Advertisement

55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

12:14 PM Nov 21, 2024 | Team Udayavani |

ಪಣಜಿ:  55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ(ನ.20 ರಿಂದ 28) ಕ್ಷಣಗಣನೆ ಆರಂಭವಾಗಿದೆ. ಸಂಜೆ ಗೋಧೂಳಿಯ ರಂಗು ಚೆಲ್ಲುವುದಕ್ಕೆ ಕೊಂಚ ಮೊದಲು ರಂಗಿನ ಕಾಮನಬಿಲ್ಲು ಮೂಡಲಿದೆ.

Advertisement

ಚಿತ್ರಾವತಿಯಲ್ಲಿ ಚಿತ್ರ ನವಿಲು ಗರಿಗೆದರಿ ಕುಣಿಯಲಿದೆ. ಈಗಾಗಲೇ ಬಹುತೇಕ ಅಂತಿಮ ಸಿದ್ಧತೆ ಪುನಃ ಪೂರ್ಣಗೊಂಡಿದೆ. ಇನ್ನೊಂದಿಷ್ಟು ತಯಾರಿಗಳು ಸಮಾರೋಪ ಸಮಾರಂಭದ ದಿನವರೆಗೂ ಇದ್ದೇ ಇರುತ್ತದೆ. ಇದು ಪ್ರತಿ ವರ್ಷದ ನಡೆ.

ಗೋವಾಕ್ಕೆ ಚಲನಚಿತ್ರೋತ್ಸವ ಬಂದು ಈಗ 21 ನೇ ವರ್ಷ. ಅದ್ದೂರಿ ಉದ್ಘಾಟನಾ ಸಮಾರಂಭಕ್ಕೆ ಡಾ. ಶ್ಯಾಮ್ ಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ. ಉದ್ಘಾಟನೆಯನ್ನು ಕೇಂದ್ರ ಸಚಿವರೇ ಮಾಡಿ ಮುಗಿಸುವಂತಿದೆ. ಯಾಕೆಂದರೆ ಇದುವರೆಗೂ ಉತ್ಸವ ಉದ್ಘಾಟಕರ ಹೆಸರನ್ನು ಪ್ರಕಟಿಸಿಲ್ಲ. ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್, ಎಲ್ ಮುರುಗನ್ ಹಾಗೂ‌ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾಗವಹಿಸುವರು.

ಒಂಬತ್ತು ದಿನಗಳ ಉತ್ಸವದಲ್ಲಿ ಒಟ್ಟು 270 ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ಇವುಗಳಲ್ಲಿ 81 ದೇಶಗಳ 180 ಸಿನಿಮಾಗಳು ಸೇರಿವೆ. ಮೊದಲ ಬಾರಿಗೆ ಭಾರತೀಯ ಚೊಚ್ಚಲ ಚಿತ್ರ ನಿರ್ದೇಶಕ ಎಂಬ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಈ ಪ್ರಶಸ್ತಿಗೆ 5 ಚಿತ್ರಗಳು ಸೆಣಸುತ್ತಿವೆ. ಅಂತಾರಾಷ್ಟ್ರೀಯ ವಿಭಾಗದಲ್ಲೂ ಚೊಚ್ಚಲ ಚಿತ್ರ ನಿರ್ದೇಶಕ ಪ್ರಶಸ್ತಿ ಇದ್ದು, ಭಾರತೀಯ 2 ಚಿತ್ರಗಳೂ‌ ಸೇರಿದಂತೆ 7 ಚಿತ್ರಗಳು ಸ್ಪರ್ಧಿಸುತ್ತಿವೆ. ಇದಲ್ಲದೇ ಬಹಳ ಪ್ರಮುಖ ವಿಭಾಗವಾದ ಅಂತಾರಾಷ್ಟ್ರೀಯ ಸ್ಪರ್ಧೆ ವಿಭಾಗದಲ್ಲಿ 15 ಚಿತ್ರಗಳಿದ್ದು, 3 ಭಾರತೀಯ ಚಿತ್ರಗಳೂ ಪ್ರಶಸ್ತಿಗೆ ಸ್ಪರ್ಧಿಸಿವೆ.

ಸತ್ಯಜಿತ್ ರೇ ಜೀವಿತಾವಧಿ ಸಾಧನೆ ಪುರಸ್ಕಾರವನ್ನು ಆಸ್ಟ್ರೇಲಿಯಾ ದ ಸಿನಿಮಾ ನಿರ್ದೇಶಕ ಫಿಲಿಫ್ ನೋಯೆ ಅವರಿಗೆ ನೀಡಿ‌ ಗೌರವಿಸಲಾಗುತ್ತಿದೆ. ಈ ಬಾರಿ ಆಸ್ಟ್ರೇಲಿಯಾದ ಸಿನಿಮಾಗಳನ್ನು ಕಂಟ್ರಿ ಆಫ್ ಫೋಕಸ್ ವಿಭಾಗದಡಿ ಪ್ರದರ್ಶಿಸಲಾಗುತ್ತಿದೆ.

Advertisement

ಶತಮಾನೋತ್ಸವ ಸಂಸ್ಮರಣೆಯಡಿ ರಾಜ್ ಕಪೂರ್, ಮೊಹಮ್ಮದ್ ರಫಿ, ತಪನ್ ಸಿನ್ಹಾ ಹಾಗೂ ಅಕ್ಕಿನೇನಿ ನಾಗೇಶ್ವರರಾವ್ ಅವರನ್ನು ಸ್ಮರಿಸಲಾಗುತ್ತಿದೆ.

ಈ ಬಾರಿ ಚಿತ್ರೋತ್ಸವ ಗೋವಾದ ಇತರೆ ನಗರಗಳಿಗೂ ಹಬ್ಬಿದೆ. ಪಣಜಿಯಲ್ಲದೆ ಮಡಗಾಂವ್, ಪೊಂಡಾ ನಗರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಐದು 17 ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next