Advertisement

ಕೋವಿಡ್ ಕಳವಳ: 24 ಗಂಟೆಯಲ್ಲಿ 57,117 ಹೊಸ ಕೋವಿಡ್ ಪ್ರಕರಣಗಳು, 764 ಮಂದಿ ಸಾವು

01:47 PM Aug 01, 2020 | keerthan |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಅಂಕೆ ಮೀರಿ ಬೆಳೆಯುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 57,117 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರೊಂದಿಗೆ ದೇಶದ ಕೋವಿಡ್ ಸೋಂಕಿತರ ಸಂಖ್ಯೆ 16,95,988 ಕ್ಕೆ ಏರಿಕೆಯಾಗಿದೆ.

Advertisement

ಶುಕ್ರವಾರ ಒಂದೇ ದಿನ ದೇಶದಲ್ಲಿ 764 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ ಮಾರ್ಚ್ ನಿಂದ ದೇಶದಲ್ಲಿ ಒಟ್ಟು 36,511 ಮಂದಿ ಸೋಂಕಿತರು ಮರಣ ಹೊಂದಿದ್ದಾರೆ. ದೇಶದ ಮೊದಲ ಕೋವಿಡ್ ಸಾವು ಕರ್ನಾಟಕದ ಕಲುಬುರ್ಗಿಯಲ್ಲಿ ದಾಖಲಾಗಿತ್ತು.

ದೇಶದಲ್ಲಿ ಇದುವರೆಗೆ 10,94,374 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 5,65,103 ಸಕ್ರಿಯ ಪ್ರಕರಣಗಳಿವೆ.

ತೆಲಂಗಾಣ ರಾಜ್ಯದಲ್ಲಿ ಶುಕ್ರವಾರ 2083 ಸೋಂಕು ಪ್ರಕರಣಗಳು ದೃಢವಾಗಿದೆ. ಇದು ಆ ರಾಜ್ಯದಲ್ಲಿ ಒಂದು ದಿನದಲ್ಲಿ ದಾಖಲಾದ ಅತೀ ಹೆಚ್ಚು ಸೋಂಕಿತರ ಸಂಖ್ಯೆ. ಒಟ್ಟು ಸೋಂಕಿತರ ಸಂಖ್ಯೆ 64,786ಕ್ಕೆ ಏರಿಕೆಯಾಗಿದೆ

ಕರ್ನಾಟಕ ರಾಜ್ಯದಲ್ಲಿ ಶುಕ್ರವಾರ 5483 ಹೊಸ ಕೋವಿಡ್ -19 ಪ್ರಕರಣಗಳು ದೃಢವಾಗಿದೆ. 84 ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 2220, ಬಳ್ಳಾರಿಯಲ್ಲಿ 340, ಉಡುಪಿಯಲ್ಲಿ 213 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 204 ಹೊಸ ಪ್ರಕರಣಗಳು ಶುಕ್ರವಾರ ದೃಢವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next