Advertisement

ತಿಂಗಳೆಯಲ್ಲಿ  58ನೇ ಧರ್ಮ,ಕಲೆ,ಸಾಹಿತ್ಯೋತ್ಸವ, ಪ್ರಶಸ್ತಿ ಪ್ರದಾನ

12:30 AM Mar 10, 2019 | |

ಹೆಬ್ರಿ: ಜೀವನದಲ್ಲಿ ಸತ್ಯವನ್ನು ಅಳವಡಿಸಿಕೊಂಡಾಗ ಜೀವನ ಪಾವನವಾಗುವುದರೊಂದಿಗೆ ಪರಮಾತ್ಮನನ್ನು ಕಾಣಲು ಸಾಧ್ಯವಾ ಗುತ್ತದೆ. ತಿಂಗಳೆಯಲ್ಲಿ ತಿರುಪತಿ ಶ್ರೀನಿವಾಸನ ಕಲ್ಯಾಣ ಮಹೋತ್ಸವ ನಡೆದಿರುವುದರಿಂದ ಭಗವಂತನ ಕೃಪೆಗೆ ಎಲ್ಲರೂ ಪಾತ್ರರಾಗಿದ್ದೇವೆ ಎಂದು ಶೃಂಗೇರಿ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು.

Advertisement

ಅವರು ಶುಕ್ರವಾರ ಹೆಬ್ರಿ ತಾಲೂಕಿನ ತಿಂಗಳೆ ಗರಡಿಯ 58ನೇ ಧರ್ಮ, ಕಲೆ ಸಾಹಿತ್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ತಿಂಗಳೆ ಪ್ರಶಸಿ ಯನ್ನು ಡಾ| ವೀಣಾ ಬನ್ನಂಜೆ ಅವರಿಗೆ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ತಿಂಗಳೆ ಪ್ರಶಸ್ತಿ ಪ್ರದಾನ 
ತಿಂಗಳೆ ಪ್ರಶಸ್ತಿ ಸ್ವೀಕರಿಸಿದ ಡಾ| ವೀಣಾ ಬನ್ನಂಜೆ ಮಾತನಾಡಿ, ಈ ಪ್ರಶಸ್ತಿ ತಿಂಗಳೆಯಲ್ಲಿ 43 ವರ್ಷಗಳಿಂದ ನಿರಂತರ ಧರ್ಮದ ಸಂದೇಶ ನೀಡಿದ ನನ್ನ ತಂದೆಯವರಿಗೆ ಸಲ್ಲುತ್ತದೆ ಎಂದರು. ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆ ವಹಿಸಿದ್ದರು. ದೈವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರಮುಖ ಧನ ಸಹಾಯ ನೀಡಿದವರನ್ನು ಸಮ್ಮಾನಿಸಲಾಯಿತು. 

ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, ಸಂಸದ ಬಿ.ವೈ. ರಾಘವೇದ್ರ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಮಂದಾರ್ತಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಧನಂಜಯ ಶೆಟ್ಟಿ, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉದ್ಯಮಿ ಭುವನೇಂದ್ರ ಕಿದಿಯೂರು, ಮನೋಹರ್‌ ಎಸ್‌. ಶೆಟ್ಟಿ, ದಿನೇಶ್‌ ಪೈ, ಮನೋಜ್‌ ಕುಮಾರ್‌ ಉಪಸ್ಥಿತರಿದ್ದರು.

ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಪ್ರಸ್ತಾವನೆಗೈದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ಸ್ವಾಗತಿಸಿ, ಬೈಕಾಡಿ ಸುಪ್ರಸಾದ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವೆಂಕಟೇಶ್‌ ಮೂರ್ತಿ ಅವರ ಧಾರ್ಮಿಕ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮ ದೈವಗಳ ನೇಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next