ವಿಧಾನಸಭೆ: ರಾಜ್ಯದಲ್ಲಿನ ರೈತರ 50 ಸಾವಿರ ರೂ. ವರೆಗಿನ ಕೃಷಿ ಸಾಲ ಮನ್ನಾ ಯೋಜನೆಗೆ 409 ಕೋಟಿ ರೂಪಾಯಿ ಅನುದಾನ ನೀಡುವುದೂ ಸೇರಿದಂತೆ ಒಟ್ಟು 5351.49 ಕೋಟಿ ರೂ.ಗಳ ವೆಚ್ಚದ ಪೂರಕ
ಅಂದಾಜುಗಳನ್ನು ಸದನದಲ್ಲಿ ಮಂಡಿಸಲಾಗಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.
ಕೆ.ಪಾಟೀಲ್ ಪೂರಕ ಅಂದಾಜುಗಳನ್ನು ಮಂಡಿಸಿ, ಇದು ಮೂರನೆಯ ಹಾಗೂ ಈ ಹಣಕಾಸು ವರ್ಷದ ಅಂತಿಮ ಕಂತಾಗಿದೆ ಎಂದು ಹೇಳಿದರು.
5351 ಕೋಟಿ ರೂಪಾಯಿ ವೆಚ್ಚದ ಈ ಪೂರಕ ಅಂದಾಜಿನಲ್ಲಿ ಅಂಬೇಡ್ಕರ್ ನಿವಾಸ್ ಯೋಜನೆಗೆ 134 ಕೋಟಿ ರೂ., ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ದುರಸ್ಥಿಗೆ 26 ಕೋಟಿ ರೂ., ಶ್ರವಣಬೆಳಗೊಳದ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ 15 ಕೋಟಿ ರೂ., ಪ್ರವಾಸೋದ್ಯಮ ಪ್ರಚಾರಕ್ಕೆ 15 ಕೋಟಿ ರೂ.,ವಿಧಾನಸಭೆ ಚುನಾವಣೆ ಭದ್ರತೆಗೆ 11.45 ಕೋಟಿ ರೂ. ಸೇರಿದಂತೆ ಒಟ್ಟು 29 ವಿವಿಧ ಇಲಾಖೆಗಳ ಹೆಚ್ಚುವರಿ ವೆಚ್ಚಕ್ಕೆ 5351 ಕೋಟಿ ರೂ.
ಬಳಕೆ ಮಾಡಲು ಸದನದ ಅನುಮೋದನೆಯನ್ನು ಕೋರಲಾಗಿದೆ.