Advertisement

ವಂಡರ್‌ ಬುಕ್‌ ಆಫ್ ರೆಕಾರ್ಡ್ಸ್ ಗಾಗಿ 30 ನಿಮಿಷ ಮಂಜುಗಡ್ಡೆ ನೀರಲ್ಲಿ ಕುಳಿತರು!

07:54 PM Feb 04, 2022 | Team Udayavani |

ಕರೀಂನಗರ: ಮಂಜುಗಡ್ಡೆಯ ತುಂಡನ್ನು 1 ನಿಮಿಷ ಕೈಯ್ಯಲ್ಲಿ ಹಿಡಿದಿಟ್ಟುಕೊಳ್ಳಿ ಎಂದು ಹೇಳಿದರೆ, ಕೆಲವು ಸೆಕೆಂಡುಗಳ ಕಾಲ ಹಿಡಿದು “ಈ ಚಾಲೆಂಜ್‌ ಬೇಡವೇ ಬೇಡ’ ಎಂದು ಹಿಂದೆ ಸರಿಯುವವರೇ ಹೆಚ್ಚು.

Advertisement

ಆದರೆ, ತೆಲಂಗಾಣದ ಕರೀಂನಗರದ ಥೀಗಳಗುಟ್ಟಪಳ್ಳಿಯಲ್ಲಿ 56 ವರ್ಷದ ವ್ಯಕ್ತಿ, ಮಂಜುಗಡ್ಡೆ ನೀರಿರುವ ಡ್ರಮ್‌ನಲ್ಲಿ ಕುತ್ತಿಗೆಯವರೆಗೂ ಮುಳುಗಿ, 30 ನಿಮಿಷಗಳ ಕಾಲ ಕುಳಿತಿದ್ದಾರೆ!

ವಂಡರ್‌ ಬುಕ್‌ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರೂ ದಾಖಲಾಗಬೇಕೆಂಬ ಉದ್ದೇಶದಿಂದ ಕಮಾರಪು ರವೀಂದರ್‌ ಈ ಸಾಹಸ ಮಾಡಿದ್ದಾರೆ.

ಇದನ್ನೂ ಓದಿ:ಧರ್ಮಸ್ಥಳಕ್ಕೆ ಫೆ. 12 ಕ್ಕೆ ಬನ್ನಿ:ಮಾಜಿ ಶಾಸಕ ಬೇಳೂರಿಗೆ ಶಾಸಕ ಹಾಲಪ್ಪ ಆಹ್ವಾನ

2017ರಲ್ಲಿ ಕೇವಲ 47.30 ನಿಮಿಷಗಳಲ್ಲಿ ಬಿರುಬಿಸಿಲಲ್ಲೇ 10,000 ಮೀ. ಓಡಿ ದಾಖಲೆ ನಿರ್ಮಿಸಿದ್ದರು. ನನಗೆ ಯಾವ ನೋವೂ ಇಲ್ಲ, ಆರೋಗ್ಯವಾಗಿ, ಸಂತೋಷವಾಗಿದ್ದೇನೆ ಎನ್ನುತ್ತಾರೆ ರವೀಂದರ್‌.

Advertisement

 

 

 

 

Advertisement

Udayavani is now on Telegram. Click here to join our channel and stay updated with the latest news.

Next