Advertisement

5ನೇ ಜಿಲ್ಲಾ ಮಟ್ಟದ ಸ್ಕೇಟಿಂಗ್‌ ಸ್ಪರ್ಧೆ; ಪ್ಲಾಸ್ಟಿಕ್‌ ನಿಷೇಧ ಜಾಗೃತಿ

10:47 AM Sep 23, 2019 | Suhan S |

ಧಾರವಾಡ: ಜಿಲ್ಲಾ ರೋಲರ್‌ ಸ್ಕೇಟಿಂಗ್‌ ಅಸೋಸಿಯೇಷನ್‌ ಮತ್ತು ಧಾರವಾಡ ರೋಲರ್‌ ಸ್ಕೇಟಿಂಗ್‌ ಅಕಾಡೆಮಿ ವತಿಯಿಂದ ನಗರದಲ್ಲಿ ರವಿವಾರ ಐದನೇ ಜಿಲ್ಲಾಮಟ್ಟದ ಸ್ಕೇಟಿಂಗ್‌ ಸ್ಪರ್ಧೆ ಜರುಗಿತು. ಸ್ಪರ್ಧೆಗೆ ಚಾಲನೆ ನೀಡಿದ ಮಾಜಿ ಮೆಯರ್‌ ಶಿವು ಹಿರೇಮಠ ಮಾತನಾಡಿ, ಸ್ಕೇಟಿಂಗ್‌ ಸ್ಪರ್ಧೆ ಮಕ್ಕಳ ದೈಹಿಕ ಸದೃಢತೆಗೆ ಸಹಾಯಕಾರಿಯಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿ ಈ ಕ್ರೀಡೆ ಆಯೋಜಿಸುವ ಮೂಲಕ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ ಎಂದರು.

Advertisement

ಸ್ಕೇಟಿಂಗ್‌ ವಿವಿಧ ಆಟಗಳಿಗಿಂತ ಭಿನ್ನವಾಗಿದ್ದು, ಪ್ರಸ್ತುತದಲ್ಲಿ ವಿವಿಧ ಕ್ರೀಡೆಗಳಿಗೆ ಸಿಗುತ್ತಿರುವ ಮಾನ್ಯತೆ ಸ್ಕೇಟಿಂಗ್‌ ಗೆ ನೀಡುತ್ತಿರುವುದು ಉತ್ತಮ ಕಾರ್ಯ. ಜನಪ್ರತಿನಿ ಧಿಗಳು, ಕ್ರೀಡಾ ಇಲಾಖೆ ಮುತುವರ್ಜಿ ವಹಿಸಿ ಉತ್ತಮ ಪ್ರೋತ್ಸಾಹ ನೀಡಿದಲ್ಲಿ ಜಿಲ್ಲೆಯ ಮಕ್ಕಳು ಅಂತಾರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂದರು.

ಇದೇ ಸಂದರ್ಭದಲ್ಲಿ ಸ್ವತ್ಛತಾ ಹಿ ಸೇವಾ ಅಭಿಯಾನ ಅಡಿಯಲ್ಲಿ ಮಕ್ಕಳು ಸ್ಕೇಟಿಂಗ್‌ ಮೂಲಕ ಪ್ಲಾಸ್ಟಿಕ್‌ ನಿಷೇಧ ಕುರಿತು ಜಾಗೃತಿ ಮೂಡಿಸಿದರು. ಮುಖ್ಯ ತರಬೇತುದಾರ ಈರಣ್ಣಾ ಕಾಡಪ್ಪನವರ, ಸೂರ್ಯಕಾಂತ, ಮಲ್ಲಿಕಾರ್ಜುನ ಕಾಡಪ್ಪನವರ, ಶಶಿಧರ ಪಾಟೀಲ, ಭರತ ಕಾಳಿಸಿಂಗೆ, ಸಂಜಯ ಪಾಟೀಲ, ವೃಷಭ ಕರೋಲೆ, ವಿಶಾಲ ಮರಡಿ, ಈರಣ್ಣಾ ಕೊಟಿಹಾಳ, ಸಂತೋಷಡವಳಿ, ಗಿರೀಶ ಹಾಲವಾಡಿಮಠ, ಸಿದ್ದಯ್ನಾ ಹಿರೇಮಠ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next