Advertisement

ತತ್ವಶಾಸ್ತ್ರದಲ್ಲಿ ಶ್ರೀಗಳಿಗೆ 6 ಚಿನ್ನದ ಪದಕ

03:59 PM Oct 10, 2021 | Team Udayavani |

ಸಕಲೇಶಪುರ: ತೆಂಕಲಗೂಡು ಚನ್ನಸಿದ್ದೇಶ್ವರ ಶಿವಾರ್ಚಾಯ ಸ್ವಾಮೀಜಿ ಎಂ.ಎ ತತ್ವಶಾಸ್ತ್ರದಲ್ಲಿ 6 ಚಿನ್ನದ ಪದಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ತಾಲೂಕಿನ ಯಸಳೂರು ಹೋಬಳಿ ತೆಂಕಲಗೂಡು ಮಠದ ಪೀಠಾಧೀಶರಾದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಪೂರ್ವಾಶ್ರಮದ ಹೆಸರು ಪೂರ್ಣಚಂದ್ರ ದೇವರು ಎಂದಾಗಿದ್ದು, ಒಂದರಿಂದ ಹತ್ತನೇ ತರಗತಿಯನ್ನು ಕೊಡಗಿನ ಶನಿವಾರಸಂತೆಯ ಸೇಕ್ರೆಡ್‌ ಹಾರ್ಟ್‌ ಶಾಲೆ ಯಲ್ಲಿ ಪೂರೈಸಿದರು.

Advertisement

ಪಿಯುಸಿಯನ್ನು ಮೈಸೂರಿನ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶ್ರಯದಲ್ಲಿ ಸುತ್ತೂರು ಮಠದ ಗುರುಕುಲದಲ್ಲಿದ್ದುಕೊಂಡು ಜೆ.ಎಸ್‌.ಎಸ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು.

ನಂತರ ಸಂಸ್ಕೃತ, ಇಂಗ್ಲಿಷ್‌ ಹಾಗೂ ತತ್ವಶಾಸ್ತ್ರ ವಿಷಯಗಳಲ್ಲಿ ಬಿಎ ಪದವಿಯನ್ನು ಉತ್ತರ ಕರ್ನಾಟಕದ ಪ್ರತಿಷ್ಠಿತ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಈ ಹಿಂದಿನ ತೆಂಕಲಗೂಡು ಮಠದ ಪೀಠಾಧೀಶಾರದ ಲಿಂಗೈಕ್ಯ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ   ಸ್ವಾಮಿಗಳ ಆಶಯದಂತೆ ಎಂ.ಎ ತತ್ವಶಾಸ್ತ್ರ ವಿಷಯವನ್ನು ಆಯ್ಕೆಮಾಡಿ ಕರ್ನಾಟಕ ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದಲ್ಲಿ ಅಭ್ಯಸಿಸಿದ್ದಾರೆ.

ಇದನ್ನೂ ಓದಿ:- ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ: ಉದಾಸಿ

ಎಂ.ಎ ವಿದ್ಯಾಭ್ಯಾಸ ಮುಗಿದ ನಂತರ ತಾವು ವಿದ್ಯಾಭ್ಯಾಸ ಮಾಡಿದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಧರ್ಮ ಶಾಸ್ತ್ರದ ಉಪನ್ಯಾಸಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಂಧರ್ಭದಲ್ಲಿ ಅಂತರ್‌ ರಾಷ್ಟ್ರೀಯ, ರಾಷ್ಟ್ರೀಯ ವಿಚಾರ ಸಂಕೀರ್ಣಗಳಲ್ಲಿ ವಿಷಯ ಮಂಡಿಸಿದ್ದಾರೆ.

Advertisement

ಚನ್ನ ಮಲ್ಲಿಕಾರ್ಜುನ ಸ್ವಾಮೀಜಿಗಳ ನಿಧನ ನಂತರ ತೆಂಕಲಗೂಡು ಮಠದ ಪೀಠಾಧೀಶರಾಗಿ ಕೆಲವು ತಿಂಗಳ ಹಿಂದೆ ಅಲಂಕರಿಸಿದ್ದು ಮಠದ ಏಳಿಗೆಗಾಗಿ ಶ್ರಮಿಸುತ್ತಾರೆ. ಇದೀಗ ಎಂ.ಎ ತತ್ವಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದು ತೇರ್ಗಡೆ ಹೊಂದಿ 6 ಚಿನ್ನದ ಪದಕಗಳನ್ನು ಪಡೆದು ಗುರುಗಳಾದ ಲಿಂಗೈಕ್ಯ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಆಸೆಯನ್ನು ನೆರೆವೇರಿಸಿದ್ದಾರೆ.

ಸದ್ಯ ಶ್ರೀಗಳು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಿದ್ಧಾಂತ ಶಿಖಾಮಣಿಯಲ್ಲಿನ ಅಧಿಭೌತ ತತ್ವಗಳ ತಾತ್ವಿಕ ಅಧ್ಯಯನ ಎಂಬ ವಿಷಯದಲ್ಲಿ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಆನ್‌ಲೈನ್‌ ಘಟಿಕೋತ್ಸವದಲ್ಲಿ ಶ್ರೀಗಳು ವಿವಿಯಿಂದ ಪದಕವನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next