Advertisement
ಹುಡುಗನ ಬಲ ಬದಿಯ ದವಡೆ ಊದಿಕೊಂಡಿತ್ತು. ತೀವ್ರವಾದ ನೋವಿನಿಂದಲೂ ಬಳಲುತ್ತಿದ್ದ. ಕೊನೆಗೆ ಆಸ್ಪತ್ರೆಗೆ ತೆರಳಿ ನೋವಿನ ಪರೀಕ್ಷೆ ನಡೆಸಿದಾಗ ಬಾಯಿಯಲ್ಲಿ 526 ಹಲ್ಲುಗಳು ಇರುವ ಸಂಗತಿ ಬೆಳಕಿಗೆ ಬಂದಿದ್ದು, ಇದು ನೋವಿಗೆ ಕಾರಣ ಎಂದು ತಿಳಿದುಬಂದಿದೆ. “ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ…’ ಎಂಬ ಅಪರೂಪದ ಖಾಯಿಲೆ ಇದಾಗಿದೆ.
ಹುಡುಗ ಮೂರು ವರ್ಷದವನಿರುವಾಗಲೇ ಬಾಯಿ ಊದಿಕೊಂಡಿತ್ತು. ಆದರೆ ಬಾಲಕನ ಪೋಷಕರು ಬಾಲಕನ ಬಾಯಿಯ ಬಾವಿನ ಕುರಿತಾಗಿ ಅಷ್ಟೊಂದು ತಲೆ ಕಡೆಸಿಕೊಂಡಿರಲಿಲ್ಲ. ಬಾಯಿಯನ್ನು ಪರೀಕ್ಷಿಸಲು ಮುಂದಾದಾಗ ಪುಟ್ಟ ಬಾಲಕ ನೋವಿನಿಂದ ಜೋರಾಗಿ ಅಳುತ್ತಿದ್ದ. ಹೀಗಾಗಿ ಪೋಷಕರು ಅದನ್ನು ಗುಣ ಪಡಿಸುವತ್ತ ಮನಸ್ಸು ಮಾಡಲಿಲ್ಲ. ಆದರೆ ಕ್ರಮೆಣ ಬಾವು ಹೆಚ್ಚಾಗುತ್ತಿದ್ದಂತೆ ಪೋಷಕರು ಎಚ್ಚೆತ್ತುಕೊಂಡಿದ್ದಾರೆ.
ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ ಕೆಳಭಾಗದ ಬಲ ದವಡೆಯಲ್ಲಿ ಹಲ್ಲುಗಳು ಹೆಚ್ಚಿರುವುದು ಪತ್ತೆಯಾಗಿದೆ. ಬಾಲಕನಿಗೆ ಅರಿವಳಿಕೆ (ಅನಸ್ತೇಶಿಯಾ) ನೀಡಿ ದವಡೆಯನ್ನು ತೆರೆಯಲಾಯಿತು. ಅಲ್ಲಿ ಸುಮಾರು 200 ಗ್ರಾಂ. ತೂಕವಿರುವ ಒಂದು ಹಲ್ಲಿನ ಬ್ಯಾಗ್ ಪತ್ತೆಯಾಗಿತ್ತು. ಬಳಿಕ ಅವುಗಳನ್ನು ಹೊರ ತೆಗೆಯಲಾಗಿದೆ. ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ 526 ಹಲ್ಲುಗಳು ಅದರಲ್ಲಿದ್ದವು.
Related Articles
Advertisement
ಮುತ್ತಿನಾಕಾರದ ಹಲ್ಲುಗಳುಅಪರೇಶನ್ ಮೂಲಕ ಹಲ್ಲುಗಳನ್ನು ಹೊರ ತೆಗೆಯಲು ಸುಮಾರು 5 ಗಂಟೆಯನ್ನು ಡಾ| ಪಿ. ಸೆಂದಿಲ್ನಾಥನ್ ಮತ್ತು ತಂಡ ತೆಗೆದುಕೊಂಡಿದೆ. ಹೊರತೆಗೆಯಾದ ಹಲ್ಲುಗಳು ಮುತ್ತಿನ ಆಕಾರದಲ್ಲಿದ್ದವು. ಬಾಲಕ ಈಗ ಸಹಜಸ್ಥಿಗೆ ಮರಳಿದ್ದಾನೆ. ವೈದ್ಯರು ಯಾವುದೇ ಶುಲ್ಕವಿಲ್ಲದೆ 7 ವರ್ಷದ ಬಾಲಕ ರವೀಂದ್ರನಾಥ್ ಮತ್ತು ಅವರ ಕುಟುಂಬವನ್ನು ಮನೆಗೆ ಕಳುಹಿಸಿದ್ದಾರೆ.