ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲ್ಲೂಕಿನ 34 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಸರ್ವೆ ನಡೆಸಿ ತೆರವು ಮಾಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್ ತಿಳಿಸಿದರು.
ತಾಲ್ಲೂಕಿನ ಜೋಗನಹಳ್ಳಿ, ಬೆಟ್ಟದಪುರ, ಅನಿವಾಳು, ಹರದೂರು, ಮಾಕೋಡು, ಕೆಲ್ಲೂರು ಬೆಕ್ಯಾ ಗ್ರಾಮಗಳಲ್ಲಿ ಒತ್ತುವರಿ ಕಾರ್ಯಚರಣೆ ನಡೆಸಿ ಜೋಗನಹಳ್ಳಿ ಗ್ರಾಮದಲ್ಲಿ ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕರು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಗ್ರಾಮಸ್ತರು ಕೆರೆಕಟ್ಟೆಗಳ ಒತ್ತುವರಿ ಹಾಗೂ ಜಮೀನಿಗೆ ತೆರಳುವ ರಸ್ತೆಗಳನ್ನು ಸರಿಪಡಿಸುವಂತೆ ದೂರು ನೀಡುತ್ತಿದ್ದರು. ಅಲ್ಲದೆ ಕೆಲವು ಪ್ರಭಾವಿಗಳು ಗ್ರಾಮಗಳಲ್ಲಿ ಕರೆಕಟ್ಟೆಗಳ ಮತ್ತು ಸ್ಮಶಾನಗಳು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಭೂ ಮಾಪನ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಇಲಾಖೆಗಳ ನೇತೃತ್ವದಲ್ಲಿ ಒತ್ತುವರಿ ಆಂದೋಲನ ಹಮ್ಮಿಕೊಂಡು ತಾಲ್ಲೂಕಿನ ಸುಮಾರು 52 ಕೆರೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಭುವನಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಬೆಕ್ಕರೆ ಮತ್ತು ಜೋಗನಹಳ್ಳಿಯಲ್ಲಿ ಸರ್ವೆ ಮಾಡಲಾಯಿತು.
ಇದನ್ನೂ ಓದಿ:ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವರ್ಗಾವಣೆ
ಈ ಸಂದರ್ಭದಲ್ಲಿ ಭೂಮಾಪನಾಧಿಕಾರಿ ರವೀಂದ್ರ, ಸಹಾಯಕ ಮಹದೇವ್, ಭುವನಹಳ್ಳಿ ಗ್ರಾ.ಪಂ. ಪಿ.ಡಿ.ಓ ಬಸವರಾಜು, ಲೆಕ್ಕ ಸಹಾಯಕ ಶ್ರೀನಿವಾಸ, ಗ್ರಾಮಲೇಕ್ಕಿಗ ವೀಕ್ಷೀತಾ, ಸಹಾಯಕ ಗೋಪಿ ಗ್ರಾಮಸ್ಥರಾದ ಆರ್.ವೆಂಕಟೇಶ್, ಸೋಮಣ್ಣ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.