ಶ್ರೀನಗರ: ಪಾಕ್ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳಿಗೆ ಭದ್ರತಾ ಪಡೆಯು ಮತ್ತೂಂದು ಆಘಾತ ನೀಡಿದೆ. ಭಾನುವಾರ ಜಮ್ಮು -ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 6 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಬಂಧಿತ ಉಗ್ರರ ಪೈಕಿ ಒಬ್ಬ ಭಾರತೀಯ ನಾಗರಿಕರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನಿ ಪ್ರಜೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದು, ಒಬ್ಬ ನಾಗರಿಕ ಕೂಡ ಮೃತಪಟ್ಟಿದ್ದಾರೆ.
ಇಲ್ಲಿನ ಬಟಾಗುಂದ್‌ನಲ್ಲಿ ಉಗ್ರರು ಅವಿತಿರುವ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆ ಶೋಧ ಕಾರ್ಯ ಆರಂಭಿಸಿತ್ತು. ಯೋಧರನ್ನು ನೋಡುತ್ತಿದ್ದಂತೆ, ಉಗ್ರರು ಗುಂಡಿನ ಮಳೆಗರೆಯತೊಡಗಿದರು. ಈ ವೇಳೆ ಗುಂಡಿನ ಚಕಮಕಿ ನಡೆದು, 6 ಉಗ್ರರ ಹತ್ಯೆಗೈಯ್ಯುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಇದೇ ವೇಳೆ, ಎನ್‌ಕೌಂಟರ್ ಬೆನ್ನಲ್ಲೇ ನಾಗರಿಕರು ಹಾಗೂ ಭದ್ರತಾ ಪಡೆ ನಡುವೆ ಭಾರೀ ಘರ್ಷಣೆ ನಡೆದಿದೆ.
ಮತ್ತೂಂದು ಪ್ರಕರಣದಲ್ಲಿ, ಜೈಶ್ ಉಗ್ರನೊಬ್ಬನನ್ನು ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದೆ. 2 ದಿನಗಳ ಹಿಂದಷ್ಟೇ 6 ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿತ್ತು.
ಮೂವರ ಐಸಿಸ್ ಶಂಕಿತರ ಸೆರೆ
ದೆಹಲಿ ಪೊಲೀಸರ ನೆರವಿನಿಂದ ಭಾನುವಾರ ಜಮ್ಮು-ಕಾಶ್ಮೀರ ಪೊಲೀಸರು ಇಸ್ಲಾಮಿಕ್ ಸ್ಟೇಟ್‌ನ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಮೋಟಾರು ಬೈಕ್‌ನಲ್ಲಿ ಹೋಗುತ್ತಿದ್ದ ಇವರನ್ನು ಚೆಕ್‌ಪಾಯಿಂಟ್‌ನಲ್ಲಿ ಅಡ್ಡಗಟ್ಟಿ ಬಂಧಿಸಲಾಗಿದೆ. ಅವರಿಂದ ಕೆಲವು ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ತಾಹಿರ್ ಅಹ್ಮದ್ ಖಾನ್, ಹ್ಯಾರಿಸ್ ಮುಶಾ¤ಖ್ ಖಾನ್ ಮತ್ತು ಆಸಿಫ್ ಸುಹೈಲ್ ನದಾಫ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.