Advertisement

5ಜಿ 5 ವರ್ಷ ತಡವಾಗುವ ಸಾಧ್ಯತೆ

09:56 AM Nov 28, 2019 | sudhir |

ಹೊಸದಿಲ್ಲಿ: ಭಾರತದಲ್ಲಿ 5ಜಿ ಮೊಬೈಲ್‌ ಸೇವೆ ಬೇಗ ಆರಂಭವಾಗುವ ಸಾಧ್ಯತೆ ಕಾಣುತ್ತಿಲ್ಲ. ಅಮೆರಿಕ, ಚೀನ ಸೇರಿದಂತೆ ಉಳಿದೆರಡು ರಾಷ್ಟ್ರಗಳಲ್ಲಿ ಈಗಾಗಲೇ 5ಜಿ ಸೇವೆ ಬಂದಿದ್ದು, ಮುಂದಿನ ವರ್ಷ ಭಾರತದಲ್ಲಿ 5ಜಿ ಸೇವೆ ದೊರೆಯಲಿದೆ ಎಂದು ಹೇಳಲಾಗುತ್ತಿತ್ತು.

Advertisement

ಆದರೆ ಪ್ರಸ್ತುತ ವಿದ್ಯಮಾನಗಳು ಹೇಳುವಂತೆ ಮುಂದಿನ 5 ವರ್ಷಗಳ ಕಾಲ ಭಾರತದಲ್ಲಿ ಯಾವುದೇ 5ಜಿ ಸೇವೆಗಳು ದೊರೆಯುವ ಸಾಧ್ಯತೆ ಇಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ವರ್ಷದಲ್ಲಿ 5ಜಿ ದೇಶಕ್ಕೆ ಕಾಲಿಡಬೇಕಿತ್ತು. ಆದರೆ ಭಾರತದಲ್ಲಿ ಅದಕ್ಕೆ ಸಿದ್ಧತೆಗಳು ಪೂರ್ಣಗೊಳ್ಳದೇ ಇದ್ದ ಕಾರಣ ಬೇಗ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಈ ಕುರಿತಂತೆ ಮಾಹಿತಿ ನೀಡಿರುವ ಸೆಲ್ಯುಲರ್‌ ಅಪರೇಶನ್‌ ಅಸೋಷಿಯೇಶನ್‌ ಆಫ್ ಇಂಡಿಯಾ (ಸಿಓಎಐ)ದ ನಿರ್ದೇಶಕ ರಂಜನ್‌ ಎಸ್‌. ಮ್ಯಾಥು ಅವರು ಇಲ್ಲಿ 5ಜಿ ಸೇವೆಗೆ ಸ್ಪೆಕ್ಟ್ರಂಗಳು, ಹೊಸ ಬ್ಯಾಂಡ್‌ಗಳು ಮತ್ತು ಕೆಲವು ಮೂಲ ಸೌಕರ್ಯಗಳ ಅಲಭ್ಯತೆ  ಕಾರಣ 5 ವರ್ಷಗಳು ಮುಂದೆ ಹೋಗುವ ಸಾಧ್ಯತೆ ಇದೇ ಎಂದು ಹೇಳಿದ್ದಾರೆ. ರಂಜನ್‌ ಎಸ್‌. ಮ್ಯಾಥು ಅವರು ಏರ್‌ಟೆಲ್‌, ರಿಲಾಯನ್ಸ್‌ ಜಿಯೋ, ವಡಫೋನ್‌ ಐಡಿಯಾ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದ್ದಾರೆ. 4ಜಿ ಮೊಬೈಲ್‌ ಸೇವೆಗಿಂತ 5ಜಿ 100 ಪಟ್ಟು ವೇಗವನ್ನು ಹೊಂದಿದೆ. ಚಲನಚಿತ್ರಗಳು ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್‌ ಆಗುವಷ್ಟು ವೇಗವನ್ನು ಅದು ಒದಗಿಸುತ್ತದೆ. 4ಜಿ ಡಾಟಾ ಯೋಜನೆಗಳಿಗೆ ಹೋಲಿಸಿದರೆ 5ಜಿ ದುಬಾರಿಯೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next