ಮುಂಬಯಿ: ಟ್ರಕ್ – ಬಸ್ ನಡುವಿನ ಭೀಕರ ಅಪಘಾತ ಸಂಭವಿಸಿ ಕನಿಷ್ಠ 6 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ಮುಂಬೈ-ನಾಗ್ಪುರ ಹಳೆಯ ಹೆದ್ದಾರಿಯಲ್ಲಿ ಮಂಗಳವಾರ (ಮೇ.23 ರಂದು) ಮುಂಜಾನೆ ನಡೆದಿದೆ.
ಮಂಗಳವಾರ ಮುಂಜಾನೆ 7 ಗಂಟೆಯ ಸುಮಾರಿಗೆ ಮುಂಬೈ-ನಾಗ್ಪುರ ಹಳೆಯ ಹೆದ್ದಾರಿಯ ಬುಲ್ದಾನದ ಸಿಂಧಖೇಡ್ ರಾಜದಲ್ಲಿ ರಾಜ್ಯ ಬಸ್‌ಗೆ ಟ್ರಕ್ ಢಿಕ್ಕಿ ಹೊಡೆದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 13 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:Hyderabad: ಡಾಬರ್ ನಾಯಿ ದಾಳಿ; ಜೀವ ರಕ್ಷಿಸಲು ಮೂರನೇ ಮಹಡಿಯಿಂದ ಹಾರಿದ ಡೆಲಿವರಿ ಏಜೆಂಟ್
ಈ ಅಪಘಾತದಲ್ಲಿ 13 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದು ನಾಗ್ಪುರದ ಎಸ್‌ಪಿ ಎಚ್‌ಎಸ್‌ಪಿ ಹೇಳಿದ್ದಾರೆ.
Related Articles
ಕಳೆದ ತಿಂಗಳು ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಬಸ್ ಹಳ್ಳಕ್ಕೆ ಬಿದ್ದು 13 ಮಂದಿ ಸಾವನ್ನಪ್ಪಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.