Advertisement

52 ಚಿನ್ನದ ಬಿಸ್ಕತ್ತು ವಶ: ಇಬ್ಬರು ಮ್ಯಾನ್‌ಮಾರ್‌ ಪ್ರಜೆಗಳು ಅರೆಸ್ಟ್

12:33 PM May 10, 2018 | udayavani editorial |

ಐಜಾಲ್‌ : ಕಸ್ಟಮ್ಸ್‌ ಅಧಿಕಾರಿಗಳು ಮಿಜೋರಾಂ ನಲ್ಲಿ  ಇಬ್ಬರು ಮ್ಯಾನ್ಮಾರ್‌ ಪ್ರಜೆಗಳನ್ನು ಬಂಧಿಸಿ ಅವರ ಬಳಿ ಇದ್ದ  ಸುಮಾರು 2.69 ಕೋಟಿ ರೂ. ಮೌಲ್ಯದ 52 ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ತೆಗೆದುಕೊಂಡರು.  

Advertisement

ಕಸ್ಟಮ್ಸ್‌ ಅಧಿಕಾರಿಗಳು ತಮಗೆ ದೊರಕಿದ ಖಚಿತ ಮಾಹಿತಿಯನ್ನು ಅನುಸರಿಸಿ ಕಸ್ಟಮ್ಸ್‌ check gateನಲ್ಲಿ ಶಂಕಿತ ಕಾರನ್ನು ತಡೆದು ನಿಲ್ಲಿಸಿ ಶೋಧಿಸಿದಾಗ ಅದರೊಳಗಿದ್ದ ಇಬ್ಬರ ವ್ಯಕ್ತಿಗಳ ಬಳಿ 8 ಕಿಲೋ ತೂಕದ 52 ಚಿನ್ನದ ಬಿಸ್ಕತ್ತುಗಳಿದ್ದುದು ಪತ್ತೆಯಾಯಿತು ಎಂದು ಕಳ್ಳಸಾಗಣೆ ನಿಗ್ರಹ ದಳದ SP  ತಿಳಿಸಿದರು. 

ಬಂಧಿತ ಮ್ಯಾನ್‌ಮಾರ್‌ ಪ್ರಜೆಗಳನ್ನು ಡೇವಿಡ್‌ ಮುವಾನ್‌ಪಿ (23) ಮತ್ತು ಸೋಮ್‌ಖಾನ್‌ಕಾಪ್‌ (19) ಎಂದು ಗುರುತಿಸಲಾಗಿದೆ.ಇವರು ಮ್ಯಾನ್ಮಾರ್‌ನ ಸಾನಮಿಯು ಕಾಲ್ಪಿ ಮತ್ತು ತಹಾನ್‌ ಪ್ರದೇಶದ ನಿವಾಸಿಗಳೆಂದು ಗೊತ್ತಾಗಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next