Advertisement

ಚೀನದ 11 ಪ್ರಾಂತ್ಯದಲ್ಲಿ ಪ್ರವಾಹ, ಭೂಕುಸಿತ: 56 ಬಲಿ, 22 ನಾಪತ್ತೆ

03:27 PM Jul 04, 2017 | Team Udayavani |

ಬೀಜಿಂಗ್‌: ಚೀನದ 11 ಪ್ರಾಂತ್ಯಗಳಲ್ಲಿ ಜಡಿಮಳೆ, ಪ್ರವಾಹ, ಭೂಕುಸಿತದಿಂದ ಉಂಟಾದ ದುರಂತದಲ್ಲಿ ಕನಿಷ್ಠ 56 ಮಂದಿ ಮಡಿದು ಇತರ ಸುಮಾರು 22 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. 

Advertisement

ಝೆಝಿಯಾಂಗ್‌, ಆನ್‌ಹುಯಿ, ಜಿಯಾಂಗ್ಸಿ, ಹುನಾನ್‌, ಗ್ವಾಂಗ್‌ಡಾಂಗ್‌, ಶಾಂಕಿಂಗ್‌, ಸಿಶುವಾನ್‌, ಗಿಝೋ, ಯುನಾನ್‌ ಮತ್ತು ಗ್ವಾಂಗ್ಸಿ ಪ್ರಾಂತ್ಯಗಳಲ್ಲಿ 27,000 ಮನೆಗಳು ಕುಸಿದಿವೆ, ಇತರ 37,000 ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ; ವ್ಯಾಪಕ ಭೂಕುಸಿತ ಮತ್ತು ಬಿರುಗಾಳಿಯಿಂದಾಗಿ ವಿಪರೀತ ನಾಶ ನಷ್ಟ ಉಂಟಾಗಿದೆ ಎಂದು ಪೌರ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಈ ಭೀಕರ ಹಾನಿಯಿಂದಾಗಿ 25.27 ಬಿಲಿಯ ಯುವಾನ್‌ ಅಥವಾ 3.72 ಬಿಲಿಯ ಡಾಲರ್‌ ಆರ್ಥಿಕ ನಷ್ಟ ಉಂಟಾಗಿದೆ. ಸರಕಾರ ಪ್ರವಾಹ ಪೀಡಿತ 20 ಪ್ರಾಂತ್ಯಗಲಿಗೆ 1.88 ಬಿಲಿಯ ಯುವಾನ್‌ (27.00 ಕೋಟಿ ಡಾಲರ್‌) ನೆರವು ನೀಡಿದೆ ಎಂದು ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ತೀವ್ರ ಪ್ರವಾಹ ಪೀಡಿ ಹುನಾನ್‌ ಪ್ರಾಂತ್ಯಕ್ಕೆ ರಕ್ಷಣಾ ಕಾರ್ಯ ನಿರ್ವಹಿಸಲು 3,000 ಸಶಸ್ತ್ರ ಪೊಲೀಸರನ್ನು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next