ಲಂಡನ್ : ಕೆಲ ದಿನಗಳ ಹಿಂದೆ ಬರ್ಮಿಂಗ್‌ಹಾಮ್‌ನಲ್ಲಿ ಒಂದು ಮೊಬೈಲ್ ಟವರ್ ಬೆಂಕಿ ಹತ್ತಿಕೊಂಡು ಉರಿಯಿತು. ಮರುದಿನ ಲಿವರ್‌ಪೂಲ್‌ನ ಟೆಲಿಕಮ್ಯುನಿಕೇಶನ್ ಬಾಕ್ಸ್ ಬೆಂಕಿಗಾಹುತಿಯಾದ ಸುದ್ದಿ ಬಂತು. ಇದಾಗಿ ಒಂದು ತಾಸಿನ ಬಳಿಕ ಲಿವರ್‌ಪೂಲ್‌ನಲ್ಲೇ ಇನ್ನೊಂದು ಮೊಬೈಲ್‌ಫೋನ್ ಟವರ್‌ಗೆ ಬೆಂಕಿ ಹತ್ತಿರುವ ಮಾಹಿತಿ ಬಂತು. ಹೀಗೆ ಕಳೆದೊಂದು ವಾರದಲ್ಲಿ ಬ್ರಿಟನ್ ಒಂದರಲ್ಲೇ ಕನಿಷ್ಠ 30 ಮೊಬೈಲ್ ಟವರ್‌ಗಳು ಹಾಗೂ ಮೊಬೈಲ್ ಸೇವೆ ಒದಗಿಸುವ ಇನ್ನಿತರ ಸ್ಥಾಪನೆಗಳಿಗೆ ಬೆಂಕಿ ಹಚ್ಚಲಾಗಿತು.
ಇದೇನು ಕೋವಿಡ್ 19 ಕಾಂಡದ ನಡುವೆ ಮೊಬೈಲ್ ಟವರ್‌ಗಳೇಕೆ ಬೆಂಕಿಗಾಹುತಿಯಾಗುತ್ತಿವೆ? ಈ ಸುದ್ದಿಗೂ ವೈರಾಣುವಿಗೂ ಏನು ಸಂಬಂಧ ಎಂದು ತಲೆಕೆಡಿ ಸಿಕೊಳ್ಳುತ್ತಿದ್ದೀರಾ? ಇದೆಲ್ಲ ಆದದ್ದು ಒಂದು ಸುಳ್ಳು ಮಾಹಿತಿಯಿಂದ.
ಸಾಮಾಜಿಕ ಮಾಧ್ಯಮಗಳಲ್ಲಿ ಯಾರೋ ಕಿಡಿಗೇಡಿಗಳು ಕೆಲವು ದಿನಗಳ ಹಿಂದೆ 5ಜಿ ಇಂಟರ್‌ನೆಟ್ ತರಂಗದಿಂದ ಕೋವಿಡ್-19 ವೈರಾಣು ಹರಡುತ್ತದೆ ಎಂಬ ತಪ್ಪು ಮಾಹಿತ್ನಿ ತೇಲಿಬಿಟ್ಟಿದ್ದರು. ಇದು ತಿಳಿದಕೂಡಲೇ ಸಂಬಂಧ ಪಟ್ಟವರು ಈ ಮಾಹಿತಿಯನ್ನು ಕಿತ್ತು ಹಾಕಿದ್ದಲ್ಲದೆ, ಈ ಕುರಿತು ಸ್ಪಷ್ಟೀಕರಣವನ್ನೂ ನೀಡಿದ್ದರು. ಆದರೆ ಅದಾಗಲೇ ಈ ಸುಳ್ಳು ಮಾಹಿತಿ ಸಾಕಷ್ಟು ಕಡೆ ಹರಡಿತ್ತು ಹಾಗೂ ಮಾಡಬೇಕಾದ ಹಾನಿಯನ್ನು ಮಾಡಿತ್ತು. ಬ್ರಿಟನ್ ಒಂದರಲ್ಲೇ ಮೊಬೈಲ್ ಸೇವೆ ಒದಗಿಸುವ ಹಲವು ಟವರ್‌ಗಳಿಗೆ ಜನರು ಆಕ್ರೋಶದಿಂದ ಬೆಂಕಿ ಹಚ್ಚಿದರು. ಕೆಲವೆಡೆ ಪ್ರತಿಭಟನೆಯೂ ನಡೆಯಿತು. ದೂರಸಂಪರ್ಕ ಕಂಪೆನಿಗಳ ನೌಕರರನ್ನು, ಟೆಲಿಕಾಂ ಎಂಜಿನಿಯರುಗಳನ್ನು ಥಳಿಸಿದ ಘಟನೆಗಳೂ ನಡೆದವು. ಉದ್ದೇಶಪೂರ್ವಕವಾಗಿ ಹರಡಿದ ತಪ್ಪು ಮಾಹಿತಿಯೊಂದು ಎಷ್ಟು ಅನಾಹುತಕಾರಿಯಾಗಬಹುದು ಎನ್ನುವುದಕ್ಕೆ 5ಜಿ ಯಿಂದ ಕೋವಿಡ್ ಹರಡುತ್ತದೆ ಎಂಬ ಈ ಕಿಡಿಗೇಡಿ ಕೃತ್ಯವೇ ಸಾಕ್ಷಿ.
5ಜಿಯಿಂದ ಕೋವಿಡ್ ಹರಡುತ್ತದೆ ಎಂಬ ಸಂದೇಶ ಮೊದಲು ಹರಿದಾಡಿದ್ದು ಫೇಸ್‌ಬುಕ್‌ನಲ್ಲಿ. ಬಳಿಕ ಅದು ವಾಟ್ಸಪ್‌ಗೆ ಬಂತು. ಬಳಿಕ ಯೂಟ್ಯೂಬ್‌ನಲ್ಲೂ ಕಾಣಿಸಿಕೊಂಡಿತು. 5ಜಿಯಿಂದ ಹೊರಬೀಳುವ ತರಂಗಗಳು ಮನುಷ್ಯನ ಶರೀರದಲ್ಲಿ ಕೆಲವೊಂದು ಬದಲಾವ ಣೆಗಳನ್ನು ಉಂಟು ಮಾಡುತ್ತವೆ. ಈ ಬದಲಾ ವಣೆಗಳಿಂದ ಕೋವಿಡ್-19 ಸೋಂಕಿಗೆ ಸುಲಭ ತುತ್ತಾಗಿ ಸಾವು ಸಂಭವಿಸುತ್ತದೆ ಎಂಬ ಪೊಳ್ಳು ವೈಜ್ಞಾನಿಕ ವಿವರಣೆ ಯೂ ಈ ಸಂದೇಶದಲ್ಲಿತ್ತು.
ಅಮೆರಿಕದಲ್ಲಿ ಕೋವಿಡ್‌ನ ಎಪಿಸೆಂಟರ್ ಆಗಿರುವ ನ್ಯೂಯಾರ್ಕ್ ನಗರದಲ್ಲೂ 5ಜಿ ಟವರ್‌ಗಳನ್ನು ಕೆಡವಿ ಹಾಕಲಾಗಿದೆ. ಕೆಲವು ಟೆಲಿಫೋನ್ ಎಕ್ಸ್‌ಚೆಂಜ್‌ಗಳಿಗೆ ನುಗ್ಗಿ ದಾಂಧಲೆ ಎಸಗಿದ ಘಟನೆಗಳು ಸಂಭವಿಸಿದ ಬಳಿಕ ಟವರ್‌ಗಳಿಗೆ ಪೊಲೀಸ್ ರಕ್ಷಣೆಯನ್ನು ನೀಡಲಾಯಿತು. ಇದು 5ಜಿ ವಿರುದ್ಧ ಮಾಡಿರುವ ಒಂದು ವ್ಯವಸ್ಥಿತ ಷಡ್ಯಂತ್ರ ವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.