ಕೋಲಾರ: ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ55 ವರ್ಷದ ಪೊಲೀಸ್ ಪೇದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಸೋಮವಾರ ಕಂಡು ಬಂತು.
ಕೋವಿಡ್ ಆತಂಕದ ನಡುವೆ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಿದೆ. ಈ ನಡುವೆಕೋಲಾರದ ಬಾಲಕಿಯರ ಜೂನಿಯರ್ ಕಾಲೇಜುಪರೀಕ್ಷಾ ಕೇಂದ್ರದಲ್ಲಿ 55 ವರ್ಷದ ಕಠಾರಿಪಾಳ್ಯದ ನಿವಾಸಿ ಮಂಜುನಾಥ್ ಉತ್ಸಾಹದಿಂದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಮಂಜುನಾಥ್ ಸದ್ಯ ಬೆಂಗಳೂರು ಸಶಸ್ತ್ರ ಪೊಲೀಸ್ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದು, 1993ರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ನಾಲ್ಕನೇ ತರಗತಿ ಪಾಸ್ ಆಗಿದ್ದರೆ ಕೆಲಸ ಸಿಗುತ್ತಿತ್ತು ಎನ್ನಲಾಗಿದೆ. ತದ ನಂತರ ಅಂದರೆ 1996 ನಂತರ ಪೊಲೀಸ್ ಪೇದೆ ಕೆಲಸಕ್ಕೆ ಸೇರಲು ಹತ್ತನೇ ತರಗತಿ ಉತ್ತೀರ್ಣ ಕಡ್ಡಾಯ ಮಾಡಿದ್ದಾರೆ. ಕಳೆದ ವರ್ಷವೂ ಪರೀಕ್ಷೆ ಬರೆದು ಅನುತ್ತೀರ್ಣರಾಗಿದ್ದ ಮಂಜುನಾಥ್ ಎಷ್ಟು ವರ್ಷ ಸೇವೆ ಸಲ್ಲಿಸಿದರೂ ಅವರಿಗ ಬಡ್ತಿ ಸಿಕ್ಕಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮಂಜುನಾಥ್ ಈಗ ಅವರಿಗೆಕಡ್ಡಾಯವಾಗಿ ಹತ್ತನೇ ತರಗತಿಪಾಸ್ ಮಾಡಬೇಕು. ಅದಕ್ಕಾಗಿ ಮಂಜುನಾಥ್ ಯಾವುದೇ ಸಂಕೋಚವಿಲ್ಲದೆ ಪರೀಕ್ಷೆ ಬರೆಯಲು ಸೋಮವಾರ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು.
ಪಾಸಾದ್ರೆ ಪ್ರಮೋಷನ್: ಈ ಬಾರಿ ಹತ್ತನೇ ತರಗತಿ ಪಾಸ್ ಆದರೆ ಮಂಜುನಾಥ್ ಅವರಿಗೆ ಮುಖ್ಯ ಪೊಲೀಸ್ ಪೇದೆಯಾಗಿ ಪ್ರಮೋಷನ್ ಸಿಗಲಿದೆ. ಮಂಜುನಾಥ್ ಪರೀಕ್ಷೆ ಬರೆಯಲು ಬಂದಾಗ ಅಲ್ಲಿದ್ದ ಕೆಲವರು ಇವರನ್ನು ನೋಡಿಆಶ್ಚರ್ಯಪಟ್ಟರು. ಇವರು ಶಿಕ್ಷಕರೋ, ಇಲ್ಲಾಮುಖ್ಯ ಶಿಕ್ಷಕರೋ ಇರಬೇಕು ಎಂದುಕೊಂಡರು. ಆದರೆ ಅವರು ಒಬ್ಬ ವಿದ್ಯಾರ್ಥಿಯಂತೆ ಪರೀಕ್ಷೆ ಬರೆಯಲು ಕುಳಿತಾಗ ಆಶ್ಚರ್ಯಚಕಿತರಾಗಿ ನೋಡಿದರು.
ಮಂಜುನಾಥ್ ಅವರಿಗೆ ಮಕ್ಕಳು, ಮೊಮ್ಮಕ್ಕಳಿದ್ದಾರೆ. ಆದರೂ ಅವರು ಯಾವುದೇಬೇಸರ ಸಂಕೋಚವಿಲ್ಲದೆ ಪರೀಕ್ಷೆ ಬರೆಯಲುಬಂದಿದ್ದಾರೆ. ಇವರಲ್ಲದೆ ಜಿಲ್ಲೆಯ ಬಂಗಾರಪೇಟೆತಾಲೂಕಿನ ಚಿನ್ನಕೋಟೆಯ 51ವರ್ಷದ ಅಶೋಕ್ ಎಂಬುವವರು ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಇವರು ಕೂಡಾ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದಾರೆ.