Advertisement

ಪ್ರೊ ಕಬಡ್ಡಿ ಲೀಗ್‌-6: ಹರಾಜಿನಲ್ಲಿ 422 ಆಟಗಾರರು

06:00 AM May 30, 2018 | |

ಮುಂಬಯಿ: ಪ್ರೊ ಕಬಡ್ಡಿ ಲೀಗ್‌ನ ಆರನೇ ಋತುವಿಗೆ ಆಟಗಾರರ ಹರಾಜು ಪ್ರಕ್ರಿಯೆ ಬುಧವಾರ ಆರಂಭವಾಗಲಿದೆ. ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 422 ಆಟಗಾರರು ಕಣದಲ್ಲಿದ್ದಾರೆ. 

Advertisement

422 ಆಟಗಾರರಲ್ಲಿ ಫ್ಯೂಚರ್‌ ಕಬಡ್ಡಿ ಹೀರೋಸ್‌ ಕಾರ್ಯಕ್ರಮದಡಿ 87 ಮತ್ತು ವಿದೇಶದ 58 ಆಟಗಾರರು ಇರಲಿದ್ದಾರೆ. ಇರಾನ್‌, ಬಾಂಗ್ಲಾದೇಶ, ಜಪಾನ್‌, ಕೀನ್ಯ, ಕೊರಿಯ, ಮಲೇಶ್ಯ, ಶ್ರೀಲಂಕಾ ಸಹಿತ 14 ದೇಶಗಳ ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಧ್ಯಮ ಪ್ರಕಟನೆ ತಿಳಿಸಿದೆ.

12 ಫ್ರಾಂಚೈಸಿಗಳಲ್ಲಿ 9 ಫ್ರಾಂಚೈಸಿಗಳು ಈಗಾಗಲೇ ಎಲೈಟ್‌ ರಿಟೈನ್‌x ಪ್ಲೇಯರ್ ಆಧಾರದಲ್ಲಿ 21 ಆಟಗಾರ ರನ್ನು ಆಯ್ಕೆ ಮಾಡಿಕೊಂಡಿವೆ. ಇನ್ನುಳಿದ ಮೂರು ಫ್ರಾಂಚೈಸಿಗಳಾದ ಯುಪಿ ಯೋಧಾ, ಯು ಮುಂಬಾ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ ಹರಾಜಿನ ಮೂಲಕ ತಮ್ಮ ತಂಡವನ್ನು ಕಟ್ಟಿಕೊಳ್ಳಬೇಕಾಗಿದೆ. ಪ್ರತಿಯೊಂದು ಫ್ರಾಂಚೈಸಿ ಆಟಗಾರರ ಖರೀದಿಗೆ 4 ಕೋಟಿ ರೂ. ಖರ್ಚು ಮಾಡಬಹುದು. ತಂಡವೊಂದನ್ನು ರಚಿಸಲು 18ರಿಂದ 25 ಆಟಗಾರರನ್ನು ಆಯ್ಕೆ ಮಾಡಬಹುದು. 

ಐಪಿಎಲ್‌ ಬಳಿಕ ಪ್ರೊ ಕಬಡ್ಡಿ ಭಾರೀ ಜನಪ್ರಿಯತೆ ಪಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರೊ ಕಬಡ್ಡಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಪ್ರದೀಪ್‌ ನರ್ವಾಲ್‌ ನಾಯಕತ್ವದ ಪಾಟ್ನಾ ಪೈರೇಟ್ಸ್‌ ತಂಡವು ಪ್ರೊ ಕಬಡ್ಡಿ 5ರ ಋತುವಿನಲ್ಲಿ ಪ್ರಶಸ್ತಿ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next