Advertisement
ಇಂದು ಒಂದೇ ದಿನ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಅರ್ಧ ಶತಕದ ಗಡಿ ದಾಟಿದೆ.
Related Articles
Advertisement
ಇದನ್ನೂ ಓದಿ: ಕೋವಿಡ್ 19 ಕಳವಳ-ಆಗಸ್ಟ್ 03: 4752 ಹೊಸ ಪ್ರಕರಣಗಳು ; 4776 ಡಿಸ್ಚಾರ್ಜ್ ; 98 ಸಾವು
ಕೊಳ್ಳೇಗಾಲ ಪಟ್ಟಣದ 57 ವರ್ಷದ ಮಹಿಳೆ ಭಾನುವಾರ ಮೃತಪಟ್ಟಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ಆದರೆ ಅವರು ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಮರಣಾನಂತರ ಕೋವಿಡ್ 19 ಪರೀಕ್ಷೆ ಮಾಡಿದಾಗ ಆಕೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಚಾಮರಾಜನಗರ ಪಟ್ಟಣದ ನಿವಾಸಿ 65 ವರ್ಷದ ವೃದ್ಧರೊಬ್ಬರು ಭಾನುವಾರ ಕೋವಿಡ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಆ.2ರಂದು ಮೃತಪಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನೊಂದು ಸಾವಿನ ವಿವರ ಇಲ್ಲ: ಸೋಮವಾರ ಕೋವಿಡ್ 19 ಶಿಷ್ಟಾಚಾರದ ಪ್ರಕಾರ ಎರಡು ಶವಗಳ ಸಂಸ್ಕಾರವನ್ನು ಪಿಎಫ್‌ಐ ಕಾರ್ಯಕರ್ತರು ನಗರದ ಖಬರಿಸ್ತಾನ್ ನಲ್ಲಿ ನೆರವೇರಿಸಿದರು. ಆದರೆ ಜಿಲ್ಲಾಡಳಿತದ ಬುಲೆಟಿನ್‌ನಲ್ಲಿ ಭಾನುವಾರದ 1 ಸಾವು ಹಾಗೂ ಇಂದಿನ 1 ಸಾವು ಹಾಗೂ ಯಳಂದೂರಿನಲ್ಲಿ ಜು. 31ರ ಮಧ್ಯರಾತ್ರಿ ಮೃತಪಟ್ಟಿದ್ದ ಪ್ರಕರಣದ ವಿವರವನ್ನು ಇಂದು ನೀಡಲಾಗಿದೆ. ಯಳಂದೂರು ಪ್ರಕರಣವನ್ನು ಕೋವಿಡ್ ದೃಢೀಕೃತ ಆದರೆ ಬೇರೆ ಕಾರಣದಿಂದ ಸಂಭವಿಸಿದ ಸಾವು ಎಂದು ನಮೂದಿಸಲಾಗಿದೆ.
ಸೋಮವಾರ ಕೊಳ್ಳೇಗಾಲ ಪಟ್ಟಣದ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಸಾವಿನ ಪ್ರಕರಣವನ್ನು ಬುಲೆಟಿನ್‌ನಲ್ಲಿ ನಮೂದಿಸಿಲ್ಲ.