Advertisement

ಚರ್ಚೆ ಇಲ್ಲದೇ 6 ಖಾಸಗಿ ವಿ.ವಿ.ಮಸೂದೆ ಅಂಗೀಕಾರ

10:18 PM Feb 21, 2023 | Team Udayavani |

ಬೆಂಗಳೂರು: ಕಳೆದ ಅಧಿವೇಶನದಲ್ಲಿ ಸ್ವ ಪಕ್ಷದವರಿಂದಲೇ ವಿರೋಧಕ್ಕೆ ಕಾರಣವಾಗಿ ಮುಂದೂಡಲ್ಪಟ್ಟಿದ್ದ ಖಾಸಗಿ ವಿಶ್ವವಿದ್ಯಾನಿಲಯಗಳ ಮಸೂದೆಗಳಿಗೆ ಮಂಗಳವಾರ ವಿಧಾನಸಭೆಯಯಲ್ಲಿ ಅಂಗೀಕಾರ ಪಡೆಯಲಾಯಿತು.

Advertisement

ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥ ನಾರಾಯಣ ಅವರು 2022ನೇ ಸಾಲಿನ ಜಿ.ಎಂ.ವಿಶ್ವವಿದ್ಯಾನಿಲಯ ಮಸೂದೆ, ಕಿಷ್ಕಿಂದ ವಿಶ್ವವಿದ್ಯಾನಿಲಯ ಮಸೂದೆ, ಆಚಾರ್ಯ ವಿಶ್ವವಿದ್ಯಾನಿಲಯ ಮಸೂದೆ, ಸಪ್ತಗಿರಿ ಎನ್‌ಪಿಎಸ್‌ ವಿಶ್ವವಿದ್ಯಾನಿಲಯ ಮಸೂದೆ, ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾನಿಲಯ ಮಸೂದೆ ಹಾಗೂ ಜಾನ್‌ ವಿಶ್ವವಿದ್ಯಾನಿಲಯ ಮಸೂದೆಯನ್ನು ಮಂಡಿಸಿದರು.

ಈ ಹಿಂದೆಯೇ ಮಸೂದೆಗಳ ಉದ್ದೇಶ ವಿವರಣೆ ನೀಡಿದ್ದರಿಂದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತಕ್ಕೆ ಹಾಕಿ ಅಂಗೀಕಾರ ಪಡೆದರು.

 

Advertisement

Udayavani is now on Telegram. Click here to join our channel and stay updated with the latest news.

Next