ಲಕ್ನೋ(ಉತ್ತರಪ್ರದೇಶ):2016ರಲ್ಲಿ ಹತ್ತು ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ಕೋರ್ಟ್ ಸೈಕಲ್ ರಿಕ್ಷಾ ಚಾಲಕನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ:Protest: ನಿಮಗೆ ಇನ್ನೆಷ್ಟು ಬಲಿ ಬೇಕು… ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿರುವ ಈ ಪ್ರಕರಣ ಅಪರೂಪದಲ್ಲೇ ಅಪರೂಪದ ಪ್ರಕರಣವಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ಜಡ್ಜ್ ಶ್ಯಾಮ್ ಮೋಹನ್ ಜೈಸ್ವಾಲ್ ಆದೇಶದಲ್ಲಿ ತಿಳಿಸಿದ್ದು, ಆರೋಪಿ ಕೇದಾರನಾಥ್ ರಾಥೋಡ್ ಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.
ಆರೋಪಿ ಯಾವುದೇ ವಿನಾಯ್ತಿಗೆ ಅರ್ಹನಲ್ಲ:
ಈ ಪ್ರಕರಣವನ್ನು ಸೆಷನ್ಸ್ ಕೋರ್ಟ್ ಅಲಹಾಬಾದ್ ಹೈಕೋರ್ಟ್ ಗೆ ರವಾನಿಸಿದ್ದು, ಅಲ್ಲಿಯೂ ಮರಣದಂಡನೆ ಶಿಕ್ಷೆ ಎತ್ತಿಹಿಡಿದಿತ್ತು. ಆರೋಪಿ ಎಸಗಿರುವ ಕೃತ್ಯ ಪೈಶಾಚಿಕವಾಗಿದ್ದು, ಈತ ಯಾವುದೇ ವಿನಾಯ್ತಿಗೂ ಅರ್ಹನಲ್ಲ ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಬಾಲಕಿ ಬಾಯೊಳಗೆ ಬಟ್ಟೆ ತುರುಕಿದ್ದ!
ಬಾಲಕಿ ಅಳಲು ಪ್ರಾರಂಭಿಸಿದಾಗ ಆರೋಪಿ ರಾಥೋಡ್ ಆಕೆಯ ಬಾಯಿಗೆ ಬಟ್ಟೆ ತುಂಬಿದ್ದು, ಇದರ ಪರಿಣಾಮ ಆಕೆ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಳು. ಬಾಲಕಿಯ ಶವ ಪತ್ತೆಯಾದ ನಂತರ 2016ರ ಮಾರ್ಚ್ 17ರಂದು ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ವೇಳೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.