Advertisement
ಕೇಂದ್ರ ಸರಕಾರ ಆಪರೇಷನ್ ಕಾವೇರಿ ಮೂಲಕ ಸೂಡಾನ್ ನಿಂದ ವಿಶೇಷ ವಿಮಾನದಲ್ಲಿ ಶನಿವಾರ ಬೆಂಗಳೂರಿಗೆ ಬಂದು ಅಲ್ಲಿದ ಸ್ವಗ್ರಾಮಕ್ಕೆ ಕರೆತರಲಾಗಿದೆ. ಉಳಿದವರು ಎರಡನೇ ಹಂತದಲ್ಲಿ ಬರಲಿದ್ದಾರೆ.
ಯುದ್ದ ಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ನಮ್ಮ ಮನವಿಗೆ ಸ್ಪಂದಿಸಿರುವ ಕೇಂದ್ರ ಮತ್ತು ರಾಜ್ಯ ಸರಕಾರ ನಮ್ಮನ್ನು ಸುರಕ್ಷಿತವಾಗಿ ಕರೆತಂದಿರುವುದಕ್ಕೆ ಎಲ್ಲರ ಪರವಾಗಿ ಸಂತಸ ವ್ಯಕ್ತಪಡಿಸಿರುವ ಕಾಂತುಕುಮಾರ್, ಶ್ಯಾಂಡಿರವರು ಮಾತನಾಡಿ 10 ದಿನಗಳ ಕಾಲ ಊಟ, ನಿದ್ರೆ ಬಿಟ್ಟು ಜೀವ ಭಯದಿಂದ ಕಾಲಕಳೆದೆವು. ಅಲ್ಲಿನ ಸರಕಾರದ ಅಧಿಕಾರಿಗಳು, ರಾಯಬಾರಿ ಕಚೇರಿ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದರು, ಸುಮಾರು ಆರು ಕಿ.ಮೀ.ದೂರ ಕಾಲ್ನಡಿಗೆಯಲ್ಲಿ ಬೇರೆ ಕಡೆಗೆ ತೆರಳಿ, ಸುರಕ್ಷಿತ ಸ್ಥಳ ತಲುಪಿದ್ದೆವು. ಅಲ್ಲಿಂದ ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದು ವಿಶೇಷ ಬಸ್ ಮೂಲಕ ಗ್ರಾಮಕ್ಕೆ ಕಳುಹಿಸಿಕೊಟ್ಟರೆಂದು ಸಂತಸ ವ್ಯಕ್ತಪಡಿಸಿ ಉಳಿದವರು ಶೀಘ್ರವಾಪಸ್ ಬರುವ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಕಷ್ಟಗಳಿಗೆ ಸ್ಪಂದಿಸಿದ ಪತ್ರಿಕೆ ಮತ್ತು ಆನ್ ಲೈನ್ ನಲ್ಲಿ ಪ್ರಕಟಿಸಿ ಸರಕಾರದ ಗಮನ ಸೆಳೆದಿದ್ದಕ್ಕಾಗಿ ಉದಯವಾಣಿಗೆ ಧನ್ಯವಾದ ತಿಳಿಸಿದರು. ಈ ವೇಳೆ ಸಂಕಷ್ಟಕ್ಕೆ ಸಿಲುಕಿದ್ದವರ ಕುಟುಂಬದವರು, ಗ್ರಾಮದ ಮುಖಂಡರು ಇದ್ದರು. ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ 56 ಮಂದಿ ಸುಡಾನ್‌ಗೆ ಆಯುರ್ವೇದ ಕೇಶತೈಲ, ಮಸಾಜ್ ಮಾಡಿ ಸಂಪಾದನೆ ಮಾಡಲು ದೇಶಕ್ಕೆ ತೆರಳಿದ್ದರು. ಅಲ್ಲಿ ಆರಂಭವಾದ ಅಂತರಿಕ ಯುದ್ದದಲ್ಲಿ ಸಿಲುಕಿ ನೆರವಿಗಾಗಿ ಮೊರೆ ಇಟ್ಟಿದ್ದ ಹಿನ್ನೆಲೆಯಲ್ಲಿ ಸರಕಾರ ಆಪರೇಷನ್ ಕಾವೇರಿ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿದೆ.