ಮುಂಬೈ: ಅಪ್ರಾಪ್ತೆಯನ್ನು ಮದುವೆಯಾಗಿ ಹಾಗೂ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಪೋಸ್ಕೋ ಕಾಯ್ದೆ ಅಡಿ ಬಾಂಬೆ ಹೈಕೋರ್ಟ್ ವಕೀಲರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
15ವರ್ಷದ ಮಗಳ ತಂದೆಯಾಗಿರುವ 53 ವರ್ಷದ ಬಾಂಬೆ ಹೈಕೋರ್ಟ್ ವಕೀಲ ತನ್ನ ಮಗಳಷ್ಟೇ ಪ್ರಾಯದ ಬಾಲಕಿಯನ್ನು 2015ರಲ್ಲಿ ಮದುವೆಯಾಗಿರುವುದಾಗಿ ವರದಿ ತಿಳಿಸಿದೆ.
ಕಳೆದ ವಾರ ಪೊಲೀಸರು ವಕೀಲರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಶೇಷ ಕೋರ್ಟ್ ಗುರುವಾರ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿತ್ತು.
ಬಾಲಕಿಯ ಅಜ್ಜ, ಅಜ್ಜಿಯೇ ಬಲವಂತವಾಗಿ ಮದುವೆ ಮಾಡಿಸಿದ್ದು, ಅವರನ್ನೂ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ವಕೀಲರ ಮೊದಲ ಪತ್ನಿ 2014ರಲ್ಲಿ ಸಾವನ್ನಪ್ಪಿದ್ದ ಬಳಿಕ ಅಪ್ರಾಪ್ತೆ ಬಾಲಕಿಯನ್ನು ಮದುವೆಯಾಗಿದ್ದರು.
ಇದೀಗ 17 ವರ್ಷವಾಗಿರುವ ಬಾಲಕಿ ಆತನ ವಿರುದ್ಧ ಡಿಸೆಂಬರ್ 13ರಂದು ದೂರು ದಾಖಲಿಸಿರುವುದಾಗಿ ವರದಿ ವಿವರಿಸಿದೆ.
ಬಾಲಕಿಯ ತೀವ್ರ ವಿರೋಧದ ನಡುವೆಯೂ ಅಜ್ಜ, ಅಜ್ಜಿ 53ವರ್ಷದ ವಕೀಲನ ಜತೆ ಮದುವೆ ಮಾಡಿಸಿದ್ದರು. ಅಷ್ಟೇ ಅಲ್ಲ ಆಕೆಯ ವಿರೋಧದ ನಡುವೆಯೂ ಬಾಲಕಿಗೆ ಲೈಂಗಿಕವಾಗಿ ಹಿಂಸೆ ನೀಡಿರುವುದಾಗಿ ಆರೋಪಿಸಿದ್ದಾಳೆ.