Advertisement

Amazon Prime Day Saleನಲ್ಲಿ ಶೇ.56 ರಷ್ಟು ಬೆಳವಣಿಗೆ

01:08 PM Jul 23, 2023 | Team Udayavani |

ಬೆಂಗಳೂರು: ಅಮೆಜಾನ್  ಇ-ಕಾಮರ್ಸ್ ಜು. 15 ಮತ್ತು 16 ರಂದು ಆಯೋಜಿಸಿದ್ದ ಪ್ರೈಮ್ ಡೇ ಮಾರಾಟದಲ್ಲಿ ಶೇ. 56 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.

Advertisement

ಅಮೆಜಾನ್ ಪ್ರೈಮ್  ಸದಸ್ಯರಿಗೆ ಜುಲೈ 15 ಮತ್ತು 16 ರಂದು ನಡೆದ ಪ್ರೈಮ್ ಡೇ ಸೇಲ್‌ನಲ್ಲಿ ಕಂಪನಿಯು ಪ್ರತಿ 2 ಸೆಕೆಂಡಿಗೆ ಒಂದು ದೊಡ್ಡ ಉಪಕರಣವನ್ನು, ಪ್ರತಿ ಸೆಕೆಂಡಿಗೆ ಸುಮಾರು ಐದು ಸ್ಮಾರ್ಟ್‌ಫೋನ್‌ಗಳನ್ನು ಮತ್ತು ಪ್ರತಿ ಸೆಕೆಂಡಿಗೆ ಸುಮಾರು ಎರಡು ಆಟಿಕೆಗಳನ್ನು ಮಾರಾಟ ಮಾಡಿತು.

‘Amazon ವ್ಯಾಪಾರವು 56 ಶೇಕಡಾ ಮಾರಾಟ ಬೆಳವಣಿಗೆಯನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಎಲೆಕ್ಟ್ರಾನಿಕ್ಸ್‌ನಲ್ಲಿ ಎರಡು ಪಟ್ಟು ಬೆಳವಣಿಗೆ, ಕಚೇರಿ ಪೀಠೋಪಕರಣಗಳಲ್ಲಿ 1.7 ಪಟ್ಟು ಬೆಳವಣಿಗೆ ಮತ್ತು ಅಡುಗೆ ಉತ್ಪನ್ನಗಳು ಮತ್ತು ಉಪಕರಣಗಳಲ್ಲಿ 1.4 ಪಟ್ಟು ಬೆಳವಣಿಗೆ’ ಎಂದು ಕಂಪನಿ ಹೇಳಿದೆ.

ಅಮೆಜಾನ್ ಪ್ರೈಮ್ ಡೇ ಈವೆಂಟ್‌ನಲ್ಲಿ ಪ್ರೈಮ್ ಸದಸ್ಯತ್ವದಲ್ಲಿ ಭಾರಿ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ 14 ಪ್ರತಿಶತದಷ್ಟು ಹೆಚ್ಚಿನ ಸದಸ್ಯರು ಶಾಪಿಂಗ್ ಮಾಡಿದ್ದಾರೆ ಎಂದು ತಿಳಿಸಿದೆ.

ಭಾರತದ 98 ಪ್ರತಿಶತ ಪಿನ್ ಕೋಡ್‌ಗಳ ಪ್ರೈಮ್ ಗ್ರಾಹಕರು ಫ್ರಂಟ್ ಲೋಡ್ ವಾಷಿಂಗ್ ಮೆಷಿನ್‌ಗಳು, ಹೆಡ್‌ಫೋನ್‌ಗಳು, ಉಡುಪುಗಳು, ಶೂಗಳು, ಐಷಾರಾಮಿ ಸೌಂದರ್ಯ ಉತ್ಪನ್ನಗಳು, ಸ್ಮಾರ್ಟ್‌ಫೋನ್‌ಗಳು, ಮಕ್ಕಳ ಉತ್ಪನ್ನಗಳನ್ನು ಖರೀದಿಸಿದ್ದಾರೆ, ”ಎಂದು ಕಂಪನಿ ಹೇಳಿದೆ.

Advertisement

ಪ್ರತಿ ಸೆಕೆಂಡಿಗೆ ಸರಾಸರಿ 1.8 ಆಟಿಕೆಗಳು ಮಾರಾಟವಾಗುವುದರೊಂದಿಗೆ ಆಟಿಕೆಗಳು ಒಂದೇ ದಿನದ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿವೆ. ಅಮೆಜಾನ್ ಫ್ರೆಶ್‌ನಲ್ಲಿ ಪ್ರೈಮ್ ಡೇ ಸಮಯದಲ್ಲಿ ಗೃಹೋಪಯೋಗಿ ವಸ್ತುಗಳು ಮತ್ತು ಅಡುಗೆ ಮನೆ ಸಾಧನಗಳಾದ ಮಿಕ್ಸರ್ ಗ್ರೈಂಡರ್‌ಗಳು, ವಾಟರ್ ಪ್ಯೂರಿಫೈಯರ್‌ಗಳು ಮತ್ತು ವಾಟರ್ ಹೀಟರ್‌ಗಳ ಮಾರಾಟವು ಎರಡು ಪಟ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

“ಈ ಪ್ರೈಮ್ ಡೇ, ಪ್ರತಿ ಸೆಕೆಂಡಿಗೆ ಸರಿಸುಮಾರು ಐದು ಸ್ಮಾರ್ಟ್‌ಫೋನ್‌ಗಳು ಮಾರಾಟವಾಗುತ್ತಿದ್ದು, 70 ಪ್ರತಿಶತದಷ್ಟು ಬೇಡಿಕೆಯು ಶ್ರೇಣಿ 2 ಮತ್ತು 3 ನಗರಗಳಿಂದ ಬರುತ್ತಿದೆ.  ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳ ಮಾರಾಟ 25 ಪಟ್ಟು ಹೆಚ್ಚಿದೆ ಮತ್ತು ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳಿಗೆ ಪ್ರೈಮ್ ಸದಸ್ಯರಿಂದ  ಹೆಚ್ಚಿನ ಬೇಡಿಕೆ ಕಂಡುಬಂದಿದೆ, ”ಎಂದು ಕಂಪನಿ ಹೇಳಿದೆ.

ಒನ್‌ಪ್ಲಸ್‌ ನಾರ್ಡ್‌ 3 5ಜಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ, ಮೊಟೊರೊಲಾ ರೇಝರ್‌ 40 ಸಿರೀಸ್, ರಿಯಲ್‌ಮಿ ನಾರ್ಝೋ 60 ಸಿರೀಸ್ ಮತ್ತು ಐಕ್ಯೂ ನಿಯೋ 7 ಪ್ರೋ 5ಜಿ ಫೋನ್‌ಗಳಿಗೆ ಪ್ರೈಮ್ ಸದಸ್ಯರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಫ್ಯಾಷನ್ ಮತ್ತು ಬ್ಯೂಟಿ ವಿಭಾಗದಲ್ಲಿ ಪ್ರೈಮ್‌ ಸದಸ್ಯರು ಪ್ರತಿ 0.4 ಸೆಕೆಂಡಿಗೊಮ್ಮೆ ಹೊಸ ಜೋಡಿ ಶೂಗಳನ್ನು, 1.6 ಸೆಕೆಂಡಿಗೊಮ್ಮೆ ಹ್ಯಾಂಡ್‌ಬ್ಯಾಗ್ ಅನ್ನು ಖರೀದಿಸಿದ್ದಾರೆ ಮತ್ತು ಮಾರ್ಕ್ಸ್‌ & ಸ್ಪೆನ್ಸರ್‌, ಟಾಮಿ ಹಿಲ್‌ಫಿಗರ್, ರೇ ಬ್ಯಾನ್‌, ಬಿಬಾ ಮತ್ತು ಲಿವೈಸ್‌ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಡೀಲ್‌ಗಳನ್ನು ಪಡೆದಿದ್ದಾರೆ.

“ಗ್ಯಾಲಾಕ್ಸಿ ಎಂ34 5ಜಿ ಯಶಸ್ಸು ನಮಗೆ ಖುಷಿ ನೀಡಿದೆ. ಇದು ಅಮೆಜಾನ್ ಪ್ರೈಮ್ ಡೇಯಲ್ಲಿ ಹೊಸ ಬಿಡುಗಡೆಗಳ ಪೈಕಿ ನಂ. 1 ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ. ಅಮೆಜಾನ್ ಸ್ಪೆಷಲ್ ಆಗಿರುವ ಗ್ಯಾಲಕ್ಸಿ ಎಂ34 5ಜಿ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಂ ಸಿರೀಸ್ ಜನಪ್ರಿಯತೆಯನ್ನು ಮುಂದುವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next