Advertisement

ಪಟ್ಟಣ ಸೌಂದರ್ಯಿಕರಣ 6 ಕೋಟಿ

03:51 PM Sep 24, 2019 | Suhan S |

ತಾಳಿಕೋಟೆ: ಪಟ್ಟಣದ ಸೌಂದರ್ಯಿಕರಣ ದೃಷ್ಟಿಯಿಂದ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಅವರ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿ ಮುಖ್ಯಭಾಗದ ಎಲ್ಲ ರಸ್ತೆಗಳಲ್ಲಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿತು.

Advertisement

ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಎಸ್‌. ಪಾಟೀಲ, ಕಿರಿಯ ಅಭಿಯಂತರ ಜಿ.ವೈ. ಮುರಾಳ ಅವರು ಪುರಸಭೆ ಸದಸ್ಯರೊಂದಿಗೆ ಕೆಪಿಟಿಸಿಎಲ್‌ ಕಚೇರಿ ಹತ್ತಿದ ಜಾನಕಿ ಹಳ್ಳದಿಂದ ಬಸ್‌ ಘಟಕದವರೆಗೆ ಹಾಗೂ ವಿಜಯಪುರ ಸರ್ಕಲ್‌ದಿಂದ ಶಿವಾಜಿ ವೃತ್ತದವರೆಗೆ ಯಾವ ಯಾವ ಕೆಲಸ ಆಗಬೇಕೆನ್ನುವುದರ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಪತ್ರಿಕೆಯೊಂದಿಗೆ ಜಿ.ಎಸ್‌ .ಪಾಟೀಲ ಮಾತನಾಡಿ, ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಅವರು ತಾಳಿಕೋಟೆ ಪಟ್ಟಣ ಹೈಟೆಕ್‌ ಸಿಟಿಯನ್ನಾಗಿಸಲು ಮುಖ್ಯ ರಸ್ತೆಗಳಲ್ಲಿ ಏನೇನು ಕೊರತೆಗಳಿಗೆ ಅವುಗಳ ಪಟ್ಟಿ ಮಾಡಿ ಅಂದಾಜು ಪತ್ರಿಕೆ ಸಲ್ಲಿಸಲು ಸೂಚಿಸಿದ್ದಾರೆ.

ಈ ಕಾರಣದಿಂದ ಜಾನಕಿ ಹಳ್ಳದಿಂದ ಬಸ್‌ ಘಟಕದವರೆಗೆ ರಸ್ತೆ ಅಗಲೀಕರಣದ ಜೊತೆಗೆ ದುರಸ್ತಿ, ವಿಜಯಪುರ ವೃತ್ತದಿಂದ ಶಿವಾಜಿ ಚೌಕಿನವರೆಗೆ ರಸ್ತೆ ಅಗಲೀಕರಣ ಹಾಗೂ ಸಂಪೂರ್ಣ ಸಿಸಿ ರಸ್ತೆ ನಿರ್ಮಾಣ ಮಾಡುವುದರೊಂದಿಗೆ ಎಡ ಬಲದಲ್ಲಿ ಟೈಲ್ಸ್‌, ಫುಟ್‌ಪಾತ್‌ ನಿರ್ಮಿಸುವದು ಮತ್ತು ವಿದ್ಯುತ್‌ ದೀಪ ಅಳವಡಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು. ಪುರಸಭೆ ಮುಖ್ಯಾ ಧಿಕಾರಿ ಸುರೇಶ ನಾಯಕ, ಸದಸ್ಯರಾದ ವಾಸುದೇವ ಹೆಬಸೂರ, ಮುತ್ತಣ್ಣ ಚಮಲಾಪುರ, ಜಯಸಿಂಗ್‌ ಮೂಲಿಮನಿ, ನಿಂಗರಾಜ ಕುಂಟೋಜಿ, ಮಾಜಿ ಸದಸ್ಯ ಪ್ರಕಾಶ ಹಜೇರಿ ಹಾಗೂ ಮಂಜು ಶೆಟ್ಟಿ, ದತ್ತು ಹೆಬಸೂರ, ರಾಜಶೇಖರ ಪಾಟೀಲ, ಶಂಬು ಹಂದಿಗನೂರ, ಕಾಶೀನಾಥ ಮಬ್ರುಮಕರ, ಸನಾ ಕೆಂಭಾವಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next