ಹರಾರೆ: ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ವೇಳೆ ಗಣಿ ಕುಸಿದು ಆರು ಮಂದಿ ಮೃತಪಟ್ಟು ಹದಿನೈದು ಮಂದಿ ಸಿಲುಕಿರುವ ಘಟನೆ ಜಿಂಬಾಬ್ವೆಯ ಬೇ ಹಾರ್ಸ್ ಗಣಿಯಲ್ಲಿನಡೆದಿರುವುದಾಗಿ ವರದಿಯಾಗಿದೆ.
ರಾಜಧಾನಿ ಹರಾರೆಯಿಂದ ಪಶ್ಚಿಮಕ್ಕೆ 100 ಕಿಲೋಮೀಟರ್ (62 ಮೈಲಿ) ದೂರದಲ್ಲಿರುವ ಚೆಗುಟುವಿನ ಜಿಂಬಾಬ್ವೆಯ ಬೇ ಹಾರ್ಸ್ ಗಣಿಯಲ್ಲಿ ದುರಂತ ಸಂಭವಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಶುಕ್ರವಾರ ರಾತ್ರಿ ಆರು ಮೃತದೇಹಗಳನ್ನು ಗಣಿಯಿಂದ ಹೊರತೆಗೆಯಲಾಗಿದೆ ಎಂದು ZBC ಟಿವಿ ಹೇಳಿದೆ, ಇನ್ನೂ 15 ಗಣಿಗಾರರು ಭೂಗತರಾಗಿದ್ದಾರೆ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.
ಶುಕ್ರವಾರದಂದು ಗಣಿಯಲ್ಲಿ ಸುಮಾರು 34 ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಕುಸಿತವಾಗಿದೆ ಈ ವೇಳೆ ಹದಿಮೂರು ಮಂದಿ ಪಾರಾಗಿದ್ದು ಇಪ್ಪತ್ತೊಂದು ಮಂದಿ ಗಣಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ ಬಳಿಕ ರಕ್ಷಣಾ ತಂಡದ ಸತತ ಪ್ರಯತ್ನದ ಮೂಲಕ ಆರು ಮಂದಿಯನ್ನು ರಕ್ಷಣೆ ಮಾಡಿದ್ದೂ ಇನ್ನೂ ಹದಿನೈದು ಮಂದಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: India-Canada Row: ‘ವಾಕ್ ಸ್ವಾತಂತ್ರ್ಯ’ದ ಬಗ್ಗೆ ನಾವು ಇತರರಿಂದ ಕಲಿಯಬೇಕಾಗಿಲ್ಲ: ಜೈಶಂಕರ್