Advertisement

54th IFFI; ಫಿಲ್ಮ್ ಬಜಾರ್ ಗಾಗಿ ಪ್ರತಿನಿಧಿ ನೋಂದಣಿ ಪ್ರಾರಂಭ

04:54 PM Sep 13, 2023 | Team Udayavani |

ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯಲಿರುವ 54 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಫಿಲ್ಮ್ ಬಜಾರ್ ಗಾಗಿ ಪ್ರತಿನಿಧಿ ನೋಂದಣಿ ಪ್ರಾರಂಭವಾಗಿದೆ. ಕಳೆದ ವರ್ಷ 6,774 ಪ್ರತಿನಿಧಿಗಳು ಚಲನಚಿತ್ರೋತ್ಸವಕ್ಕೆ ನೋಂದಾಯಿಸಿಕೊಂಡಿದ್ದರು. ಈ ವರ್ಷ ಈ ಸಂಖ್ಯೆ 10,000  ಕ್ಕೆ  ತಲುಪುವ ನಿರೀಕ್ಷೆ ಇದೆ ಎನ್ನಲಾಗಿದೆ.

Advertisement

ನ್ಯಾಶನಲ್ ಫಿಲ್ಮ್ ಡೆವಲಪ್‍ಮೆಂಟ್ ಕಾರ್ಪೊರೇಷನ್ ಆಯೋಜಿಸಿರುವ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 20 ರಿಂದ 28 ರವರೆಗೆ ರಾಜಧಾನಿ ಪಣಜಿ ಮತ್ತು ರಾಜ್ಯದ ಇತರ ಸ್ಥಳಗಳಲ್ಲಿ ನಡೆಯಲಿದೆ. ಉತ್ಸವದ ಪ್ರತಿನಿಧಿ ನೋಂದಣಿ ಮತ್ತು ಉತ್ಸವದಲ್ಲಿ ನಡೆಯಲಿರುವ ಫಿಲ್ಮ್ ಬಜಾರ್ ಗಾಗಿ ಆನ್‍ಲೈನ್ ನೋಂದಣಿ ಕಾರ್ಯ ಬುಧವಾರದಿಂದ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ವೆಬ್‍ಸೈಟ್ ಮೂಲಕ ನಿಯೋಗ ಮತ್ತು ಫಿಲ್ಮ್ ಬಜಾರ್ ನೋಂದಣಿಯನ್ನು ಆನ್‍ಲೈನ್‍ನಲ್ಲಿ ಮಾಡಬಹುದು. ಪ್ರತಿನಿಧಿ ನೋಂದಣಿಗಾಗಿ, ಚಲನಚಿತ್ರೋತ್ಸಕ್ಕೆ ನೋಂದಣಿಗೆ 1,180 ರೂ. ಶುಲ್ಕ ವಿಶಿಸಲಾಗುತ್ತದೆ.

ಫಿಲ್ಮ ಬಜಾರ್ ವಿಭಾಗದಲ್ಲಿ ಭಾಗವಹಿಸಲು ಬಯಸಿದರೆ, ವಿವಿಧ ವರ್ಗಕ್ಕೆ 18,000 ರಿಂದ 21,000 ರೂ. ಶುಲ್ಕವಿದೆ. ವಿದ್ಯಾರ್ಥಿಗಳು ಉತ್ಸವವನ್ನು ಉಚಿತವಾಗಿ ವೀಕ್ಷಿಸಬಹುದು. ಈ ಮಾಹಿತಿಯನ್ನು ಎನ್‍ಎಫ್‍ಡಿಸಿ ಮತ್ತು ಸ್ಥಳೀಯ ಸಂಘಟಕರು ಗೋವಾ ಎಂಟರ್‍ಟೈನ್‍ಮೆಂಟ್ ಸೊಸೈಟಿ ಮಾಹಿತಿ ನೀಡಿದ್ದಾರೆ

ಈ ವರ್ಷ ಕೆಲವು ಆಯ್ದ ಚಿತ್ರಗಳು ಮಡಗಾಂವ್‍ನ ರವೀಂದ್ರ ಭವನದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಉತ್ಸವದ ಭಾರತೀಯ ಪನೋರಮಾ ವಿಭಾಗವು 26 ಚಲನಚಿತ್ರಗಳು ಮತ್ತು 23 ರಿಂದ 25 ನಾನ್ ಫಿಚ್ಚರ್ ಫಿಲ್ಮ್ ಚಲನಚಿತ್ರಗಳನ್ನು ಒಳಗೊಂಡಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next