Advertisement

13 ರಂದು ದೇಶವ್ಯಾಪಿ ಪೆಟ್ರೋಲ್‌ ಬಂಕ್‌ ಮುಷ್ಕರ

06:10 AM Oct 08, 2017 | |

ಮುಂಬೈ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 13ರಂದು ಪೆಟ್ರೋಲಿಯಂ ಡೀಲರ್‌ಗಳು ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ.

Advertisement

ಡೀಲರ್‌ಗಳ ಸಂಘಟನೆಯಾಗಿರುವ ಯುನೈಟೆಡ್‌ ಪೆಟ್ರೋಲಿಯಂ ಫ್ರಂಟ್‌ ಶನಿವಾರ ಈ ಕುರಿತು ಮಾಹಿತಿ ನೀಡಿದೆ. “13ರಂದು ದೇಶಾದ್ಯಂತ ತೈಲ ಕಂಪನಿ ಡೀಲರ್‌ಗಳ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಉತ್ತಮ ಮಾರ್ಜಿನ್‌ ನೀಡಬೇಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದೇವೆ. ಇವು ಪೂರೈಸದಿದ್ದರೆ ಅಕ್ಟೋಬರ್‌ 27ರಿಂದ ಅನಿರ್ದಿಷ್ಟಾವಧಿವರೆಗೆ  ತೈಲ ಖರೀದಿ ಮತ್ತು ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತದೆ’ ಎಂದು ಸಂಘಟನೆ ತಿಳಿಸಿದೆ. ಯುನೈಟೆಡ್‌ ಪೆಟ್ರೋಲಿಯಂ ಫ್ರಂಟ್‌ ಅಡಿಯಲ್ಲಿ ಒಟ್ಟು 54,000 ಡೀಲರುಗಳಿದ್ದು, ಇವರೆಲ್ಲರೂ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಹಲವು ಬೇಡಿಕೆಯನ್ನು ಮುಂದಿಡಲಾಗಿತ್ತಾದರೂ ತೈಲ ಕಂಪನಿಗಳು ಇದನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿರುವ ಡೀಲರ್‌ಗಳು, ಪ್ರತಿ ತಿಂಗಳಿಗೆ ಡೀಲರ್‌ ಮಾರ್ಜಿನ್‌ ಹೆಚ್ಚಳ, ಹೂಡಿಕೆಗೆ ಸೂಕ್ತ ಲಾಭ, ಮಾನವ ಸಂಪನ್ಮೂಲ ಸಮಸ್ಯೆಗಳ ಪರಿಹಾರ, ನಷ್ಟ ನಿರ್ವಹಣೆ ಅಧ್ಯಯನ ಹಾಗೂ ಸಾರಿಗೆ ಮತ್ತು ಎಥೆನಾಲ್‌ ಮಿಶ್ರಣಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next