Advertisement

ಬಸ್‌ –ಟ್ರಕ್‌ ನಡುವೆ ಭೀಕರ ಅಪಘಾತ: 6 ಮಂದಿ ಮೃತ್ಯು; 20 ಕ್ಕೂ ಹೆಚ್ಚು ಮಂದಿಗೆ ಗಾಯ

11:43 AM Dec 14, 2022 | Team Udayavani |

ಉತ್ತರ ಪ್ರದೇಶ: ಬಸ್‌ – ಟ್ರಕ್‌ ನಡುವಿನ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿ, 21 ಜನರಿಗೆ ಗಾಯವಾದ ಘಟನೆ ಫಿರೋಜಾಬಾದ್ ನಲ್ಲಿ ಬುಧವಾರ(ಡಿ.14 ರಂದು) ನಡೆದಿದೆ.

Advertisement

ಲುಧಿಯಾನ ಮತ್ತು ರಾಯ್ ಬರೇಲಿಯಯಿಂದ 50 ಪ್ರಯಾಣಿಕರನ್ನು ಹೊತ್ತುಕೊಂಡು ಬರುತ್ತಿದ್ದ ಬಸ್ಸಿಗೆ ಆಗ್ರಾ-ಲಖನೌ ದಾರಿಯಲ್ಲಿ ಟ್ರಕ್‌ ಢಿಕ್ಕಿ ಹೊಡೆದಿದೆ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 21 ಮಂದಿ ಪ್ರಯಣಿಕರಿಗೆ ಗಾಯಗಳಾಗಿವೆ.

ಇದನ್ನೂಓದಿ: ತೆನೆ ಹೊರೆ ಬಿಟ್ಟು ಕೈ ಸೇರುವವರೇ ವೈ.ಎಸ್.ವಿ.ದತ್ತ?; ರಾಜಕೀಯ ವಲಯದಲ್ಲಿ ದತ್ತ ಆಪ್ತನ ಆಡಿಯೋ ವೈರಲ್

ಬುಧವಾರ ಮುಂಜಾನೆ 4:30 ರ ವೇಳೆ ಈ ಘಟನೆ ನಡೆದಿದ್ದು, ಚಾಲಕ ಬಸ್‌ ಚಲಾಯಿಸುವಾಗ ಸ್ವಲ್ಪ ನಿದ್ರೆಯಲ್ಲಿ ತೂಕಡಿಸುತ್ತಿದ್ದರು. ಒಮ್ಮೆಗೆ ಬಂದು ಟ್ರಕ್‌ ಬಸ್ಸಿನ ಹಿಂಬದಿಗೆ ಢಿಕ್ಕಿಯಾಗಿದ್ದರಿಂದ ಬಸ್‌ ಪಲ್ಟಿಯಾಗಿದೆ ಎಂದು ವರದಿ ತಿಳಿಸಿದೆ.

ಘಟನಾ ಸ್ಥಳದಿಂದ ಬಸ್ಸನ್ನು ತೆರವುಗೊಳಿಸಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next