ಚಾಮರಾಜನಗರ: ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕೊರೊನಾಲಸಿಕಾ ಉತ್ಸವದಲ್ಲಿ 5,422 ಮಂದಿ ಲಸಿಕೆ ಪಡೆದಿದ್ದಾರೆ. ಒಟ್ಟಾರೆಇದುವರೆಗೆ ಜಿಲ್ಲೆಯಲ್ಲಿ 1,07,686 ಮಂದಿ ಕೋವಿಡ್ ಲಸಿಕೆತೆಗೆದುಕೊಂಡಿದ್ದಾರೆ.ಕೋವಿಡ್ ಲಸಿಕಾ ಉತ್ಸವದ ಮೊದಲ ದಿನವಾದ ಏ.11ರಂದು 878ಮಂದಿ ಲಸಿಕೆ ಪಡೆದರೆ, ಏ.12ರಂದು 1,834 ಮಂದಿ, 13ರಂದು 715ಮಂದಿ, 14ರಂದು 1,995 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಲಸಿಕೋತ್ಸವದ ಮೊದಲ ದಿನ ಭಾನುವಾರವಾದ್ದರಿಂದ ಹೆಚ್ಚಿನ ಜನರುಲಸಿಕೆ ಪಡೆದಿಲ್ಲ. 2ನೇ ದಿನ ಉತ್ತಮ ಪ್ರತಿಕ್ರಿಯೆ ದೊರೆತಿದೆ. 3ನೇ ದಿನಯುಗಾದಿ ಹಬ್ಬವಾದ್ದರಿಂದ ಹೆಚ್ಚು ಮಂದಿ ಲಸಿಕಾ ಕೇಂದ್ರದತ್ತ ಬಂದಿಲ್ಲ.ನಾಲ್ಕನೇ ದಿನ 1995 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿವಿಧಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲುಪ್ರಾರಂಭಿಸಲಾಯಿತು.
ಏ.1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂಉಚಿತವಾಗಿ ಲಸಿಕೆ ನೀಡುವ ಮಹತ್ತರ ಅಭಿಯಾನ ಆರಂಭಗೊಂಡಿತು.ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರು 2,97,000 ಮಂದಿ ಇದ್ದು, ಈಎಲ್ಲರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಪೈಕಿ 45ರಿಂದ 59 ರ ವಯೋಮಾನದವರು 1,96,530 ಜನರಿದ್ದಾರೆ. 60 ವರ್ಷಮೇಲ್ಪಟ್ಟವರು 1,00,470 ಜನರಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 1,07,686ಮಂದಿಗೆ ಲಸಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿರುವ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಂತೆಮರಹಳ್ಳಿ,ಬೇಗೂರು ಹಾಗೂ ಕಬ್ಬಳಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ,ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕು ಆಸ್ಪತ್ರೆ,ಕೊಳ್ಳೇಗಾಲ, ಚಾಮರಾಜನಗರ ಪಟ್ಟಣದಲ್ಲಿರುವ ನಗರ ಸಮುದಾಯಆರೋಗ್ಯ ಕೇಂದ್ರ ಹಾಗೂ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ಲಸಿಕೆ ನೀಡಲಾಗುತ್ತಿದೆ. 14 ಆರೋಗ್ಯ ಉಪ ಕೇಂದ್ರಗಳಲ್ಲಿಯೂ ಕೋವಿಡ್‌ಲಸಿಕೆ ನೀಡುವ ಕಾರ್ಯ ಪ್ರಾರಂಭಗೊಂಡಿದೆ. ಹೋಬಳಿ ಕೇಂದ್ರಗಳನ್ನುಕೇಂದ್ರವಾಗಿರಿಸಿಕೊಂಡು ಕೋವಿಡ್ ಲಸಿಕಾ ಕಾರ್ನರ್‌ಗಳನ್ನು ತೆರೆಯಲಾಗಿದ್ದು, ಇಲ್ಲಿಯೂ ಸಹ ಕೋವಿಡ್ ಲಸಿಕೆ ನೀಡಲಾಗುತ್ತಿದೆ.