Advertisement

ರಾಜಧಾನಿಯಲ್ಲಿ ಶೇ.54.72 ಮತದಾನ

11:54 AM May 14, 2018 | Team Udayavani |

ಬೆಂಗಳೂರು: ಚುನಾವಣಾ ಆಯೋಗದಿಂದ ಹಲವಾರು ಪ್ರಚಾರಾಂದೋಲನಗಳನ್ನು ಕೈಗೊಂಡರೂ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ರಾಜ್ಯ ಸರಾಸರಿಯ ಸಮೀಪಕ್ಕೂ ಸುಳಿಯದಿರುವ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. 

Advertisement

ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಆಯೋಗವು ನಗರದಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿತ್ತು. ಆದರೂ, ಬೆಂಗಳೂರಿನ ಮತದಾರರದಿಂದ ಹೆಚ್ಚಿನ ರೀತಿ ಸ್ಪಂದನೆ ದೊರೆಕಿಲ್ಲ. ಶನಿವಾರ ಬೆಂಗಳೂರು ನಗರ ಜಿಲ್ಲೆಯ 26 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಶೇ.54.72ರಷ್ಟು ಮತದಾನ ದಾಖಲಾಗಿರುವುದು ಇದಕ್ಕೆ ನಿದರ್ಶನವಾಗಿದೆ. 

ಚುನಾವಣಾ ಆಯೋಗದ ವತಿಯಿಂದ ಮತದಾನದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ 2 ಕೋಟಿ ರೂ. ವೆಚ್ಚದಲ್ಲಿ ಚುನಾವಣಾ ಗೀತೆ ರಚಿಸಲಾಗಿತ್ತು. ಇದರೊಂದಿಗೆ ಸಾರ್ವಜನಿಕರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಲು ಸುಲಭ ವಿಧಾನಗಳನ್ನು ಮಾಡಲಾಗಿತ್ತು. ಅಲ್ಲದೆ, ಮತಗಟ್ಟೆ ವಿವರಗಳನ್ನು ಸಂದೇಶದ ಮೂಲಕ ಪಡೆಯುವ ವ್ಯವಸ್ಥೆ ಸಹ ಮಾಡಲಾಗಿತ್ತು.

ಮತಗಟ್ಟೆಗಳಿಗೆ ಸುಲಭವಾಗಿ ತೆರಳಲು ಅನುಕೂಲವಾಗುವಂತೆ ಪೋಲಿಂಗ್‌ ಸ್ಟೇಷನ್‌ ಲೊಕೇಟರ್‌ ಆ್ಯಪ್‌ ಸಹ ಮಾಡಲಾಗಿತ್ತು. ಈ ಆ್ಯಪ್‌ನಲ್ಲಿ ಗುರುತಿನ ಚೀಟಿ ಸಂಖ್ಯೆ ದಾಖಲಿಸಿದರೆ ಮತಗಟ್ಟೆಯ ವಿವರದೊಂದಿಗೆ ನೇರವಾಗಿ ಗೂಗಲ್‌ ಮ್ಯಾಪ್‌ ಮೂಲಕ ಮತಗಟ್ಟೆ ತಲುಪುವ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ ಯುವಕರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜು ರಾಯಭಾರಿಗಳನ್ನು ನೇಮಿಸಲಾಗಿತ್ತು.

ಇದರೊಂದಿಗೆ ಶಾಂತಿಯುತ ಹಾಗೂ ಭಯಮುಕ್ತ ಮತದಾನಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿ ಯೋಧರ ಮುಂದಾಳತ್ವದಲ್ಲಿ ಕ್ಯಾಂಡಲ್‌ ಲೈಟ್‌ ಫ‌ತ ಸಂಚಲನ ನಡೆಸಲಾಯಿತು. ಇದರೊಂದಿಗೆ ನಗರದ ಜನರಿಗೆ ಮತದಾನ ಮಾಡುವಂತೆ ಕೋರುವ ಉದ್ದೇಶದಿಂದ ಹಲವ ವಾಕಥಾನ್‌ ನಡೆಸಲಾಯಿತು. ಆದರೆ, ಕಳೆದ ಬಾರಿಗಿಂತಲೂ ಶೇ.3ರಷ್ಟು ಮತದಾನ ಕಡಿಮೆಯಾಗಿದ್ದು,

Advertisement

ಕೆಲ ಖಾಸಗಿ ಹೋಟೆಲ್‌ಗ‌ಳು ಸ್ವಯಂ ಪ್ರೇರಿತರಾಗಿ ಮತ ಚಲಾಯಿಸಿದವರಿಗೆ ರಿಯಾಯ್ತಿ ನೀಡುವುದಾಗಿ ತಿಳಿಸಿದರೂ ಪ್ರಾಯೋಜನವಾಗಿಲ್ಲ. ಬಿಬಿಎಂಪಿ ಸೇರಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟಾರೆ ಶೇ. 54.72ರಷ್ಟು ಮತದಾನವಾಗಿದೆ. ಈ ಪೈಕಿ ಆನೇಕಲ್‌ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ. 63.99ರಷ್ಟು ಮತದಾನವಾಗಿದ್ದರೆ, ದಾಸರಹಳ್ಳಿಯಲ್ಲಿ ಅತಿ ಕಡಿಮೆ ಅಂದರೆ ಶೇ. 48.03ರಷ್ಟು ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕ್ಷೇತ್ರವಾರು ಅಂತಿಮ ಮತದಾನ ಪ್ರಮಾಣ
ಕ್ಷೇತ್ರ    ಪ್ರಮಾಣ (ಶೇಡವಾರು)

ಶಿವಾಜಿನಗರ    ಶೇ. 54.10
ಶಾಂತಿನಗರ    ಶೇ. 55.12
ಗಾಂಧಿನಗರ    ಶೇ. 55.38
ರಾಜಾಜಿನಗರ    ಶೇ. 57.10
ಚಾಮರಾಜಪೇಟೆ    ಶೇ. 54.33
ಚಿಕ್ಕಪೇಟೆ    ಶೇ. 57.66
ಕೆ.ಆರ್‌.ಪುರ    ಶೇ. 53.08
ಮಹಾಲಕ್ಷ್ಮೀ ಬಡಾವಣೆ    ಶೇ. 54.72
ಮಲ್ಲೇಶ್ವರ    ಶೇ. 56.29
ಹೆಬ್ಟಾಳ    ಶೇ. 54.98
ಪುಲಿಕೇಶಿನಗರ    ಶೇ. 53.24
ಸರ್ವಜ್ಞನಗರ    ಶೇ. 51.19
ಸಿ.ವಿ.ರಾಮನ್‌ ನಗರ    ಶೇ. 48.98
ಗೋವಿಂದರಾಜನಗರ    ಶೇ. 53.91
ವಿಜಯನಗರ    ಶೇ. 55
ಬಸವನಗುಡಿ    ಶೇ. 52.80
ಪದ್ಮನಾಭನಗರ    ಶೇ. 53
ಬಿಟಿಎಂ ಬಡಾವಣೆ    ಶೇ. 50.09
ಬೊಮ್ಮನಹಳ್ಳಿ    ಶೇ. 52
ಯಲಹಂಕ    ಶೇ. 63.01
ಬ್ಯಾಟರಾಯನಪುರ    ಶೇ. 57.39
ಯಶವಂತಪುರ    ಶೇ. 60.19
ದಾಸರಹಳ್ಳಿ    ಶೇ. 48.03
ಮಹದೇವಪುರ    ಶೇ. 55
ಬೆಂಗಳೂರು ದಕ್ಷಿಣ    ಶೇ. 53.17
ಆನೇಕಲ್‌    ಶೇ. 63.99

Advertisement

Udayavani is now on Telegram. Click here to join our channel and stay updated with the latest news.

Next