ಕೋಲಾರ: ಜಿಲ್ಲೆಯಲ್ಲಿ ಕೋವಿಡ್ 19 ಆತಂಕ ಮುಂದುವರಿದಿದ್ದು, ಬುಧವಾರ 6ಮಂದಿ ಯಲ್ಲಿ ಪಾಸಿಟೀವ್ ಕಂಡು ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 206 ಕ್ಕೇರಿದ್ದು, 4 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೆಜಿಎಫ್‌ನಲ್ಲಿ-3, ಶ್ರೀನಿವಾಸಪುರ ದಲ್ಲಿ 3 ಸೋಂಕಿತ ಪ್ರಕರಣಗಳು ವರದಿಯಾಗಿದೆ.
ಕೆಜಿಎಫ್ ತಾಲೂಕಿನಲ್ಲಿ ಜ್ವರದಿಂದಾಗಿ 56 ವರ್ಷದ ಮಹಿಳೆ, ಉಸಿರಾಟದ ತೊಂದರೆಯಿಂದ 58 ವರ್ಷದ ಮಹಿಳೆ, ಜ್ವರದಿಂದ 56 ವರ್ಷದ ಪುರುಷ ಬಳಲು ತ್ತಿದ್ದು, ಇವರು ಸೋಂಕಿತರಾಗಿ ದ್ದಾರೆ. ಶ್ರೀ ನಿವಾಸಪುರ ತಾಲೂಕಿನಲ್ಲಿ ಅಂತರ ಜಿಲ್ಲಾ ಸಂಪರ್ಕದಿಂದ ಜ್ವರದಿಂದ 44 ವರ್ಷದ ಪುರುಷ, 63 ವರ್ಷದ ಪುರುಷ ಸೋಂಕಿತರಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಜಾಲಪ್ಪ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ 4 ಮಂದಿ ಸೇರಿದಂತೆ ಈವರೆಗೂ ಒಟ್ಟು 93 ಮಂದಿ ಗುಣಮುಖ ರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿದ್ದು, ಕೋಲಾರ ತಾಲೂಕಿನಿಂದ ಪಿ.11183, ಕೆಜಿಎಫ್‌ನ ಪಿ. 11188 ಹಾಗೂ 11189 ಮತ್ತು ಶ್ರೀನಿವಾಸ ಪುರದ ಪಿ.11997 ರೋಗಿಗಳು ಗುಣ ಮುಖರಾಗಿ ಬಿಡುಗಡೆ ಹೊಂದಿ ದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 110 ಆಗಿದೆ.
ತುರ್ತು ನಿಗಾ ಘಟಕದಲ್ಲಿ ಐದು ಸೋಂಕಿತರು ಚಿಕಿತ್ಸೆ ಪಡೆ ಯುತ್ತಿದ್ದಾರೆ. ಓರ್ವ ಮಹಿಳೆ ಸೇರಿ ಮೂರು ಸಾವನ್ನಪ್ಪಿ ದ್ದಾರೆ. ಮತ್ತು ಸಾವು ಸಂಭವಿಸಿದ ನಂತರ ಎರಡು ಪ್ರಕರಣಗಳಲ್ಲಿ ಪಾಸಿಟೀವ್ ಎಂದು ದಾಖಲಾ ಗಿದೆ. ಜಿಲ್ಲೆಯಲ್ಲಿ ಈಗ ಪ್ರಸ್ತುತ 2771 ಮಂದಿ ಯನ್ನು ನಿಗಾವಣೆ ಯಲ್ಲಿ ಇಡಲಾ ಗಿದೆ. ಈವರೆಗೂ ಜಿಲ್ಲೆ ಯಲ್ಲಿ 15012 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 13520 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದೆ.
ಕೆಜಿಎಫ್: ಇಬ್ಬರಿಗೆ ಸೋಂಕು: ನಗರದಲ್ಲಿ ಬುಧವಾರ ಎರಡು ಕೋವಿಡ್ 19 ಪ್ರಕರಣಗಳು ವರದಿಯಾಗಿದೆ. ಸುಮತಿ ನಗರದಲ್ಲಿ ಬೆಮಲ್ ಕಾರ್ಮಿಕರೊಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಅವರು ಮತ್ತೂಬ್ಬ ಸಹದ್ಯೋಗಿಯೊಂದಿಗೆ ಸಖ್ಯ ಹೊಂದಿದ್ದರು.
ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ.ಎಸ್.ಟಿ. ಬ್ಲಾಕ್‌ನಲ್ಲಿ 56 ವರ್ಷದ ಮಹಿಳೆಯೊಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಅವರ ಮಗ ದಿನನಿತ್ಯ ಬೆಂಗ ಳೂರಿಗೆ ಪ್ರಯಾಣ ಮಾಡುತ್ತಿದ್ದರು. ಎದೆ ನೋವಿಗೆಂದು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದಾಗ, ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ 19 ಸೋಂಕು ಇರುವುದು ಪತ್ತೆಯಾಗಿದೆ. ಎರಡೂ ಬಡಾವಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.