Advertisement

ಜಾಗತಿಕವಾಗಿ ಟಾಪ್‌ ಶೇ.2 ವಿಜ್ಞಾನಿಗಳಲ್ಲಿ ಭಾರತೀಯರಿಗೂ ಸ್ಥಾನ

09:06 PM Oct 13, 2022 | Team Udayavani |

ನವದೆಹಲಿ: ವಿಶ್ವದ ಟಾಪ್‌ ವಿಜ್ಞಾನಿಗಳ ಪಟ್ಟಿ ಮಾಡುವ ಅಲ್ಫರ್‌ ಡಾಡ್ಜರ್‌(ಎಡಿ) ವೈಜ್ಞಾನಿಕ ಸೂಚ್ಯಂಕ 2023 ಬಿಡುಗಡೆಯಾಗಿದೆ. ಅದರಲ್ಲಿ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯ ಮೊದಲ ಶೇ.2 ಸ್ಥಾನಗಳಲ್ಲಿ ಭಾರತದ 52 ವಿಜ್ಞಾನಿಗಳಿದ್ದಾರೆ.

Advertisement

ಪಂಜಾಬ್‌ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾಗಿರುವ ಜೆ.ಬಿ.ಸಿಂಗ್‌ ಅವರು ಪಟ್ಟಿಯಲ್ಲಿರುವ ಭಾರತೀಯ ವಿಜ್ಞಾನಿಗಳ ಸಾಲಿನಲ್ಲಿ ಮೊದಲಿದ್ದಾರೆ. ಅವರ ನಂತರ ಮುಂಬೈನ ಭಾಭಾ ಆಟೋಮಿಕ್‌ ರಿಸರ್ಚ್‌ ಸೆಂಟರ್‌(ಬಿಎಆರ್‌ಸಿ)ನ ದೀಪಾನ್ವಿತ ದತ್ತಾ, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಫ‌ಂಡಮೆಂಟಲ್‌ ರಿಸರ್ಚ್‌(ಟಿಐಎಫ್ಆರ್‌)ನ ಗಗನ್‌ ಮೊಹಂತಿ, ಬಿಎಆರ್‌ಸಿಯ ಎ.ಕೆ.ಮೊಹಂತಿ, ಶೂಲಿನಿ ವಿಶ್ವವಿದ್ಯಾಲಯದ ಅನಿರ್ಬನ್‌ ಸಹಾ ಇದ್ದಾರೆ.

ಟಿಐಎಫ್ಆರ್‌, ಕೋಲ್ಕತದ ಇನ್‌ಸ್ಟಿಟ್ಯೂಟ್‌ ಆಫ್ ಕೆಮಿಕಲ್‌ ಟೆಕ್ನಾಲಜಿ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌, ವೇರಿಯೇಬಲ್‌ ಎನರ್ಜಿ ಸೈಕ್ಲೋಟ್ರಾನ್‌ ಸೆಂಟರ್‌ನ ತಲಾ 4 ವಿಜ್ಞಾನಿಗಳು ವಿಶ್ವದ ಟಾಪ್‌ ವಿಜ್ಞಾನಿಗಳ ಪಟ್ಟಿಯ ಶೇ.2 ಸ್ಥಾನದಲ್ಲಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next