Advertisement

ಗಾಂಧಿ ಶತಮಾನದ ತೋಟಕ್ಕೆ 51 ವರ್ಷ

12:33 PM Oct 02, 2020 | Suhan S |

ಕುದೂರು: ರಾಷ್ಟಪಿತ ಮಹಾತ್ಮ ಗಾಂಧೀಜಿಯ 100ನೇ ಜಯಂತಿ ಪ್ರಯುಕ್ತ ಮಾಗಡಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬೆಂಗಳೂರು ಮಂಗಳೂರು ರಸ್ತೆಯ ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್‌ ಬಳಿ 180 ಎಕರೆ ವಿಸ್ತೀರ್ಣದಲ್ಲಿ 1970 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ ಚಾಲನೆ ನೀಡಿದ್ದ ಸಪೋಟ ತೋಟ ಪ್ರಾರಂಭವಾಗಿ ಇಂದಿಗೆ 51 ವರ್ಷವಾಗಿದೆ.

Advertisement

ಗಾಂಧಿ ಶತಮಾನ ತೋಟ ಎಂದು ಹೆಸರಿಡಲು ಕಾರಣ, ಮಹಾತ್ಮ ಗಾಂಧೀಜಿಯ 100ನೇ ಜಯಂತಿ ಅಂಗವಾಗಿ ರಾಜ್ಯಾದ್ಯಂತ ಗಾಂಧೀಜಿ ಹೆಸರಲ್ಲಿ 100 ತೋಟಗಳನ್ನು ಪ್ರಾರಂಭಿಸಲಾಗಿತ್ತು. ಅದರಲ್ಲಿ ಮಾಗಡಿ ತಾಲೂಕಿನ ತಿಪ್ಪಸಂದ್ರದ ತೋಟವು ಒಂದು.

ಸಪೋಟ ಮರಗಳು: 180 ಎಕರೆ ಪ್ರದೇಶದಲ್ಲಿ ತೋಟದಲ್ಲಿ ಒಟ್ಟು625 ಸಪೋಟ ಮರಗಳಿದ್ದು, ಸುತ್ತ ನೋಡಿದ ಕಡೆಯೆಲ್ಲಾ. ಸಪೋಟ ಗಿಡಗಳೆ ಕಾಣ ಸಿಗುತ್ತವೆ. ವರ್ಷವಿಡೀ ಈ ಪ್ರದೇಶವು ಸಪೋಟ ಹಾಗು ಇತರೆ ಹಣ್ಣುಗಳಿಂದ ತುಂಬಿರುತ್ತದೆ. 1,750 ವಿವಿಧ ತಳಿಯ ಮಾವಿನ ಮರ, 200 ಸೀಬೆ ಗಿಡ, 100 ಹಲಸಿನ ಮರ, 100 ತೆಂಗಿನ ಮರ,100 ಗೋಡಂಬಿ ಗಿಡಗಳು ಈ ಪ್ರದೇಶದಲ್ಲಿ ಕಾಣ ಸಿಗುತ್ತವೆ.

ವಿದ್ಯಾರ್ಥಿಗಳು ಭೇಟಿ: ತೋಟಗಾರಿಕೆ ಕ್ಷೇತ್ರದಲ್ಲಿ ನರ್ಸರಿ ಸಸಿಗಳನ್ನು ತಯಾರಿಸಿ ರೈತರಿಗೆ ಉತ್ತಮ ತಳಿ ಹಣ್ಣಿನ ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಲಾಭ ದಾಯಕ ಕೃಷಿ ಮಾಡುವಲ್ಲಿ ಆಸಕ್ತರಾಗಿದ್ದಾರೆ. ಈ ತೋಟಗಾರಿಗೆ ಕ್ಷೇತ್ರಕ್ಕೆ ಕಾಲೇಜು ವಿದ್ಯಾರ್ಥಿಗಳು , ಆಸಕ್ತ ಯುವ ಸಮುದಾಯದಕೃಷಿಕರು ಭೇಟಿ ನೀಡಿ ಮಾರ್ಗದರ್ಶನ ಮತ್ತು ಸಲಹೆ ಪಡೆಯುತ್ತಾರೆ.

ಹಣ್ಣುಗಳ ಮಾರಾಟ: ಈ ಪ್ರದೇಶದಲ್ಲಿ ಬೆಳೆಯುವ ಸಪೋಟ ಹಣ್ಣುಗಳನ್ನು ಮೈಸೂರು , ಕೇರಳ , ತಮಿಳು ನಾಡು , ಮುಂಬೈ ಸೇರಿದದಂತೆ ಇತರೆ ಪ್ರದೇಶಗಳಿಗೆ ವ್ಯಾಪಾರಸ್ಥರು ಕೊಂಡೊಯ್ಯುತ್ತಾರೆ. ಮತ್ತು ಇಲ್ಲಿನ ಸಪೋಟ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗಾಂಧಿ ಶತಮಾನ ತೋಟಗಾರಿಕೆ 51 ವರ್ಷ ಪೂರೈಸುತ್ತಿರುವುದು ಸಂತೋ ಷದಾಯಕ. ತೋಟದಿಂದಕರ್ತವ್ಯದ ಜೊತೆ ಪರಿಸರ ಸೇವೆಯೂ ಆಗುತ್ತಿದೆ. ಸಿದ್ದರಾಜು, ಸಹಾಯಕ ತೋಟಗಾರಿಕಾ ನಿರ್ದೇಶಕರು ತಿಪ್ಪಸಂದ್ರ,

ತಿಪ್ಪಸಂದ್ರದ ಗಾಂಧೀ ಶತಮಾನದ ತೋಟ ಅಧ್ಯಯನಕ್ಕೆ ಸೂಕ್ತವಾದ ಸ್ಥಳವಾಗಿದೆ. ರಾಮು, ಉಪನ್ಯಾಸಕರು ಕುದೂರು

Advertisement

Udayavani is now on Telegram. Click here to join our channel and stay updated with the latest news.

Next