Advertisement

BRICS ಒಕ್ಕೂಟಕ್ಕೆ ಸೇರಲು 6 ದೇಶಗಳಿಗೆ ಆಹ್ವಾನ; ಮೋದಿ ಸ್ವಾಗತ

05:56 PM Aug 24, 2023 | Team Udayavani |

ಜೋಹಾನ್ಸಬರ್ಗ್: 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಶ್ವ ಆರ್ಥಿಕತೆಗಳ ಗುಂಪು ವಿಸ್ತರಣೆಯನ್ನು ಭಾರತ ಸ್ವಾಗತಿಸುತ್ತದೆ ಎಂದು ಹೇಳಿದರು. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಆರು ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಯನ್ನು ಘೋಷಿಸಿದ ನಂತರ ಪ್ರಧಾನಿ ಮೋದಿ ಅದನ್ನು ಸ್ವಾಗತಿಸಿದರು.

Advertisement

ಸೌದಿ ಅರೇಬಿಯಾ, ಇರಾನ್, ಇಥಿಯೋಪಿಯಾ, ಅರ್ಜೆಂಟಿನಾ ಮತ್ತು ಯುನೈಟೈಡ್ ಅರಬ್ ಎಮಿರೇಟ್ಸ್ ಗೆ ಬ್ರಿಕ್ಸ್ ಆಹ್ವಾನ ನೀಡಲಾಗಿದೆ.

“ಈ 3 ದಿನಗಳ ಸಭೆಯಲ್ಲಿ, ಬಹಳಷ್ಟು ಸಕಾರಾತ್ಮಕ ಫಲಿತಾಂಶಗಳು ಹೊರಬಂದಿವೆ ಎಂದು ನನಗೆ ಖುಷಿಯಾಗಿದೆ. ಬ್ರಿಕ್ಸ್‌ ನ ಸದಸ್ಯರ ವಿಸ್ತರಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ” ಎಂದು ಜೋಹಾನ್ಸ್‌ಬರ್ಗ್‌ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ:Chandrayaan-3 ಕುರಿತು ಸಿನಿಮಾ: ಟೈಟಲ್‌ ರಿಜಿಸ್ಟರ್‌ ಗೆ ಮುಗಿಬಿದ್ದ ನಿರ್ಮಾಣ ಸಂಸ್ಥೆಗಳು

“ನಮ್ಮ ತಂಡಗಳು ಬ್ರಿಕ್ಸ್ ವಿಸ್ತರಣೆಗೆ ಮಾರ್ಗದರ್ಶಿ ಸೂತ್ರಗಳು, ಮಾನದಂಡಗಳು, ಕಾರ್ಯವಿಧಾನಗಳನ್ನು ಒಟ್ಟಿಗೆ ಒಪ್ಪಿಕೊಂಡಿರುವುದು ನನಗೆ ಸಂತೋಷವಾಗಿದೆ” ಎಂದು ಅವರು ಹೇಳಿದರು.

Advertisement

ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ, ಹೊಸ ಸದಸ್ಯ ರಾಷ್ಟ್ರಗಳನ್ನು ಗುಂಪಿನಲ್ಲಿ “ಪಾಲುದಾರರು” ಎಂದು ಸ್ವೀಕರಿಸಲು ಭಾರತ ಉತ್ಸುಕವಾಗಿದೆ ಎಂದು ಹೇಳಿದರು. ಗುಂಪಿನ ವಿಸ್ತರಣೆಯು “ಬದಲಾಗುತ್ತಿರುವ ಕಾಲ” ಮತ್ತು ವಿಶ್ವ ಕ್ರಮವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಇರಾನ್, ಸೌದಿ ಅರೇಬಿಯಾ, ಯುಎಇ ಸೇರಿ 23 ದೇಶಗಳು ಬ್ರಿಕ್ಸ್ ಸದಸ್ಯತ್ವ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದೆ. ಸದ್ಯ ಬ್ರಿಕ್ಸ್ ಒಕ್ಕೂಟದಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿವೆ. 2024ರ ಜನವರಿ 1ರ ವೇಳೆ ಹೊಸ ರಾಷ್ಟ್ರಗಳು ಒಕ್ಕೂಟಕ್ಕೆ ಸೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next