Advertisement

ಕನ್ನಡ ಮನೆ-ಮನದಾಳದ ಭಾಷೆಯಾಗಲಿ: ದಿವಾಕರ್‌ ಶೆಟ್ಟಿ  ಇಂದ್ರಾಳಿ

11:11 AM Dec 23, 2021 | Team Udayavani |

ಡೊಂಬಿವಲಿ: ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ನಮ್ಮ ಸಿರಿವಂತ ಕನ್ನಡ ಭಾಷೆ ಹೊರನಾಡಿನಲ್ಲಿ ಉಳಿದು-ಬೆಳೆಯಬೇಕಾದರೆ ಅದು ನಮ್ಮೆಲ್ಲರ ಮನೆ ಹಾಗೂ ಮನದಾಳದ ಭಾಷೆಯಾಗಬೇಕು. ಪಾಲಕರು ಬೇರೆ ಭಾಷೆಗಳ ವ್ಯಾಮೋಹಕ್ಕೆ ಬಲಿಯಾಗದೇ ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ  ಇಂದ್ರಾಳಿ ಹೇಳಿದರು.

Advertisement

ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ  ಡಿ. 19ರಂದು ಸಂಜೆ ನಡೆದ ಡೊಂಬಿವಲಿ ಕರ್ನಾಟಕ ಸಂಘದ 54ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಕೇವಲ ಸಸಿಯನ್ನು ನೆಟ್ಟರೆ ಸಾಲದು. ಅದಕ್ಕೆ  ಗೊಬ್ಬರ ಹಾಗೂ ನೀರನ್ನು ಉಣಿಸಿದಾಗ ಮಾತ್ರ ಅದು ವಿಶಾಲ ವೃಕ್ಷವಾಗಿ ಉತ್ತಮ ಫಲವನ್ನು ನೀಡುತ್ತದೆ. ಅದೇ ರೀತಿ 54 ವರ್ಷಗಳ ಹಿಂದೆ ನಮ್ಮ ಹಿರಿಯರು ನೆಟ್ಟ  ಡೊಂಬಿವಲಿ ಕರ್ನಾಟಕ ಸಂಘ ಇಂದು ವಿಶಾಲ ವೃಕ್ಷವಾಗಿ ಬೆಳೆದು ಶಿಕ್ಷಣ ಕ್ಷೇತ್ರದಲ್ಲಿ  ಗಣನೀಯ ಸಾಧನೆಗೈಯುವುದರ ಜತೆಗೆ

ಕನ್ನಡದ ತೇರನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಇದಕ್ಕೆ ನಮ್ಮ ಹಿರಿ ಯರ ಅವಿರತ ಪರಿಶ್ರಮ ಹಾಗೂ ಇಂದಿನ ಸಮಸ್ತ ಕನ್ನಡ ಮನಸ್ಸುಗಳ ಅಮೂಲ್ಯ ಸಹಾಯ, ಸರಕಾರವೇ ಕಾರಣವಾಗಿದೆ. ಆದ್ದರಿಂದ ತಮಗೆಲ್ಲರಿಗೂ ಹೃದಯಾಂತರಾಳದ ಕೃತಜ್ಞತೆ ಅರ್ಪಿಸು ವುದರ ಜತೆಗೆ ತಮ್ಮ ಈ ಸಹಾಯ, ಸಹಕಾರ ನಿರಂತರವಾಗಿರಲಿ ಎಂದು ಆಶಿಸುತ್ತೇನೆ. ಕೊರೊನಾ ಸಂಕಷ್ಟದ ಸಮ ಯದಲ್ಲಿ ಸಂಘದ ನಾಲ್ಕು ವಿಭಾಗಗಳು ಜನತೆಯ ನೆರವಿಗೆ ಧಾವಿಸುವುದರ ಜತೆಗೆ ಅವರ ಕಣ್ಣೀರು ಒರೆಸುವ ಕಾರ್ಯ ಮಾಡಿರುವುದು ಶ್ಲಾಘನೀಯ ವಾಗಿದೆ. ಸಮಸ್ತ ಕನ್ನಡ ಮನಸ್ಸುಗಳು ಡೊಂಬಿವಲಿ ಕರ್ನಾಟಕ ಸಂಘದ ಮುಖಾಂತರ ಕನ್ನಡದ ಕಂಪನ್ನು ಸಪ್ತ ಸಾಗರಗಳಾ ಚೆಯೂ ಪಸರಿಸೋಣ ಎಂದರು.

ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ  ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದ ಜತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳನ್ನು ಉಳಿಸಿ, ಬೆಳೆಸುತ್ತಿರುವ ಡೊಂಬಿವಲಿ ಕರ್ನಾಟಕ ಸಂಘದ ಮಂಜುನಾಥ ವಿದ್ಯಾಲಯ ಹಾಗೂ ಮಹಾವಿದ್ಯಾಲಯದ ಶಿಕ್ಷಕರು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿಯೋ ಆನ್‌ಲೈನ್‌ ಹಾಗೂ ಆಫ್ಲೈನ್‌ ಮುಖಾಂತರ ತಮ್ಮ ಜ್ಞಾನ ದಾಸೋಹದ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ವಿದ್ಯಾರ್ಥಿ

ಗಳ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾ ಗಿರುವುದು ಅಭಿನಂದನೀಯ. ಆರ್ಥಿಕ ವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಘ ವಿದ್ಯಾರ್ಥಿವೇತನ ನೀಡುತ್ತಿದ್ದು, ಸಮಾಜದ ಕಟ್ಟಕಡೆಯ ಮಗುವೂ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಯಾವ ಮಗುವೂ ವಂಚಿತವಾಗಬಾರದು ಎಂಬ ಮಹದಾಸೆ ಸಂಘ¨ªಾಗಿದೆ. ಬರುವ ಜ. 16ರಂದು ಸರಕಾರದ ಮಂಜೂರಾತಿ ದೊರೆತರೆ ಬೃಹತ್‌ ಕ್ರೀಡಾ ಮಹೋತ್ಸವವನ್ನು ಆಯೋಜಿಸ ಲಾಗುವುದು. ಸಂಘದ ಅಭಿವೃದ್ಧಿಗೆ ತಮ್ಮ ಸಹಾಯ, ಸಹಕಾರ ನಿರಂತರವಾಗಿರಲಿ ಎಂದು ಆಶಿಸಿದರು.

Advertisement

ಸಂಘದ ಉಪಾಧ್ಯಕ್ಷ ಡಾ| ವಿಜಯ್‌ ಶೆಟ್ಟಿ ಅವರು ಶೀಘ್ರದಲ್ಲಿ ಸಂಘದ ವತಿಯಿಂದ ಬೃಹತ್‌ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುವುದಾಗಿ ಹೇಳಿ, ಇಂದಿನ ಆತಂಕದ ಸ್ಥಿತಿಯಲ್ಲಿ ಆರೋಗ್ಯದ ಮಹತ್ವವನ್ನು ತಿಳಿಸಿದರು. ಗೌರವ ಕಾರ್ಯದರ್ಶಿ ಪ್ರೊ| ಅಜೀತ ಉಮರಾಣಿ ವಾರ್ಷಿಕ ವರದಿಯನ್ನು ಮಂಡಿಸಿದರೆ, ಅದನ್ನು ಮೋಹನದಾಸ ಪೈ ಹಾಗೂ ಪದ್ಮನಾಭ ಶೆಟ್ಟಿ ಅನುಮೋದಿಸಿದರು. ಕೋಶಾಧಿಕಾರಿ ಚಿತ್ತರಂಜನ ಅಳ್ವ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದ್ದು, ಪ್ರತಿಭಾ ವೈದ್ಯ ಹಾಗೂ ಪದ್ಮನಾಭ ಶೆಟ್ಟಿ ಅನುಮೋದಿಸಿದರು.

ಲೆಕ್ಕ ಪರಿಶೋಧಕರಾಗಿ ಯು.ಬಿ. ಪೈ ಅವರ ನೇಮಕವನ್ನು ಚಂದ್ರ ನಾಯಕ್‌ ಹಾಗೂ ಸಂತೋಷ ಶೆಟ್ಟಿ ಅನುಮೋದಿಸಿದರು. ಮಹಾಸಭೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ವಿಟuಲ ಶೆಟ್ಟಿ, ಎಂ. ಪಿ. ಪೈ, ಪವನ್‌ ಬಲ್ಲಾಳ್‌, ಗಂಗಾಧರ ಶೆಟ್ಟಿಗಾರ್‌, ವಸಂತ ಸುವರ್ಣ, ಪ್ರತಿಭಾ ವೈದ್ಯ ಮೊದಲಾದವರು ಸಲಹೆ-ಸೂಚನೆ ನೀಡಿದರು. ಗಣ್ಯರಾದ ಪದ್ಮನಾಭ ಶೆಟ್ಟಿ, ವಿಟuಲ ಎ. ಶೆಟ್ಟಿ, ಸುಷ್ಮಾ ಶೆಟ್ಟಿ, ವಿಮಲಾ ವಿ. ಶೆಟ್ಟಿ, ಪ್ರಭಾಕರ ಶೆಟ್ಟಿ, ರಾಜೀವ ಭಂಡಾರಿ, ನ್ಯಾಯವಾದಿ ಆರ್‌. ಎಂ. ಭಂಡಾರಿ, ಸುರೇಖಾ ಪಂಡಿತ, ಪ್ರಭು ಕೂತ್ವಾಲಿ, ನಾಗಪ್ಪ ಪೂಜಾರಿ, ರತ್ನಾ ಮುರಳೀಧರನ್‌, ರವಿ ಸನಿಲ್, ಆನಂದ ಡಿ. ಶೆಟ್ಟಿ  ಎಕ್ಕಾರು, ರಮೇಶ್‌ ಶೆಟ್ಟಿ, ಇಂ. ಸತೀಶ್‌ ಆಲಗೂರ, ವಿದ್ಯಾವತಿ ಆಲಗೂರ, ಸುಕುಮಾರ ಎನ್‌. ಶೆಟ್ಟಿ, ಡಾ| ವಿ. ಎಂ. ಶೆಟ್ಟಿ, ಚಿತ್ತರಂಜನ್‌ ಆಳ್ವ, ಲೋಕನಾಥ ಶೆಟ್ಟಿ, ದಿನೇಶ್‌ ಕುಡ್ವ, ಯು. ಬಿ. ಪೈ ಉಪಸ್ಥಿತರಿದ್ದರು.

ಸುನಂದಾ ಶೆಟ್ಟಿ  ಹಾಗೂ ಯೋಗಿನಿ ಶೆಟ್ಟಿ  ಪ್ರಾರ್ಥನೆಗೈದರು. ಜ್ಯೋತಿ ಬೆಳಗಿಸಿ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಪ್ರೊ| ಅಜೀತ ಉಮರಾಣಿ ಕಾರ್ಯಕ್ರಮ ನಿರೂಪಿಸಿದರು. ದಿನೇಶ್‌ ಕುಡ್ವ  ವಂದಿಸಿದರು. ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.

 

 ಚಿತ್ರ-ವರದಿ:-ಗುರುರಾಜ್‌ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next