ಚಿತ್ರದುರ್ಗ: ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ 6,95,038 ರೂ. ಲಾಭದಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ತಿಳಿಸಿದರು.
ನಗರದ ಗಾಯತ್ರಿ ಕಲ್ಯಾಣಮಂಟಪದಲ್ಲಿ ನಡೆದ ಚಿತ್ರದುರ್ಗಟೌನ್ ಕೋ-ಆಪರೇಟಿವ್ ಸೊಸೈಟಿ2019-20 ನೇ ಸಾಲಿನ 103ನೇ ಸರ್ವ ಸದಸ್ಯರ ಸಾಮಾನ್ಯ ಸಭೆ ಉದ್ಘಾಟಿಸಿಮಾತನಾಡಿದರು. ಯಾವ ಸದಸ್ಯರಿಗೂಅನ್ಯಾಯವಾಗಲು ಬಿಡುವುದಿಲ್ಲ.1400 ಸದಸ್ಯರನ್ನು ನಾನೇ ನೊಂದಣಿ ಮಾಡಿಸಿದ್ದೇನೆ. ಎಲ್ಲರ ಸಹಕಾರದೊಂದಿಗೆಸೊಸೈಟಿ ಬಲಪಡಿಸೋಣ ಎಂದರು.
ಹೊಸ ಸದಸ್ಯತ್ವಕ್ಕೆ ಕಾರ್ಯಕಾರಿಣಿಸಭೆಯಲ್ಲಿ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಚಿತ್ರದುರ್ಗಟೌನ್ ಕೋ-ಆಪರೇಟಿವ್ ಸೊಸೈಟಿ ಬಗ್ಗೆ ಕಾಳಜಿ ಹಾಗೂ ಅಭಿಮಾನವುಳ್ಳವರನ್ನುಗುರುತಿಸಿ ಸದಸ್ಯತ್ವ ನೀಡಲಾಗುವುದು. ಕಳೆದ ಹತ್ತು ತಿಂಗಳಿಂದ ಕೋವಿಡ್ ಕಾರಣಕ್ಕೆ ಸಾಲ ವಸೂಲಾತಿಯಲ್ಲಿ ಹಿನ್ನಡೆಯಾಗಿದೆ. ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಾಂತರ ಸಾಲ ವಸೂಲಾತಿ ಮಾಡಿ ಲಾಭದ ಹಾದಿಗೆ ತರಲಾಗುವುದು. ಸಾಲ ಪಡೆದ ಸದಸ್ಯರು ಪ್ರಾಮಾಣಿಕವಾಗಿ ಹಿಂದಿರುಗಿಸಬೇಕು. ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಸಂಪರ್ಕಿಸಿ ಸೊಸೈಟಿಗೆ ನಿವೇಶನ ಕೇಳಲಾಗುವುದು ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಸಂಘದಲ್ಲಿ 1.42 ಕೋಟಿ ರೂ. ಠೇವಣಿಯಿದ್ದು, 1.91ಕೋಟಿ ರೂ. ಠೇವಣಿಯಾಗಿದೆ. 48,65,037 ರೂ. ಠೇವಣಿ ವೃದ್ಧಿಯಾಗಿದ್ದು, ಹಿರಿಯ ಸದಸ್ಯರಿಗೆ ಠೇವಣಿ ಬಡ್ಡಿಯ ಮೇಲೆ ಶೇ.01 ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ ಎಂದುವಿವರಿಸಿದರು. ಚಿತ್ರದುರ್ಗ ಟೌನ್‌ಕೋ-ಆಪರೇಟಿವ್ ಸೊಸೈಟಿ ಈಗಾಗಲೆ ನೂರು ವರ್ಷಗಳನ್ನು ದಾಟಿರುವಜ್ಞಾಪಕಾರ್ಥವಾಗಿ ಸದಸ್ಯರುಗಳಿಗೆನೆನಪಿನ ಕಾಣಿಕೆ ನೀಡಬೇಕು. ಜೊತೆಗೆ ಡೆತ್ ಫಂಡ್ ಕೂಡ ಹೆಚ್ಚಿಸುವಂತೆ ಹಿರಿಯ ಸದಸ್ಯ ಫೈಲ್ವಾನ್ ತಿಪ್ಪೇಸ್ವಾಮ ಸಲಹೆ ನೀಡಿದಾಗ ಮುಂದಿನ ವರ್ಷದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ನೆನಪಿನ ಕಾಣಿಕೆನೀಡುವ ಕುರಿತು ಚರ್ಚಿಸುವುದಾಗಿಎಂ.ನಿಶಾನಿ ಜಯಣ್ಣ ಹೇಳಿದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಡಾ| ರಹಮತ್‌ಉಲ್ಲಾ, ನಿರ್ದೇಶಕರಾದ ಸಿ.ಎಚ್. ಸೂರ್ಯಪ್ರಕಾಶ್, ಬಿ.ವಿ. ಶ್ರೀನಿವಾಸಮೂರ್ತಿ, ಬಿ.ಎಂ. ನಾಗರಾಜರಾವ್, ಕೆ.ಚಿಕ್ಕಣ್ಣ, ಸೈಯದ್ ನೂರುಲ್ಲಾ, ಎಸ್.ವಿ. ಪ್ರಸನ್ನ,ಕೆ.ಪ್ರಕಾಶ್, ಚಂದ್ರಪ್ಪ, ಎ.ಚಂಪಕ ಅಶೋಕ್, ಎಂ.ಎಸ್. ರಶ್ಮಿ ರಮೇಶ್, ನಾಮ ನಿರ್ದೇಶಿತ ಸದಸ್ಯ ಎಸ್.ತಿಮ್ಮಪ್ಪ ಇದ್ದರು.