Advertisement
ಹಲವಾರು ಕಾರ್ಪೊರೇಟ್ ಕಂಪನಿಗಳು ಅತಿವೇಗದ ಅಥವಾ ಅತಿದೊಡ್ಡ 5ಜಿ ನೆಟ್ ವರ್ಕ್ ಗಳನ್ನು ಪರಿಚಯಿಸಲು ಸ್ಪರ್ಧಿಸುತ್ತಿವೆ ಮತ್ತು ಹೆಲವು ಅಭಿವೃದ್ಧಿಶೀಲ ರಾಷ್ಟ್ರಗಳು 5ಜಿ ಯನ್ನು ದೇಶಾದ್ಯಂತ ಕಾರ್ಯಗತಗೊಳಿಸಲು ಉತ್ಸುಕರಾಗಿದ್ದಾರೆ. ಏಕೆಂದರೆ ಈ ಹೊಸ ತಂತ್ರಜ್ಞಾನವು ಕೇವಲ ಗ್ರಾಹಕರಿಗೆ ಪ್ರಯೋಜನಕಾರಿಯಲ್ಲದೆ, ವ್ಯಾಪಾರಗಳಿಗೆ, ಮೂಲ ಸೌಕರ್ಯಗಳನ್ನು ಒದಗಿಸುವ ಮತ್ತು ರಕ್ಷಣಾ ಅಪ್ಲಿಕೇಶನ್ ಗಳಿಗೆ ಪರಿವರ್ತಕ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ.
- ಲೋ-ಬ್ಯಾಂಡ್ ನೆಟ್ ವರ್ಕ್ ( ವಿಶಾಲ ವ್ಯಾಪ್ತಿ ಪ್ರದೇಶ ಆದರೆ 4ಜಿ ಗಿಂತ ಕೇವಲ ಶೇಕಡಾ 20 ರಷ್ಟು ವೇಗ)
- ಹೈ-ಬ್ಯಾಂಡ್ ನೆಟ್ ವರ್ಕ್ (ಸೂಪರ್ ಫಾಸ್ಟ್ ವೇಗ ಆದರೆ ಕಠಿಣ ಪ್ರದೇಶಗಳ ಮೇಲೆ ವೇಗವನ್ನು ಕಾಪಾಡಿಕೊಳ್ಳುವುದಿಲ್ಲ)
- ಮಿಡ್-ಬ್ಯಾಂಡ್ ನೆಟ್ ವರ್ಕ್ (ವೇಗ ಮತ್ತು ವ್ಯಾಪ್ತಿಯನ್ನು ಸಮತೋಲನಗೊಳಿಸುತ್ತದೆ).
Advertisement
ಸೂಪರ್ ಫಾಸ್ಟ್ 5 ಜಿ ನೆಟ್ ವರ್ಕ್ ಗಳನ್ನು ನಿರ್ಮಿಸುವ ವಾಹಕಗಳು ಟನ್ ಗಳಷ್ಟು ಸಣ್ಣ ಸೆಲ್ ಸೈಟ್ ಗಳನ್ನು ಸ್ಥಾಪಿಸಬೇಕು (ಪಿಜ್ಜಾ ಬಾಕ್ಸ್ ಗಳ ಗಾತ್ರದಷ್ಟು), ವಿದ್ಯುತ್ ಕಂಬಗಳಿಗೆ, ಗೋಡೆಗಳು ಅಥವಾ ಗೋಪುರಗಳಿಗೆ, ಸಾಮಾನ್ಯವಾಗಿ ಒಂದಕ್ಕೊಂದು ಸಣ್ಣ ಅಂತರದಲ್ಲಿ. ಅದೇ ಕಾರಣಕ್ಕಾಗಿ, ಈ ಸೂಪರ್ ಫಾಸ್ಟ್ ನೆಟ್ ವರ್ಕ್ ಗಳನ್ನು ಹೆಚ್ಚಾಗಿ ನಗರದಿಂದ ನಗರಕ್ಕೆ ನಿಯೋಜಿಸಲಾಗುತ್ತದೆ.
ವೈರ್ ಲೆಸ್ ಇಂಡಷ್ಟ್ರೀಸ್ ಟ್ರೇಡ್ ಗ್ರೂಪ್ ಜಿ ಎಸ್ ಎಮ್ ಎ ಪ್ರಕಾರ, ಅತ್ಯಂತ ವೇಗದ 5ಜಿ ನೆಟ್ ವರ್ಕ್ ಗಳು 4ಜಿ ಎಲ್ ಟಿ ಇ ವೇಗಕ್ಕಿಂತ ಕನಿಷ್ಠ 10 ಪಟ್ಟು. ಕೆಲವು ಐಟಿ ತಜ್ಞರು 5ಜಿ ವೇಗ 100 ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳುತ್ತಾರೆ. ಎರಡು ಗಂಟೆಯ ಚಲನ ಚಿತ್ರವನ್ನು 10 ಸೆಕೆಂಡುಗಳಿಗಿಂತ ಕಡಿಮೆ ಸಮಯದಲ್ಲಿ ಡೌನ್ ಲೋಡ್ ಮಾಡುವಷ್ಟು ವೇಗದಲ್ಲಿರಲಿದೆ. ಇತ್ತ, ಅದೇ ಸಿನಿಮಾವನ್ನು 4ಜಿ ಯಲ್ಲಿ ಡೌನ್ ಲೋಡ್ ಮಾಡಲು 7 ನಿಮಿಷ ಬೇಕಾಗುತ್ತದೆ. ಒಟ್ಟಾರೆ, ನಿಜವಾದ ಡೌನ್ ಲೋಡ್ ವೇಗವು ಸ್ಥಳ ಮತ್ತು ನೆಟ್ ವರ್ಕ್ ಟ್ರಾಫಿಕ್ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.
5ಜಿ ನೆಟ್ ವರ್ಕ್ ನ ಪ್ರಯೋಜನಗಳನ್ನು ಪಡೆಯಲು, ಗ್ರಾಹಕರು 5ಜಿ ಬೆಂಬಲಿಸುವ ಸಾಧನಗಳನ್ನು ಹೊಂದಿರಬೇಕು. ಸ್ಯಾಮ್ ಸಂಗ್, ಮೊಟೊರೊಲಾ, ಹುವಾವೇ, ಎಲ್ ಜಿ, ಒನ್ ಪ್ಲಸ್ ಮತ್ತು ಇತರ ಹಲವಾರು ತಯಾರಕ ಸಂಸ್ಥೆಗಳು 5G ಫೋನ್ ಗಳನ್ನು ಬಿಡುಗಡೆ ಮಾಡಿವೆ. ಕೆಲವು ಕಂಪನಿಗಳು, ತಯಾರಕರು 5ಜಿ ನೆಟ್ ವರ್ಕ್ ಗಳನ್ನು ಸ್ಥಾಪಿಸಲು ಕ್ಯಾರಿಯರ್ ಗಳೊಂದಿಗೆ ಕೆಲಸ ಮಾಡುತ್ತಿವೆ.
ಸಂಪೂರ್ಣ 5ಜಿ ತಂತ್ರಜ್ಞಾನ ಅಳವಡಿಸಲು ಹಲವು ವರ್ಷಗಳೇ ಬೇಕಾಗಬಹುದು. ಒಂದು ಅಂದಾಜಿನ ಪ್ರಕಾರ, 2025ರ ವೇಳೆಗೆ ಸುಮಾರು ಅರ್ಧದಷ್ಟು ಮೊಬೈಲ್ ಡಿವೈಸ್ ಗಳು 5ಜಿ ಆಗಿರುತ್ತದೆ (ಉಳಿದವು 4ಜಿ ಅಥವಾ 3ಜಿಯಲ್ಲೇ ಇರಲಿದೆ). ಎಲ್ಲಾ ತಂತ್ರಜ್ಞಾನದಂತೆ, 5ಜಿ ಯಲ್ಲೂ ಕೆಲವೊಂದಿಷ್ಟು ನ್ಯೂನತೆಗಳನ್ನು ಕಾಣಬಹುದು. ಪ್ರಸ್ತುತ ಅದು ಸ್ಪಷ್ಟವಾಗಿ ಇರದಿದ್ದರೂ, ಹೆಚ್ಚಿನ ಸಾಧನಗಳು ಕೈ ಜೋಡಿಸಿದಾಗ, ಹಿನ್ನಡೆಗಳು ಕಾಣಬಹುದು. ಸೆಲ್ಫ್ ಡ್ರೈವಿಂಗ್ ಕಾರುಗಳು ಮತ್ತು ಹೆಲ್ತ್‌ಕೇರ್ ಸಿಸ್ಟಂಗಳನ್ನು 5ಜಿ ನೆಟ್ ವರ್ಕ್ ನ ಮೇಲೆ ನಿರ್ಮಿಸಲಾಗುವುದರಿಂದ, ಅದರ ಸುರಕ್ಷತೆ ಬಗ್ಗೆ ಹಲವರಲ್ಲಿ ಆತಂಕವಿದೆ.