Advertisement

Election Result 2024: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ 6 ಸ್ವತಂತ್ರ ಅಭ್ಯರ್ಥಿಗಳು

09:27 PM Jun 04, 2024 | Team Udayavani |

ನವದೆಹಲಿ: ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ 8 ಸಾವಿರಕ್ಕೂ ಅಧಿಕ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಈ ಪೈಕಿ 6 ಮಂದಿ ಮಾತ್ರ ಗೆಲುವಿನ ನಗೆ ಚೆಲ್ಲಿದ್ದಾರೆ.

Advertisement

ಅಬ್ದುಲ್‌ ರಶೀದ್‌ ಶೇಖ್‌: ಇಂಜಿನಿಯರ್‌ ರಶೀದ್‌ ಎಂದೇ ಖ್ಯಾತರಾದ ಶೇಖ್‌, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅವರನ್ನು ಬರೊಬ್ಬರಿ 1.86 ಲಕ್ಷ ಮತಗಳಿಂದ ಸೋಲಿಸಿದ್ದಾರೆ.

ಸರಬ್ಜಿತ್‌ ಸಿಂಗ್‌ ಖಾಲ್ಸಾ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಗೈದ ಇಬ್ಬರು ಹಂತಕರ ಪೈಕಿ ಒಬ್ಬನಾದ ಬಿಯಂತ್‌ ಸಿಂಗ್‌ ಪುತ್ರನಾದ ಈತ ಪಂಜಾಬ್‌ನ ಫ‌ರೀದ್‌ಕೋಟ್‌ನಿಂದ ಜಯ ಗಳಿಸಿದ್ದಾರೆ. ಈತ 2014, ಮತ್ತು 2019ರ ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲುಂಡಿದ್ದರು.

ಅಮೃತ್‌ಪಾಲ್‌ ಸಿಂಗ್‌: ಮೂಲಭೂತವಾದಿ ಸಿಖ್‌ ಧರ್ಮಗುರು, ವಾರಿಸ್‌ ಪಂಜಾಬ್‌ ದೇ ಸಂಘಟನೆ ಮುಖ್ಯಸ್ಥರಾದ ಸಿಂಗ್‌, ಪಂಜಾಬ್‌ನ ಖದೂರ್‌ ಸಾಹಿಬ್‌ ಕ್ಷೇತ್ರದಿಂದ ವಿಜಯ ಸಾಧಿಸಿದ್ದಾರೆ. ಸದ್ಯ ಎನ್‌ಎಸ್‌ಎ ಕಾಯ್ದೆಯಡಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾರೆ. ಜೈಲಿನಿಂದಲ್ಲೇ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದಾರೆ.

ವಿಕಾಸ್‌ ಪ್ರಕಾಶ್‌ ಬಾಪು ಪಾಟೀಲ್‌: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾದ ಇವರು, ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದಿಂದ 93 ಸಾವಿರ ಮತಗಳ ಅಂತರದಿಂದ ಶಿವಸೇನೆ (ಠಾಕ್ರೆ) ಅಭ್ಯರ್ಥಿಯನ್ನು ಸೋಲಿಸಿ ಆಯ್ಕೆಯಾಗಿದ್ದಾ ರೆ. ಇವರು ಮಾಜಿ ಮುಖ್ಯಮಂತ್ರಿ ವಸಂತ್‌ ದಾದಾ ಪಾಟೀಲ್‌ ಮೊಮ್ಮಗ.

Advertisement

ಹನೀಫಾ ಮತ್ತು ಉಮೇಶ್‌ ಭಾಯಿ: ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ತೊರೆದು ಲಡಾಕ್‌ನಿಂದ ಸ್ಪರ್ಧಿಸಿದ್ದ ಮೊಹಮದ್‌ ಹನೀಫಾ ಜಾನ್‌ ಮತ್ತು ದಿಯು ಮತ್ತು ದಮನ್‌ನಿಂದ ಸ್ಪರ್ಧಿಸಿದ್ದ ಪಟೇಲ್‌ ಉಮೇಶ್‌ ಭಾಯ್‌ ಬಾಹುಭಾಯ್‌ ಜಯ ಗಳಿಸಿದ್ದಾರೆ.

2019ರಲ್ಲಿ ಕೇವಲ 4 ಜನ ಮಾತ್ರ ಸ್ವತಂತ್ರವಾಗಿ ನಿಂತು ಜಯ ಗಳಿಸಿದ್ದರು. ಅತಿ ಹೆಚ್ಚು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದ ದಾಖಲೆ 1951ರಲ್ಲಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next