Advertisement

ಮಂಗಳೂರು ವಿ.ವಿ.ಯಲ್ಲಿ 53 ಅಫ್ಘಾನ್‌ ವಿದ್ಯಾರ್ಥಿಗಳು!

01:40 AM Aug 18, 2021 | Team Udayavani |

ಮಂಗಳೂರು: ಅಫ್ಘಾನಿಸ್ಥಾನವು ತಾಲಿಬಾನ್‌ ಉಗ್ರರ ಕೈವಶ ವಾಗುತ್ತಿದ್ದಂತೆ ಅಲ್ಲಿ ಅಸ್ಥಿರತೆ ಮನೆ  ಮಾಡಿದ್ದರೆ, ಇತ್ತ ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಅಫ್ಘಾನಿ ಸ್ಥಾನದ ವಿದ್ಯಾರ್ಥಿಗಳು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

Advertisement

ಪದವಿಯಲ್ಲಿ 18, ಸ್ನಾತಕೋತ್ತರ ಪದವಿಯಲ್ಲಿ 13, ಪಿಎಚ್‌ಡಿಯಲ್ಲಿ 22 ವಿದ್ಯಾರ್ಥಿಗಳು ಶಿಕ್ಷಣ ಪಡೆಯು ತ್ತಿದ್ದು, ಹಾಸ್ಟೆಲ್‌ಗ‌ಳಲ್ಲಿದ್ದಾರೆ. ಇವರು 2-3 ವರ್ಷದ ಹಿಂದೆ ಮಂಗಳೂರಿಗೆ ಶಿಕ್ಷಣಕ್ಕಾಗಿ ಬಂದಿದ್ದರು. ತಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬ  ಬಗ್ಗೆ ಮಾಧ್ಯಮಗಳ ಮೂಲಕ / ಮೊಬೈಲ್‌ ಕರೆ ಮಾಡಿ ವಿಚಾರಿಸುತ್ತಿ ರುವ ದೃಶ್ಯ ಕಂಡು ಬರುತ್ತಿದೆ. ಕೆಲವು ವಿದ್ಯಾರ್ಥಿಗಳು ದೇಶದ ಪರಿಸ್ಥಿತಿ ಹಾಗೂ ಮನೆ ಮಂದಿಯ ಸಮಸ್ಯೆ-  ಸವಾಲುಗಳನ್ನು ಕೇಳಿ ಕಣ್ಣೀರಿಡುತ್ತಿ ದ್ದಾರೆ. ಪ್ರಾಧ್ಯಾಪಕರು, ಸಹಪಾಠಿಗಳ ಜತೆಗೆ ನೋವು ತೋಡಿಕೊಳ್ಳುತ್ತಿದ್ದಾರೆ.

ಮಾತಿಗೆ ನಿರಾಕರಣೆ! :

“ಗಂಭೀರ ಹಾಗೂ ಸೂಕ್ಷ್ಮ ವಿಚಾರ ಇದು’ ಎಂಬ ಕಾರಣ ನೀಡಿ ಮಾಧ್ಯಮದ ಜತೆಗೆ ಮಾತನಾಡಲುಅಫ್ಘಾನ್‌ ವಿದ್ಯಾರ್ಥಿ ಗಳು ನಿರಾಕರಿಸಿ ದ್ದಾರೆ. ಒಮ್ಮೆ ಮಾತ ನಾಡುವ ಧೈರ್ಯ ತೋರಿದರೂ ಬಳಿಕ “ತಮ್ಮ ಹೇಳಿಕೆ ಯಿಂದ ಅಲ್ಲಿ ಮನೆ ಮಂದಿಗೆ ಸಮಸ್ಯೆ ಆದರೆ?’ ಎಂಬ ಆತಂಕದಿಂದ ಪ್ರತಿಕ್ರಿಯಿಸಲು ಹಿಂಜರಿದರು.

ಕುಲಪತಿ ಪ್ರೊ| ಪಿ.ಎಸ್‌. ಯಡಪಡಿ ತ್ತಾಯ ಅವರು “ಉದಯವಾಣಿ’ ಜತೆಗೆ ಮಾತನಾಡಿ, ವಿ.ವಿ.ಯಲ್ಲಿ 35 ದೇಶಗಳ 147 ವಿದ್ಯಾರ್ಥಿಗಳು ಭಾರತ  ಸರಕಾರದ ಸ್ಕಾಲರ್‌ಶಿಪ್‌ ಅನುಕೂಲ ದಿಂದ ಉನ್ನತ ಶಿಕ್ಷಣ ಪಡೆಯುತ್ತಿ ದ್ದಾರೆ. ಅವರ ಶಿಕ್ಷಣಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸದ್ಯ ಅಫ್ಘಾನಿಸ್ಥಾನ ದಲ್ಲಿ ಸಮಸ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳು ಕೊಂಚ  ಆತಂಕದಲ್ಲಿದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ವಿ.ವಿ. ಸರ್ವ ವ್ಯವಸ್ಥೆ ಮಾಡಲಿದೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next