Advertisement

ಕೋಟ್ಲಾ ಕೋಟೆಗೆ ಲಗ್ಗೆ ಹಾಕಲಿ ಕೊಹ್ಲಿ ಪಡೆ

12:30 AM Mar 13, 2019 | Team Udayavani |

ಹೊಸದಿಲ್ಲಿ: ವಿಶ್ವಕಪ್‌ ಟೂರ್ನಿಗೂ ಮುನ್ನ ಕಟ್ಟಕಡೆಯ ಏಕದಿನ ಪಂದ್ಯ ಆಡಲಿರುವ ಭಾರತವೀಗ ತೀರಾ ಇಕ್ಕಟ್ಟಿನಲ್ಲಿದೆ. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಸುಲಭದಲ್ಲೇ ವಶಪಡಿಸಿಕೊಳ್ಳಬಹುದಾಗಿದ್ದ ಸರಣಿಯನ್ನು ಕೈಚೆಲ್ಲುವುದೇ ಎಂಬ ಸಂಶಯವನ್ನು ಹುಟ್ಟುಹಾಕಿದೆ. ಈ ಸಂಕಟದಿಂದ ಪಾರಾಗಬೇಕಾದರೆ ಉಳಿದಿರುವ ಒಂದೇ ಮಾರ್ಗ, ಬುಧವಾರ ನಡೆಯಲಿರುವ “ಕೋಟ್ಲಾ ಕೋಟೆ’ಗೆ ಲಗ್ಗೆ ಹಾಕುವುದು!

Advertisement

ಸರಣಿಯ 5ನೇ ಹಾಗೂ ಅಂತಿಮ ಏಕದಿನ ಪಂದ್ಯ ಹೊಸದಿಲ್ಲಿಯ “ಫಿರೋಜ್‌ ಶಾ ಕೋಟ್ಲಾ’ ಅಂಗಳದಲ್ಲಿ ನಡೆಯಲಿದ್ದು, “ಡೆಲ್ಲಿ ಬಾಯ್‌’ ಕೊಹ್ಲಿಗೆ ಅದೃಷ್ಣ ತಂದೀತೇ ಎಂಬ ನಿರೀಕ್ಷೆ ಎಲ್ಲರದು. ಕೊಹ್ಲಿ ಜತೆಗೆ ಶಿಖರ್‌ ಧವನ್‌, ರಿಷಬ್‌ ಪಂತ್‌ ಅವರಿಗೂ ಇದು ತವರಿನ ಅಂಗಳವಾಗಿದ್ದು, ಇವರೆಲ್ಲ ಸಿಡಿದು ನಿಂತರೆ ಸರಣಿ ಗೆಲ್ಲುವುದು ಅಸಾಧ್ಯವೇನಲ್ಲ. ಸರಣಿ 2-2ರಿಂದ ಸಮಬಲವಾಗಿರುವುದರಿಂದ ಈ ಅಂತಿಮ ಪಂದ್ಯ ರೋಚಕತೆ ಸೃಷ್ಟಿಸಿದೆ. ಆದರೆ ಆಸೀಸ್‌ ಕಳೆದೆರಡು ಪಂದ್ಯ ಗಳಲ್ಲಿ ಚಾಂಪಿಯನ್ನರ ಆಟ ವಾಡಿ ಭಾರತದ ಮೇಲೆ ಅಪಾಯದ ಬಾವುಟ ಹಾರಿಸಿದೆ. ತವರಿನಲ್ಲಿ ಅನುಭವಿಸಿದ ಸರಣಿ  ಸೋಲಿಗೆ ಸೇಡು ತೀರಿಸಿಕೊಳ್ಳುವ ಸಾಧ್ಯತೆ ಹೆಚ್ಚಿಸಿ ಕೊಂಡಿದೆ. 

ಫಾರ್ಮ್ಗೆ ಬಂದ ಶಿಖರ್‌
ಕಳೆದ ಮೂರು ಪಂದ್ಯಗಳಲ್ಲಿ ಭಾರತದ ಟಾಪ್‌ ಆರ್ಡರ್‌ ಬ್ಯಾಟಿಂಗ್‌ ಶೋಚನೀಯ ಸ್ಥಿತಿಗೆ ತಲುಪಿತ್ತು. ಆದರೆ ಮೊಹಾಲಿಯಲ್ಲಿ ಟಾಪ್‌ ಆರ್ಡರ್‌ ಉತ್ತಮ ಆಟವಾಡಿ ಭಾರತಕ್ಕೆ ನೆರವಾಗಿತ್ತು. ಅದರಲ್ಲೂ ಮೊದಲ 3 ಪಂದ್ಯಗಳಲ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಶಿಖರ್‌ ಧವನ್‌ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದರು. ಈ ಟೀಕೆಗಳಿಗೆಲ್ಲ ಮೊಹಾಲಿ ಅಂಗಳದಲ್ಲಿ ಉತ್ತರಿಸಿದ ಧವನ್‌ 143 ರನ್‌ ಪೇರಿಸಿದ್ದರು. ಇದೇ ಪ್ರದರ್ಶನ ಕೋಟ್ಲಾದಲ್ಲೂ ಮುಂದುವರಿದರೇ ವಿಶ್ವಕಪ್‌ಗೆ ಸ್ಥಾನ ಭದ್ರಪಡಿಸಿಕೊಳ್ಳಬಹುದು. ಉಳಿದಂತೆ ರೋಹಿತ್‌ ಕೂಡ ಮೊಹಾಲಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನಾಳಿನ ಪಂದ್ಯದಲ್ಲೂ ಟಾಪ್‌ ಆರ್ಡರ್‌ನಿಂದ ಇದೇ ಪ್ರದರ್ಶನ ಅಗತ್ಯ. ಉಳಿದಂತೆ ನಾಯಕ ಕೊಹ್ಲಿ, ಪಂತ್‌, ವಿಜಯ ಶಂಕರ್‌ ಮಿಂಚಿ ತಂಡಕ್ಕೆ ಭದ್ರ ಬುನಾದಿ ಹಾಕುವ ಭರವಸೆಯಲ್ಲಿದ್ದಾರೆ. 

ಮತ್ತೆ ಕಾಡದಿರಲಿ ಬೌಲಿಂಗ್‌
4ನೇ ಏಕದಿನದಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗ ಸಿಡಿದರೆ, ಬೌಲಿಂಗ್‌ ವಿಭಾಗ ಸಂಪೂರ್ಣ ಕೈಕೊಟ್ಟಿತ್ತು. ಬಲಿಷ್ಠ ಬೌಲರ್‌ಗಳನ್ನೇ ಒಳಗೊಂಡಿರುವ ಭಾರತ ಮೊಹಾಲಿಯಲ್ಲಿ ವಿಕೆಟ್‌ ಕೀಳಲಾಗದೇ ಪರದಾಡಿತ್ತು. ವಿಶ್ವಕಪ್‌ಗ್ೂ ಮುನ್ನ ಈ ವಿಭಾಗವನ್ನು ಸರಿಪಡಿಸಿ ಕೊಳ್ಳಬೇಕಾದ ಒತ್ತಡ ನಾಯಕ ಕೊಹ್ಲಿ ಮೇಲಿದೆ. ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌ ಶಿಸ್ತಿನ ಬೌಲಿಂಗ್‌ ತಂಡಕ್ಕೆ ಅಗತ್ಯವಾಗಿದೆ. ಯಜುವೇಂದ್ರ ಚಾಹಲ್‌, ಕುಲ್‌ದೀಪ್‌ ಇನ್ನಷ್ಟು ಮೋಡಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕೋಟ್ಲಾದ ಪಿಚ್‌ ಎಡಗೈ ಸ್ಪಿನ್‌ಗೆ ಪರಿ ಣಾಮಕಾರಿಯಾಗಿದೆ ಎಂಬ ಕಾರಣಕ್ಕೆ ರವೀಂದ್ರ ಜಡೇಜ ಆಡುವ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. 

ಆಸೀಸ್‌ ಬ್ಯಾಟಿಂಗ್‌ಗೆ ಆನೆಬಲ
ಸ್ಟಾರ್‌ ಆಟಗಾರರು ಫಾರ್ಮ್ಗೆ ಮರಳಿರುವುದು ಆಸ್ಟ್ರೇಲಿಯ ತಂಡಕ್ಕೆ ಆನೆಬಲ ನೀಡಿದೆ. ಆರನ್‌ ಫಿಂಚ್‌, ಉಸ್ಮಾನ್‌ ಖ್ವಾಜಾ ತಂಡಕ್ಕೆ ಉತ್ತಮ ಆರಂಭ ನೀಡಿದರೆ, ಮಧ್ಯಮ ಕ್ರಮಾಂಕದಲ್ಲಿ ಶಾನ್‌ ಮಾರ್ಷ್‌, ಹ್ಯಾಂಡ್ಸ್‌ಕಾಂಬ್‌, ಮಾಕ್ಸ್‌ವೆಲ್‌ ತಂಡಕ್ಕೆ ನೆರವಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಾಲಿಯಲ್ಲಿ ಸ್ಟಾರ್‌ ಪಟ್ಟ ಏರಿದ ಟರ್ನರ್‌ ಮತ್ತೂಮ್ಮೆ ಸಿಡಿಯಲು ಸಜ್ಜಾಗಿದ್ದಾರೆ. ಕಾಂಗರೂಗಳ ಬೌಲಿಂಗ್‌ ಕೂಡ ಬಲಿಷ್ಠವಾಗಿದೆ. ಪ್ಯಾಟ್‌ ಕಮಿನ್ಸ್‌, ಜೇ ರಿಚಡ್ಸìಸನ್‌ ಭಾರತದ ಬ್ಯಾಟ್ಸ್‌ ಮನ್‌ಗಳ ಆಟಕ್ಕೆ ತಡೆಯೊಡ್ಡಬಲ್ಲರು. ಸ್ಪಿನ್‌ ವಿಭಾಗದಲ್ಲಿ ಆ್ಯಡಂ ಝಂಪ ವಿಕೆಟ್‌ ಕೀಳುವ ಬೌಲರ್‌ ಆಗಿದ್ದಾರೆ.

Advertisement

ವಿಶ್ವಕಪ್‌ ಸ್ಥಾನ ಗಳಿಸಲು ಕೊನೆಯ ಅವಕಾಶ
ವಿಶ್ವಕಪ್‌ಗ್ ಮುನ್ನ ಭಾರತದ ಕೊನೆಯ ಪಂದ್ಯವಾಗಿರುವುದರಿಂದ ಸದ್ಯ ತಂಡದಲ್ಲಿರುವ ಕೆಲವೊಂದು ಆಟಗಾರರಿಗಿದು ಕೊನೆಯ ಅವಕಾಶ. ರಿಷಬ್‌ ಪಂತ್‌, ಕೆ.ಎಲ್‌. ರಾಹುಲ್‌, ದಿನೇಶ್‌ ಕಾರ್ತಿಕ್‌, ವಿಜಯ್‌ ಶಂಕರ್‌, ರವೀಂದ್ರ ಜಡೇಜ  ರಾಷ್ಟ್ರೀಯ ಆಯ್ಕೆಗಾರರನ್ನು ಮೆಚ್ಚಿಸಲು ಉಳಿದಿರುವ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವರೇ ಎಂಬ ನಿರೀಕ್ಷೆ ಅಭಿಮಾನಿಗಳದು. ಶಂಕರ್‌ ಈ ಸರಣಿಯಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ ರಿಷಬ್‌ ಪಂತ್‌ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರೂ ವಿಕೆಟ್‌ ಕೀಪಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಅಂತಿಮ ಪಂದ್ಯದಲ್ಲಿ ಮೋಡಿ ಮಾಡಿ ಎಲ್ಲರ ಪ್ರಶಂಸೆ ಗಿಟ್ಟಿಸಿಕೊಳ್ಳುವರೇ ಕಾದುನೋಡಬೇಕಾಗಿದೆ. 

ಕೋಟ್ಲಾದಲ್ಲಿ ಭಾರತ
ಹೊಸದಿಲ್ಲಿಯ ಫಿರೋಜ್‌ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಇಲ್ಲಿಯವರೆಗೆ ಒಟ್ಟು 25 ಪಂದ್ಯಗಳಾಗಿದ್ದು, ಭಾರತ 20 ಪಂದ್ಯಗಳನ್ನಾಡಿದೆ. ಇವುಗಳಲ್ಲಿ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿದೆ. 6ರಲ್ಲಿ ಸೋತಿದೆ. ಉಳಿದೆರಡು ಪಂದ್ಯಗಳಲ್ಲಿ 2008ರಲ್ಲಿ ಭಾರತ-ಇಂಗ್ಲೆಂಡ್‌ ನಡುವಿನ 7ನೇ ಏಕದಿನ ಪಂದ್ಯವನ್ನು ಮುಂಬಯಿ ಮೇಲೆ ಭಯೋತ್ಪಾದಕರು ಮಾಡಿದ ದಾಳಿಯ ಕಾರಣದಿಂದ ರದ್ದು ಮಾಡಲಾಗಿತ್ತು. 2009ರಲ್ಲಿ ನಡೆದ ಭಾರತ-ಶ್ರೀಲಂಕಾ ಪಂದ್ಯವೂ ಫ‌ಲಿತಾಂಶವಿಲ್ಲದೆ ಕೊನೆಗೊಂಡಿತ್ತು. ಶ್ರೀಲಂಕಾ 23.3 ಓವರ್‌ಗಳಲ್ಲಿ  5 ವಿಕೆಟ್‌ ಕಳೆದುಕೊಂಡು 85 ರನ್‌ ಗಳಿಸಿದ್ದಾಗ ಕೋಟ್ಲಾದ ಪಿಚ್‌ ಅನ್ನು “ಅಪಾಯಕಾರಿ ಪಿಚ್‌’ ಎಂದು ನಿರ್ಧರಿಸಿದ ಅಂಪೈಯರ್‌ಗಳು ಪಂದ್ಯವನ್ನು ರದ್ದು ಮಾಡಿದ್ದರು. ಈ ಸ್ಟೇಡಿಯಂನಲ್ಲಿ ನಡೆದ ಕೊನೆಯ ಪಂದ್ಯ 2016ರಲ್ಲಿ. ಇಲ್ಲಿ ಭಾರತ-ನ್ಯೂಜಿಲ್ಯಾಂಡ್‌ ತಂಡಗಳು ಮುಖಾಮುಖೀಯಾಗಿದ್ದವು. ನ್ಯೂಜಿಲ್ಯಾಂಡ್‌ 6 ರನ್‌ಗಳ ಗೆಲುವು ಸಾಧಿಸಿತ್ತು. ಭಾರತ-ಆಸ್ಟ್ರೇಲಿಯ ಇಲ್ಲಿ ಒಟ್ಟು 4 ಪಂದ್ಯಗಳನ್ನಾಡಿದೆ. 4ರಲ್ಲಿ ಭಾರತ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಒಂದು ಪಂದ್ಯವನ್ನು ಮಾತ್ರ ಆಸ್ಟ್ರೇಲಿಯಕ್ಕೆ ಬಿಟ್ಟುಕೊಟ್ಟಿದೆ. ಭಾರತ ತಂಡ ಆಸ್ಟ್ರೇಲಿಯ ವಿರುದ್ಧ  ಕೊನೆಯ ಪಂದ್ಯ ಆಡಿದ್ದು 2006ರಲ್ಲಿ. ಇಲ್ಲಿ ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು. 

ಸಂಭಾವ್ಯ ತಂಡಗಳು
ಭಾರತ: ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ರಿಷಬ್‌ ಪಂತ್‌, ಕೇದಾರ್‌ ಜಾಧವ್‌, ವಿಜಯ್‌ಶಂಕರ್‌, ಭುವನೇಶ್ವರ್‌ ಕುಮಾರ್‌, ಕುಲ್‌ದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ. 

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಉಸ್ಮಾನ್‌ ಖ್ವಾಜಾ, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಗ್ಲೆನ್‌ ಮಾಕ್ಸ್‌ವೆಲ್‌, ಆ್ಯಶrನ್‌ ಟರ್ನರ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ನಥನ್‌ ಲಿಯೋನ್‌, ಜೇ ರಿಚರ್ಡ್‌ಸನ್‌, ಆ್ಯಡಂ ಝಂಪ.

Advertisement

Udayavani is now on Telegram. Click here to join our channel and stay updated with the latest news.

Next