Advertisement

ಹಾಸನದಲ್ಲಿ 6 ಮಂದಿಗೆ ಸೋಂಕು ದೃಢ

06:52 AM Jul 11, 2020 | Lakshmi GovindaRaj |

ಹಾಸನ: ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಪ್ರತಿದಿನವೂ ಸಾವು ಮತ್ತು ಎರಡಂಕಿಯಲ್ಲಿ ಏರುಮುಖ ಕಾಣುತ್ತಿತ್ತು. ಆದರೆ, ಶುಕ್ರವಾರ ಕೇವಲ 6 ಪ್ರಕರಣಗಳಷ್ಟೇ ವರದಿ ಯಾಗಿದ್ದು, ಸಾವು ಸಂಭವಿಸದಿರು ವುದು ಸ್ವಲ್ಪ  ಸಮಾಧಾನ ತಂದಿದೆ. ಪ್ರತಿದಿನ 15 ರಿಂದ 50 ರವರೆಗೂ ಕಳೆದ 2 ವಾರಗಳಿಂದ ಕೋವಿಡ್‌ 19 ಪ್ರಕರಣ ವರದಿ ಯಾಗುತ್ತಿದ್ದರಿಂದ ಜಿಲ್ಲೆಯ ಜನ ಆತಂಕ ದಲ್ಲಿದ್ದರು. ಅರ್ಧ ದಿನ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೂ ಮುಂದಾಗಿದ್ದರು.

Advertisement

ಆದರೆ  ಶುಕ್ರವಾರದ 6 ಕೋವಿಡ್‌ 19 ವರದಿ ಸಮಾಧಾನದ ಸುದ್ದಿಯಾಗಿದೆ. ವರದಿಯಾದ 6 ಪ್ರಕರಳಗಳಲ್ಲಿ 3 ಅರಸೀಕೆರೆ ತಾಲೂಕಿಗೆ ಸಂಬಂಧಿ ಸಿದ್ದರೆ, ಚನ್ನರಾಯಪಟ್ಟಣ ತಾಲೂ ಕಿನ ಇಬ್ಬರಿಗೆ ಸೋಂಕು ದೃಢ ಪಟ್ಟಿದೆ. ಹಾಸನ ತಾಲೂಕಿನ ಒಬ್ಬರಿಗೆ ಸೋಂಕು  ತಗುಲಿದೆ. ಅರಸೀಕೆರೆ ತಾಲೂಕಿನ 3 ಪ್ರಕರಣಗಳ ಪೈಕಿ ಒಬ್ಬರು ಬೆಂಗಳೂರು ಬಿಎಂಟಿಸಿ ಬಸ್‌ನ ಪ್ರಯಾಣದ ಹಿನ್ನೆಲೆ ಹೊಂದಿದ್ದರೆ, ಇನ್ನೊಬ್ಬರು ಕಂಟೈನ್ಮೆಂಟ್‌ ವಲಯದವರು.

ಚನ್ನರಾಯಪಟ್ಟಣ ತಾಲೂಕಿನ ಒಬ್ಬ ಕೆಎಸ್‌ಆರ್‌ಟಿಸಿ  ಸಿಬ್ಬಂದಿಗೆ ಸೋಂಕು ತಗುಲಿದ್ದರೆ ಇನ್ನುಳಿದವರಿಗೆ ಸೋಂಕಿನವರ ಸಂಪರ್ಕದಿಂದ ಕೋವಿಡ್‌ 19 ಹರಡಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 621 ಮಂದಿಗೆ ಕೋವಿಡ್‌ 19 ಸೋಂಕು ತಗುಲಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. 390 ಮಂದಿ  ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 7 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದು ವರಿದೆ. 216 ಮಂದಿ ಸಾಮಾನ್ಯ ವಾರ್ಡ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ. ಕೆ.ಎಂ. ಸತೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next