Advertisement
1965ರ ಭಾರತ- ಪಾಕಿಸ್ತಾನ ಯುದ್ಧದ ನಂತರ, ಗಡಿಭಾಗದ ರಕ್ಷಣೆಗೆ ಮುಂದಾದ ಭಾರತ ಸರ್ಕಾರ, ಗಡಿಭಾಗದಲ್ಲಿ ಉಂಟಾಗುವ ಸಮಸ್ಯೆಗಳ ನಿರ್ವಹಣೆಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯನ್ನು ರಚಿಸಿತು. ಇದರ ಜವಾಬ್ದಾರಿಯನ್ನು, ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನೀಡಲಾಯಿತು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಏಳು ರೀತಿಯ ರಕ್ಷಣಾ ಪಡೆಗಳನ್ನು ಇದರ ವ್ಯಾಪ್ತಿಗೆ ತರಲಾಯಿತು. ಜತೆಗೆ ಇದಕ್ಕೆ ಪ್ರತ್ಯೇಕ ಕೇಡರ್‌ನ ಅಧಿಕಾರಿಗಳಿದ್ದು, ಭಾರತೀಯ ಪೊಲೀಸ್ ಸೇವೆಯು ಇವರನ್ನು ನಿಯಂತ್ರಿಸುವ ಜವಾಬ್ದಾರಿ ಹೊಂದಿದೆ.ಪ್ರಸ್ತುತ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಏಳು ರಕ್ಷಣಾ ಪಡೆಗಳಿಗೂ ಸಿಬ್ಬಂದಿ ಆಯ್ಕೆ ಆಯೋಗ(ಎಸ್‌ಎಸ್‌ಸಿ)ವು ರಾಷ್ಟ್ರಾದ್ಯಂತ 54,953 ಪೊಲೀಸ್ ಕಾನ್ಸ್‌ಸ್ಟೇಬಲ್ ಹುದ್ದೆಗೆ ಆವಕಾಶಕಲ್ಪಿಸಿದೆ.
ಈ ಹುದ್ದೆಗಳನ್ನು ಎಸ್ಸಿ ಎಸ್ಟಿ ಮೀಸಲಾತಿಗೆ ಅನುಗುಣವಾಗಿ ವಿಭಾಗ ಮಾಡಲಾಗಿದೆ. ವಯೋಮಿತಿ, ವಿದ್ಯಾರ್ಹತೆ
ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆ ಹೊಂದಲು ಆ.1ಕ್ಕೆ ಅನುಗುಣವಾಗಿ ಸಾಮಾನ್ಯ ಅಭ್ಯರ್ಥಿಯು ಕನಿಷ್ಠ 18- 23 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟರಿಗೆ 5 ವರ್ಷ, ಬುಡಕಟ್ಟು, ನಿವೃತ್ತ ಯೋಧರಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಪ್ರಸ್ತುತ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಕಾನ್‌ಸ್ಟೆಬಲ್ ಹುದ್ದೆಗೆ ಎಸ್ಸೆಸ್ಸೆಲ್ಸಿ, ತತ್ಸಮಾನ ಓದು ಸಾಕು. ಜೊತೆಗೆ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ. ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಯಾಗುವ ಸಿಬ್ಬಂದಿಗೆ 21,700- 69,000 ರೂ.ವರೆಗೆ ವೇತನ ಮತ್ತು ಎಫ್.ಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
Related Articles
ಅಭ್ಯರ್ಥಿಗಳನ್ನು ಕಂಪ್ಯೂಟರ್ ಸಂಬಂಧಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ನಡೆಸಲಾಗುತ್ತದೆ.
ಗಣಕ ಸಂಬಂಧಿತ ಪರೀಕ್ಷೆಯಲ್ಲಿ ಒಂದೊಂದು ವಿಭಾಗಕ್ಕೂ 25 ಅಂಕಗಳು ಇರುತ್ತವೆ. ಪರೀಕ್ಷೆಯ ಕಾಲಾವಧಿ ಒಂದು ಗಂಟೆ. ಒಟ್ಟು ನೂರು ಅಂಕಕ್ಕೆ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಸಾಮಾನ್ಯ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ 20 ನಿಮಿಷಕ್ಕೆ 5 ಕಿ.ಮೀ. ಓಟ, ಮಹಿಳಾ ಅಭ್ಯರ್ಥಿಗೆ ಎಂಟೂವರೆ ನಿಮಿಷಕ್ಕೆ 1.6 ಕಿ.ಮೀ. ಓಟ, ಇದರಲ್ಲಿ ಅರ್ಹರಾದವರಿಗೆ ದೇಹದಾಡ್ಯì ಪರೀಕ್ಷೆ (ಪುರುಷರಿಗೆ ಎತ್ತರ-170 ಸೆಂ.ಮೀ., ಮಹಿಳೆಯರಿಗೆ ಎತ್ತರ 157 ಸೆಂ.ಮೀ. ಪುರುಷರಿಗೆ ಮಾತ್ರ 80/5 ಸೆಂ.ಮೀ. ದೇಹದ ಸುತ್ತಳತೆ)
ಸಹಿಷ್ಣುತೆ, ದೇಹದಾಡ್ಯì ಪರೀಕ್ಷೆ ಜತೆಗೆ ಶ್ರವಣಶಕ್ತಿ ಮತ್ತು ದೃಷ್ಟಿದೋಷಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಗಳಿಗೆ ಮುಂಚಿತವಾಗಿ ಅಗತ್ಯ ದಾಖಲೆ ಪರಿಶೀಲನೆ ನಡೆಯುತ್ತದೆ.
Advertisement
ಅರ್ಜಿ ಸಲ್ಲಿಕೆ ಹೇಗೆ?ಕಾನ್ಸ್‌ಟೇಬಲ್ ಹುದ್ದೆಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮೊದಲು ತಮ್ಮ ಸಹಿ, ಭಾವಚಿತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಸೇರಿದಂತೆ ಅಗತ್ಯ ದಾಖಲೆಗಳ ಛಾಯಾಪ್ರತಿಯನ್ನು ಒಂದು ಫೋಲ್ಡರ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು. ಅಧಿಕೃತ https://ssc.nic.in/ಜಾಲತಾಣದ ಮೂಲಕ ಅರ್ಜಿ ಪಡೆಯಬೇಕು. ಈಗಾಗಲೇ ರಿಜಿಸ್ಟರ್ ನಂಬರ್ ಪಡೆದಿದ್ದರೆ, ಅದನ್ನು ಬಳಸಿ ಮತ್ತೆ ಜಾಲತಾಣ ಪ್ರವೇಶಿಸಿ ತಾವು ಬಯಸುವ ಹುದ್ದೆ, ಮತ್ತು ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಗ್ರಸಿರುವ ದಾಖಲೆಗಳನ್ನು ಲಗತ್ತಿಸಬೇಕು. ಬಳಿಕ ಚಲನ್ ಪಡೆದು, ಎಸ್‌ಬಿಐ ಅಥವಾ ಸ್ಥಳೀಯ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಬೇಕು. 2 ದಿನಗಳ ಬಳಿಕ ಮತ್ತೆ ಜಾಲತಾಣ ಪ್ರವೇಶಿಸಿ ಅರ್ಜಿಯನ್ನು ಡೌನ್‌ಲೌಡ್ ಮಾಡಿಕೊಳ್ಳುವುದು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಆ.20 ಕೊನೆದಿನವಾಗಿದೆ. ಅರ್ಜಿ ಶುಲ್ಕವೆಂದು 100 ರೂ.ಗಳನ್ನು ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ goo.gl/1tDgXa ಸಂಪರ್ಕಿಸಿ