Advertisement

ವಲಸೆ ಹೋಗುವ ಕುಟುಂಬದ ಮಕ್ಕಳಿಗೆ 6 ತಿಂಗಳ ವಸತಿ ಶಿಕ್ಷಣ

12:59 PM Apr 27, 2017 | Harsha Rao |

ಬೆಂಗಳೂರು: ಜೀವನೋಪಾಯಕ್ಕಾಗಿ ಪ್ರತಿವರ್ಷ ನಿರ್ದಿಷ್ಟ ಕಾಲಾವಧಿಗೆ ವಲಸೆ ಹೋಗಿ, ಪುನಃ ಸ್ವಂತ ಊರಿಗೆ ಬರುವ ಕುಟುಂಬದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಕುಂದಾಗಬಾರದು ಎಂಬ ಉದ್ದೇಶದಿಂದ ಸರ್ವಶಿಕ್ಷಾ ಅಭಿಯಾನವು
ಸೀಜನಲ್‌ ರೆಸಿಡೆನ್ಸಿಯಲ್‌ ಸ್ಪೇಷಲ್‌ ಟ್ರೈನಿಂಗ್‌ (ಎಸ್‌ಆರ್‌ಎಸ್‌ಟಿ)ಕಾರ್ಯಕ್ರಮವನ್ನು ಅಕ್ಟೋಬರ್‌ನಿಂದ ನಡೆಸಲು ನಿರ್ಧರಿಸಿದೆ. ವಲಸೆ ಕುಟುಂಬದ ಮಕ್ಕಳು ಶಾಲೆಯನ್ನು ಅರ್ಧಕ್ಕೆ ನಿಲ್ಲಿಸುವ ಪ್ರಮೇಯ ಜಾಸ್ತಿ ಇರುವುದರಿಂದ, ಅಂತಹ ಮಕ್ಕಳನ್ನೇ ಕೇಂದ್ರೀಕರಿಸಿಕೊಂಡು ಸೀಜನಲ್‌ ರೆಸಿಡೆನ್ಸಿಯಲ್‌ ಸ್ಪೇಷಲ್‌ ಟ್ರೈನಿಂಗ್‌ ಕಾರ್ಯಕ್ರಮ ರೂಪಿಸಲಾಗಿದೆ.
ಶಾಲಾ ಶಿಕ್ಷಣ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸರ್ವಶಿಕ್ಷಾ ಅಭಿಯಾನ ಹಮ್ಮಿಕೊಂಡಿರುವ ಟೆಂಟ್‌ ಸ್ಕೂಲ್‌, ಅಲ್ಪಾವಧಿಯ ಬ್ರಿàಡ್ಜ್ ಕೋರ್ಸ್‌, ಮೊಬೈಲ್‌ ಸ್ಕೂಲ್‌, μàಡೇರ್‌ ಸ್ಕೂಲ್‌ ಗಳ ಸಾಲಿಗೆ ಸೀಜನಲ್‌ ರೆಸಿಡೆನ್ಸಿಯಲ್‌ ಸ್ಪೇಷಲ್‌ ಟ್ರೈನಿಂಗ್‌ ಕೂಡ ಸೇರಿಕೊಳ್ಳಲಿದೆ.

Advertisement

ಜೀವನೋಪಾಯಕ್ಕಾಗಿ ಪ್ರತಿವರ್ಷ ನಿರ್ದಿಷ್ಟ ಸಮಯದಲ್ಲಿ ವಲಸೆ ಹೋಗಿ, ಅವಧಿ ಮುಗಿದ ನಂತರ ಸ್ವಂತ ಊರಿಗೆ ಬಂದು ಕೃಷಿ ಅಥವಾ ಇತರೆ ಉದ್ಯೋಗದಲ್ಲಿ ತೊಡಗಿಕೊಳ್ಳುವ ಕುಟುಂಬದ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಸೀಜನಲ್‌ ರೆಸಿಡೆನ್ಸಿಯಲ್‌ ಸ್ಪೇಷಲ್‌ ಟ್ರೈನಿಂಗ್‌ ನಡೆಸಲಾಗುತ್ತದೆ. ಇದು 6 ತಿಂಗಳ ಕಾರ್ಯಕ್ರಮವಾಗಿದ್ದು, ಮಕ್ಕಳ ಪಾಲಕರು
ನಿರ್ದಿಷ್ಟಾವಧಿಗೆ ವಲಸೆ ಹೋದಾಗ ಮಕ್ಕಳನ್ನು ಜತೆಗೆ ಕರೆದುಕೊಂಡು ಹೋಗುವುದರಿಂದ ಅವರ ಶಿಕ್ಷಣ ಕುಂಠಿತವಾಗುವುದನ್ನು ಈ ಮೂಲಕ ತಪ್ಪಿಸಲಾಗುತ್ತದೆ.

ಮಕ್ಕಳ ಪಾಲಕರು ನಿರ್ದಿಷ್ಟಾವಧಿಗೆ ವಲಸೆ ಹೋಗುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸರ್ವಶಿಕ್ಷಾ ಅಭಿಯಾನದ ಮೂಲಕ ಅಂತಹ ಕುಟುಂಬದ ಮಕ್ಕಳಿಗೆ ವಸತಿ ಸಹಿತ 6 ತಿಂಗಳ ಶಿಕ್ಷಣ ನೀಡಲಿದೆ. ಬ್ಯಾಗ್‌, ಪೆನ್‌, ಪುಸ್ತಕ, ಬಟ್ಟೆ
ಸೇರಿ ಶಿಕ್ಷಣಕ್ಕೆ ಬೇಕಾದ ಎಲ್ಲ ಸಾಮಗ್ರಿ, ಊಟ, ವಸತಿ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಇಂತಹ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಆಯ್ದ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

4800 ವಿದ್ಯಾರ್ಥಿ ಎಸ್‌ಆರ್‌ಎಸ್‌ಟಿ: ಎಸ್‌ಆರ್‌ಎಸ್‌ಟಿ ಕಾರ್ಯಕ್ರಮದಡಿ 6 ತಿಂಗಳ ವಸತಿ ಸಹಿತ ಶಿಕ್ಷಣ ಪಡೆಯಲು ಅರ್ಹತೆ ಹೊಂದಿರುವ ಮಕ್ಕಳಿಗಾಗಿ ರಾಜ್ಯದ ವಿವಿಧ ಭಾಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2016ರ ಡಿಸೆಂಬರ್‌ನಲ್ಲಿ ಸರ್ವೇ ಮಾಡಲಾಗಿದೆ. ಹೈದರಬಾದ್‌ ಕರ್ನಾಟಕ ಸೇರಿ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗೆಳಲ್ಲಿ 4839 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. 2017ರ ಅಕ್ಟೋಬರ್‌ನಿಂದ 2018ರ ಮಾರ್ಚ್‌
ತನಕ ವಸತಿ ಸಹಿತ ಶಿಕ್ಷಣ ನೀಡಲಾಗುತ್ತದೆ. ಪಾಲಕರು ವಲಸೆ ಮುಗಿಸಿ ಸ್ವಂತ ಊರಿಗೆ ಬಂದ ನಂತರ ಆ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತದೆ. 4839 ವಿದ್ಯಾರ್ಥಿಗಳ ಪಾಲಕರಲ್ಲಿ ವಲಸೆ ಹೋಗದವರು ಸೇರಿಕೊಂಡಿದ್ದರೆ ಅವರ ಮಕ್ಕಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಸರ್ವ ಶಿಕ್ಷಾ ಅಭಿಯಾನದ ಹಿರಿಯ ಅಧಿಕಾರಿಯೊಬ್ಬರು
“ಉದಯವಾಣಿ’ಗೆ ಮಾಹಿತಿ ನೀಡಿದರು.

ಶಾಲಾ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು
ಹಮ್ಮಿಕೊಂಡಿದ್ದೇವೆ. ಅದರಲ್ಲಿ ಸೀಜನಲ್‌ ರೆಸಿಡೆನ್ಸಿಯಲ್‌ ಸ್ಪೇಷಲ್‌ ಟ್ರೈನಿಂಗ್‌ ಕೂಡ ಒಂದಾಗಿದೆ. 2017ರ ಅಕ್ಟೋಬರ್‌ ನಿಂದ ಕಾರ್ಯಕ್ರಮ ಆರಂಭವಾಗಲಿದೆ. ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. ಹಣಕಾಸಿನ ಅನುಮೋದನೆಗಾಗಿ ಎಂಎಚ್‌ಆರ್‌ಡಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
– ಎಂ.ಆರ್‌.ಮಾರುತಿ, ಹಿರಿಯ ಕಾರ್ಯಕ್ರಮಾಧಿಕಾರಿ, ಸರ್ವ ಶಿಕ್ಷಾ ಅಭಿಯಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next