Advertisement

ಮುಂದಿನ ವರ್ಷ 5 ಜಿ ಸ್ಪೆಕ್ಟ್ರಂ ಹರಾಜು: ಸಚಿವ ಅಶ್ವಿ‌ನಿ ವೈಷ್ಣವ್‌

07:40 PM Nov 11, 2021 | Team Udayavani |

ನವದೆಹಲಿ: ಮುಂದಿನ ವರ್ಷದ ಏಪ್ರಿಲ್‌-ಮೇನಲ್ಲಿ 5ಜಿ ಸ್ಪೆಕ್ಟ್ರಂ ತರಂಗಾಂತರಗಳನ್ನು ಹರಾಜು ಮಾಡಲಾಗುತ್ತದೆ ಎಂದು ದೂರಸಂಪರ್ಕ ಮತ್ತು ರೈಲ್ವೆ ಖಾತೆ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

Advertisement

“ಟೈಮ್ಸ್‌ ನೌ’ ಇಂಗ್ಲಿಷ್‌ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ದೂರಸಂಪರ್ಕ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹಲವು ಹಂತಗಳ ಪರಿಶೀಲನೆ ನಡೆಸುತ್ತಿದೆ. ಮುಂದಿನ ವರ್ಷದ ಫೆಬ್ರವರಿಯ ಒಳಗಾಗಿ ಪ್ರಾಧಿಕಾರ ದೂರಸಂಪರ್ಕ ಸಚಿವಾಲಯಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೋವಿಡ್-19: ಕರ್ನಾಟಕದಲ್ಲಿ ಇಂದು 286 ಹೊಸ ಪ್ರಕರಣಗಳು, 7 ಸಾವು

ಪೆಗಾಸಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೇಮಕ ಮಾಡಿರುವ ಪರಿಣತರ ಸ್ವತಂತ್ರ ತನಿಖಾ ತಂಡಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು ವೈಷ್ಣವ್‌. ಅದಕ್ಕೆ ಬೇಕಾದ ಸಿಬ್ಬಂದಿ, ಮೂಲಸೌಕರ್ಯ ಸೇರಿದಂತೆ ಎಲ್ಲಾ ನೆರವು-ಸಹಕಾರ ನೀಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next