Advertisement

520 ಮನೆಗಳ ನಿರ್ಮಾಣ ಕಾಮಗಾರಿಗೆ ಡಾ.ಜಿ. ಪರಮೇಶ್ವರ್ ಶಂಕುಸ್ಥಾಪನೆ

07:14 PM May 20, 2022 | Team Udayavani |

ಕೊರಟಗೆರೆ: ಕೊಳಗೇರಿ ನಿವಾಸಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಜಿ ಪರಮೇಶ್ವರ್ ತಿಳಿಸಿದರು.

Advertisement

ಪಟ್ಟಣದ ೪ನೇ ವಾರ್ಡ್ ನ ಗಿರಿನಗರದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ.ಪಂ ವ್ಯಾಪ್ತಿಯಲ್ಲಿ ಬರುವ ಘೋಷಿತ ಕೊಳೆಗೇರಿ ಪ್ರದೇಶದಲ್ಲಿ ಸುಮಾರು 33.80 ಕೋಟಿ ವ್ಯೆಚ್ಚದಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ 520 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಕೊಳಗೇರಿಯಲ್ಲಿ 82 ಲಕ್ಷ ರೂ ಮೌಲ್ಯದ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಮೂಲಭೂತ ಸೌರ‍್ಯವಿಲ್ಲದೇ ಕೊಳಗೇರಿ ಪ್ರದೇಶಗಳಲ್ಲಿ ಜನರು ವಾಸಿಸುತ್ತಿದ್ದಾರೆ ಅಂತಹ ಪ್ರದೇಶಗಲ್ಲಿ ಅವರಿಗೆ ಮೂಲಭೂತ ಸೌಕರ್ಯ ಒದಗಿಸಿ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕಾದ ಕರ್ತವ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳದ್ದಾಗಿದೆ, ಕೊರಟಗೆರೆ ಪಟ್ಟಣದಲ್ಲಿ ಸರ್ಕಾರದಿಂದ ವಿಶೇಷವಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ೫೨೦ ಮನೆಗಳನ್ನು ಮಂಜೂರು ಮಾಡಿಸಲಾಗಿದೆ, ಇದರದಲ್ಲಿ ಯಾವುದೇ ಲೋಪದೋಶವಿಲ್ಲದೇ ಅರ್ಹ ಫಲನುಭವಿಗಳಿಗೆ ಮನೆಗಳನ್ನು ನಿರ್ಮಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಈ ಮನೆಗಳನ್ನು6.5 ಲಕ್ಷ ಅನುಧಾನದಲ್ಲಿ ನಿರ್ಮಿಸಲಾಗುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ೫೦ ರಷ್ಟು ಹಣ ನೀಡಲಿದ್ದು ಎಸ್‌ಸಿ/ಎಸ್‌ಟಿ ಗೆ 2 ಲಕ್ಷ, ಇತರೆ 1.20 ಲಕ್ಷ ಅನುಧಾನ ನೀಡಲಿದೆ ಉಳಿದ ಹಣವನ್ನು ವಂತಿಕೆ ರೂಪದಲ್ಲಿ ಫಲಾನುಭವಿಗಳಿಂದ ಬ್ಯಾಂಕ್ ನಿಂದ ಸರ್ಕಾರ ಪಡೆದು ೨೦ ವರ್ಷಗಳ ಕಾಲ ಕಂತುಗಳ ರೂಪದಲ್ಲಿ ಮರುಪಾವತಿ ಮಾಡಲು ಸಮಯ ನೀಡಲಾಗುತ್ತಿದೆ ಎಂದರು.

ಪ್ರಸ್ತುತ 720 ಮನೆಗಳಲ್ಲಿ ಪರಿಶಿಷ್ಟ ಜಾತಿಗೆ 172,, ಪರಿಶಿಷ್ಟ ಪಂಗಡಕ್ಕೆ57, ಅಲ್ಪಸಂಖ್ಯಾತರಿಗೆ ೧೯೨, ಹಿಂದುಳಿದ ವರ್ಗಕ್ಕೆ 76, ಸಮಾನ್ಯ ವರ್ಗಕ್ಕೆ 23 ಮನೆಗಳನ್ನು ಯೋಜನೆಯಲ್ಲಿ ಕಟ್ಟಿಸಿಕೊಡಲಾಗುವುದು, ಕೊಳಗೇರಿ ಪ್ರದೇಶಗಳಲ್ಲಿ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲು ವಿಶೇಷ ಕಾಳಜಿ ವಹಿಸಲಾಗುವುದು, ಇದರೊಂದಿಗೆ ವಸತಿ ಸಚಿವ ವಿ. ಸೋಮಣ್ಣನವರ ಸಹಕಾರದಿಂದ ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ೩ ಸಾವಿರ ಆಶ್ರಯ ಯೋಜನೆ ಮನೆಗಳನ್ನು ಹೆಚ್ಚುವರಿಯಾಗಿ ವಿಶೇಷ ಯೋಜನೆಯಡಿ ಮಂಜೂರು ಮಾಡಿಸಿಕೊಂಡಿದ್ದು ಪ್ರತೀ ಗ್ರಾ.ಪಂ ಗೆ ಭೇಟಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಮಾಡಿ ವೈಯಕ್ತಿಕವಾಗಿ ತಾವೇ ಪರಿಶೀಲಸಿ ವಿತರಿಸುತ್ತಿರುವುದಾಗಿ ತಿಳಿಸಿದರು.

ಕೊರಟಗೆರೆ ಪಟ್ಟಣದ ಪ್ರಧಾನ ರಸ್ತೆಯ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣಕ್ಕೆ ನಾನು ಸಂಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ೧೦ ಕೋಟಿ ರೂಗಳನ್ನು ಮಂಜೂರು ಮಾಡಿಸಿದ್ದೆ ಆದರೆ ನಂತರ ಬಂದ ಬಿಜೆಪಿ ಸರ್ಕಾರ ಇದನ್ನು ತಡೆಹಿಡಿದಿದ್ದು, ಪುನಃ ಸಂಬAದಪಟ್ಟ ಮಂತ್ರಿಗಳ ಬಳಿ ಹೋಗಿ ಹಣವನ್ನು ಮರು ಮಂಜೂರು ಮಾಡಿಸಲಾಯಿತು, ಈಗ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ನಡೆಯುತ್ತಿದೆ, ಸರ್ಕಾರವು ಗುತ್ತಿಗೆದಾರರಿಗೆ ನಿಯಮದ ಪ್ರಕಾರ ಹಣ ನೀಡದೇ ಕೆಲಸ ಸ್ವಲ್ಪ ನಿಧಾನವಾಗಿದೆ ಆದರೆ ಇಷ್ಟೆಲ್ಲಾ ತಿಳಿದಿರುವ ಕೆಲವು ಈ ವಿಚಾರದ ಬಗ್ಗೆ ಟೀಕೆಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದು ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಜನರ ಸೇವೆ ಮತ್ತು ಕ್ಷೇತ್ರದ ಅಭಿವೃದ್ದಿಯೇ ನಮ್ಮ ಕೆಲಸ ಎಂದರು.

Advertisement

ಕಾರ್ಯಕ್ರಮದಲ್ಲಿ ಪ.ಪಂ ಅಧ್ಯಕ್ಷೆ ಕಾವ್ಯ ರಮೇಶ್, ಉಪಾಧ್ಯಕ್ಷ ಭಾರತಿ ಸಿದ್ದಮಲ್ಲಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜ್, ಮುಖ್ಯಾಧಿಕಾರಿ ಭಾಗ್ಯಮ್ಮ,ಸದಸ್ಯರಾದ ಎ.ಡಿ ಬಲರಾಯ್ಯ, ಕೆ.ಆರ್ ಓಬಳರಾಜು, ನಾಗರಾಜು, ನಂದೀಶ್, ಕೆ.ಎನ್ ಲಕ್ಷ್ಮೀ ನಾರಾಯಣ್, ಪುಟ್ಟನರಸಯ್ಯ, ಪ್ರದೀಪ್ ಕುಮಾರ್, ರಂಗನಾಥ್, ಪ್ರೇಮಕುಮಾರ್, ಗೋವಿಂದರಾಜು, ಆಶ್ರಯ ಕಮಿಟಿ ಸದಸ್ಯರಾದ ದಿನೇಶ್ ಕುಮಾರ್,ನಂಜುAಡಶೆಟ್ಟಿ, ಶಭೀರ್ ಅಹಮದ್, ಸವಿತ, ಕೊಳಗೇರಿ ನಿಮಗದ ಮಂಡಳಿ ಇಇ ರವಿಕುಮಾರ್, ಎಇಇ ಲೋಕಶ್ವರಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವಥನಾರಾಯಣ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಮ್ಮ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿತ ಮುಖಂಡರಾದ ಚಂದ್ರಶೇಖರ್ ಗೌಡ, ಮಹಮದ್ ಇಸ್ಮಾಯಿಲ್, ಮುಕ್ತಿಯಾರ್ ಸೇರಿದಂತೆ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next