Advertisement

ಉ.ಪ್ರ. ವಾಯು ನೆಲೆಗಳ ಮೇಲೆ ಉಗ್ರ ದಾಳಿ ಸಂಭವ: ಕಟ್ಟೆಚ್ಚರ

05:03 PM Nov 15, 2017 | Team Udayavani |

ಲಕ್ನೋ : ಶಸ್ತ್ರ ಸಜ್ಜಿತರಾಗಿರುವ ಸುಮಾರು ಏಳು ಲಷ್ಕರ್‌ ಎ ತಯ್ಯಬ ಉಗ್ರರು ಉತ್ತರ ಪ್ರದೇಶದಲ್ಲಿನ ಭಾರತೀಯ ವಾಯು ಪಡೆಯ ವಾಯು ನೆಲೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ಅನುಸರಿಸಿ ರಾಜ್ಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ.

Advertisement

ಸುಮಾರು ಆರರಿಂದ ಏಳು ಉಗ್ರರು ಗಾಜಿಯಾಬಾದ್‌ನ ಹಿಂದೋನ್‌ ಸಹಿತ ಉತ್ತರ ಪ್ರದೇಶದ ವಾಯು ಪಡೆಯ ಪ್ರಮುಖ ವಾಯು ನಲೆಗಳನ್ನು ಗುರಿ ಇರಿಸಿಕೊಂಡು ದಾಳಿಗೆ ಸಜ್ಜಾಗಿ ನಿಂತಿರುವುದಾಗಿ ಭಾರತೀಯ ಗುಪ್ತಚರ ದಳ “ರಾ’ ತಿಳಿಸಿದೆ. 

ಲಷ್ಕರ್‌ ಉಗ್ರರ ಈ ತಂಡ ಪ್ರಕೃತ ಕಾಶ್ಮೀರದಲ್ಲಿ ಅಡಗಿಕೊಂಡಿರುವುದಾಗಿ ರಾ ತಿಳಿಸಿದೆ. ಅವರ ಬಳಿ ಎಕೆ 47 ರೈಫ‌ಲ್‌ಗ‌ಳು, ಗ್ರೆನೇಡ್‌ ಲಾಂಚರ್‌ಗಳು ಮತ್ತು ಹ್ಯಾಂಡ್‌ ಗ್ರೆನೇಡ್‌ಗಳೂ ಇವೆ ಎನ್ನಲಾಗಿದೆ.    

ಈ ಮಾಹಿತಿಯ ಬೆನ್ನಲ್ಲೇ ಇಂದು ಗಾಜಿಯಾಬಾದ್‌ನ ಹಿಂದೋನ್‌ ವಾಯು ನೆಲೆಯ ಗೋಡೆ ಹಾರಿ ಒಳ ಪ್ರವೇಶಿಸಲು ಯತ್ನಿಸಿದ ಅಪರಿಚಿತ ತರುಣನನ್ನು ಭದ್ರತಾ ಪಡೆಗಳು ಗುಂಡೆಸೆದು ಕೆಳಗುರುಳಿಸಿ ಬಳಿಕ ಅತನನ್ನು ಆಸ್ಪತ್ರೆಗೆ ಒಯ್ದರು. ಅನಂತರದಲ್ಲಿ ಆತ ಉತ್ತರ ಪ್ರದೇಶದ ನಿವಾಸಿ, ನಿರ್ಗತಿಕ ತರುಣನೆಂದು ಗೊತ್ತಾಯಿತು. 

ಭಾರತ -ನೇಪಾಲ ಗಡಿಯ 550 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲೂ ಹೈ ಅಲರ್ಟ್‌ ಘೋಷಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next