಪಾಲ ಪೂಜಾರಿ. ಅಭಿವೃದ್ಧಿ ಕಾರ್ಯಗಳು
ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾರ್ಯಗಳು: ಕ್ಷೇತ್ರದ ಎಲ್ಲ ಕಾಲನಿಗಳ ರಸ್ತೆ ಕಾಂಕ್ರೀಟ್‌ಮಯವಾಗಿದೆ. ಆಲೂರು-ಹೇರೂರು, ಶಂಕರನಾರಾಯಣ-ಸೌಡ, ಹಳ್ಳಿಹೊಳೆ-ಕಬ್ಬಿನಾಲೆ, ಅಳಿವೆಕೋಡಿ ಸೇತುವೆಗೆ 36 ಕೋ.ರೂ., ಮಟ್ಟಾಡಿ ನಾಡ, ಮೋರ್ಟು ಬೆಳ್ಳಾಲ, ಕೊಡ್ಲಾಡಿ ಸೇತುವೆಗೆ 12.59 ಕೋ.ರೂ., ಕನ್ನಡಕುದ್ರು-ಸೇತುವೆ, ಹಳ್ಳಿಕೇರಿ-ಮ್ಯಾಕೋಡು ರಸ್ತೆಗೆ 3 ಕೋ.ರೂ., ಜಡ್ಕಲ್-ಮುದೂರು ರಸ್ತೆಗೆ 8 ಕೋ.ರೂ., ವಂಡ್ಸೆ-ಬೆಳ್ಳಾಲ ರಸ್ತೆಗೆ 4 ಕೋ.ರೂ., ಹುಲ್‌ಕಡಿRಗೆ 1 ಕೋ.ರೂ., ಶಿರೂರು-ಕೋಸಳ್ಳಿಗೆ 1 ಕೋ.ರೂ., ಹೆರಂಜಾಲು-ಕಾಲೊ¤àಡಿಗೆ 2 ಕೋ.ರೂ., ನಾೖಕನಕಟ್ಟೆ-ಹೊಸ್ಕೋಟೆಗೆ 2 ಕೋ.ರೂ., ಹಳ್ನಾಡ್- ದೂಪದಕಟ್ಟೆಗೆ 5 ಕೋ.ರೂ. ಮಂಜೂರಾಗಿದೆ. ಶಿರೂರು ಸಂಸದರ ಆದರ್ಶ ಗ್ರಾಮವಾಗಿದೆ. ಸಮೀಕ್ಷೆಯಲ್ಲಿ ರಾಜ್ಯದ ನಂ. 2 ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಹಳ ಬೇಡಿಕೆಯಿದ್ದ ಬೈಂದೂರು ತಾಲೂಕು ರಚನೆಗೆ ಮುನ್ನ ವಿಶೇಷ ತಹಶೀಲ್ದಾರ್ ನೇಮಿಸಿ, ಕಟ್ಟಡಗಳ ರಚನೆ ಮಾಡಲಾಗಿದೆ. ನ್ಯಾಯಾಲಯ, ತಾ.ಪಂ. ರಚನೆಯಾದರೆ ಪರಿಪೂರ್ಣವಾಗಲಿದೆ. – ಲಕ್ಷ್ಮೀ ಮಚ್ಚಿನ