ಕ್ಯಾಲಿಫೋರ್ನಿಯಾ: ವಿಮಾನವೊಂದು ಪತನವಾಗಿ ಪೈಲಟ್ ಸೇರಿದಂತೆ ಒಟ್ಟು 6 ಮಂದಿ ಮೃತಪಟ್ಟಿರುವ ಘಟನೆ ಶನಿವಾರ(ಜು.8 ರಂದು) ಲಾಸ್ ಏಂಜಲೀಸ್ ಬಳಿಯ ಮೈದಾನದಲ್ಲಿ ನಡೆದಿರುವುದು ವರದಿಯಾಗಿದೆ.
ಖಾಸಗಿ ಒಡೆತನದ ಸೆಸ್ನಾ C550 ಬಿಸಿನೆಸ್ ವಿಮಾನವು ಲಾಸ್ ವೇಗಾಸ್‌ನಿಂದ ಹೊರಟು ಲಾಸ್ ಏಂಜಲೀಸ್‌ನ ದಕ್ಷಿಣಕ್ಕೆ ಸುಮಾರು 85 ಮೈಲಿ (137 ಕಿಮೀ) ರಿವರ್‌ಸೈಡ್ ಕೌಂಟಿಯ ಫ್ರೆಂಚ್ ವ್ಯಾಲಿ ವಿಮಾನ ನಿಲ್ದಾಣದ ಬಳಿ ಮುಂಜಾನೆ ಸುಮಾರು 4:15 ಗಂಟೆಗೆ ಪತನವಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹೇಳಿದೆ.
ಘಟನೆಯಲ್ಲಿ ಪೈಲಟ್ ಸೇರಿ ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ವಯಸ್ಕರು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ವಾಯುಯಾನ ತನಿಖಾಧಿಕಾರಿ ಎಲಿಯಟ್ ಸಿಂಪ್ಸನ್ ತಿಳಿಸಿದ್ದಾರೆ.
ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ತನಿಖೆಯನ್ನು ನಡೆಸಲಿದೆ. ಮೃತರ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಘಟನೆಯಿಂದ ಅಪಾರ ಪ್ರಮಾಣದ ಬೆಂಕಿ ಹಬ್ಬಿ ಅಕ್ಕಪಕ್ಕದ ಗಿಡಗಳಿಗೂ ಬೆಂಕಿ ತಾಗಿದೆ ಎಂದು ವರದಿ ತಿಳಿಸಿದೆ.
ಇದಕ್ಕೂ ಮೊದಲು ಜು. 4 ರಂದು ಇದೇ ವಿಮಾನ ನಿಲ್ದಾಣದ ಬಳಿ ನಾಲ್ವರಿಂದ ವಿಮಾನ ಪತನವಾಗತ್ತು, ಆ ಘಟನೆಯಲ್ಲಿ ನಾಲ್ವರೂ ಮೃತಪಟ್ಟಿದ್ದರು.